Karnataka Rain: ಮಳೆ ಆರ್ಭಟ ಇನ್ನೂ ನಿಂತಿಲ್ಲ, ಮತ್ತೆ ಸುರಿಯಲಿದೆ ಭರ್ಜರಿ ಮಳೆ!

ಮಳೆ... ಹಿಂಗಾರು ಮಳೆ ಅಬ್ಬರ ದಿನದಿಂದ ದಿನಕ್ಕೆ ಕಡಿಮೆ ಆಗಬೇಕು. ಆದರೆ ಈಗಿನ ಸ್ಥಿತಿ ನೋಡಿದರೆ ದಿನದಿಂದ ದಿನಕ್ಕೆ ಹಿಂಗಾರು ಮಳೆ ಅಬ್ಬರ ಜೋರಾಗುತ್ತಿದೆ. ಅದ್ರಲ್ಲೂ ಬೆಳೆಯನ್ನ ಉಳಿಸಿಕೊಳ್ಳಲು ರೈತರು ಇದೀಗ ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಿದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಸುರಿಯಲಿದೆ? ಹಿಂಗಾರು ಮಳೆ ಅಬ್ಬರಿಸುವ ನಮ್ಮ ಕರ್ನಾಟಕದ ಪ್ರದೇಶಗಳು ಯಾವುವು? ಬನ್ನಿ ತಿಳಿಯೋಣ.

ಚಂಡಮಾರುತದ ಸಮಸ್ಯೆ ಕಾರಣಕ್ಕೆ 2024 ರಲ್ಲಿ ಅಂದ್ರೆ ಪ್ರಸಕ್ತ ವರ್ಷ ಹಿಂಗಾರು ಮಳೆಯ ಅಬ್ಬರ ಬಲು ಜೋರಾಗಿದೆ. ಕಳೆದ ತಿಂಗಳು ಮಳೆಯ ಅಬ್ಬರಕ್ಕೆ ಜನ ದಸರಾ & ದೀಪಾವಳಿ ಹಬ್ಬ ಮಾಡುವುದಕ್ಕೂ ಪರದಾಡಿದರು. ಹೀಗಿದ್ದಾಗಲೇ ಮತ್ತೊಮ್ಮೆ ಮಳೆಯ ಭಯ ಶುರು ಆಗಿದೆ. ಶನಿವಾರ & ಭಾನುವಾರ ಸೇರಿದಂತೆ ಮುಂದಿನ 48 ಗಂಟೆಗಳ ಕಾಲ ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳು ಮಳೆಗೆ ಸಾಕ್ಷಿಯಾಗುವ ಮುನ್ಸೂಚನೆ ಇದೆ. ಹಾಗಿದ್ರೆ ಕರ್ನಾಟಕದಲ್ಲಿ ಈಗ ಮಳೆ ಬೀಳಲಿರುವ ಜಿಲ್ಲೆಗಳು ಯಾವುವು? ಮುಂದೆ ಓದಿ.

Heavy Rain Alert Has Been Given For 09Th Of October 2024

ಚಂಡಮಾರುತ ಭಯ.. ಮಳೆಯ ಕಾಟ...

ಅಷ್ಟಕ್ಕೂ ಮೊದಲೇ ಹೇಳಿದಂತೆ ಸೈಕ್ಲೋನ್ ಅಂದ್ರೆ ಚಂಡಮಾರುತ ಕಾರಣಕ್ಕೆ ಕರ್ನಾಟಕ ಇದೀಗ ನಲುಗಿ ಹೋಗಿದೆ. ಮಳೆ ಅಬ್ಬರ ಹೆಚ್ಚಾಗುತ್ತಿರುವ ಕಾರಣ ಜನರು ಕೂಡ ಚಿಂತೆಯಲ್ಲಿ ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ಬಂದಿದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಈಗ ಚಂಡಮಾರುತ ಮತ್ತೆ ಆಕ್ಟಿವ್ ಆಗಿರುವ ಕಾರಣ ಮಳೆಯ ಕಾಟ ಗ್ಯಾರಂಟಿ ಎನ್ನಲಾಗುತ್ತಿದೆ. ಇಷ್ಟೊತ್ತಿಗೆ ಕರ್ನಾಟಕದಲ್ಲಿ ಮಳೆ ಆರ್ಭಟ ನಿಲ್ಲಬೇಕಿತ್ತು. ಆದರೆ ಈಗಲೂ ಕರ್ನಾಟಕದಲ್ಲಿ ಹಿಂಗಾರು ಮಳೆ ಅಬ್ಬರಿಸುತ್ತಿದೆ.

ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಈಗ ಚಂಡಮಾರುತ ಮತ್ತೆ ಆಕ್ಟಿವ್ ಆಗಿರುವ ಕಾರಣ, ಇದೀಗ ಆ ಜಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ರಚನೆಯಾಗುತ್ತಿದೆ. ಹೀಗಾಗಿ ಮುಂದಿನ 2 ದಿನಗಳಲ್ಲೇ ಚಂಡಮಾರುತ ಪಶ್ಚಿಮ ಭಾಗಕ್ಕೆ ನಿಧಾನವಾಗಿ ತಮಿಳುನಾಡು ಹಾಗೂ ಶ್ರೀಲಂಕಾ ತೀರದ ಕಡೆಗೆ ಚಲಿಸುವ ಸಾಧ್ಯತೆ ದಟ್ಟವಾಗಿದ್ದು, ಇದರಿಂದಾಗಿ ಮತ್ತೆ ಭಾರಿ ಮಳೆಯ ಮುನ್ಸೂಚನೆ ಈಗ ಸಿಗುತ್ತಿದೆ. ಚಂಡಮಾರುತ ಚಲನೆ ಆಗ್ನೇಯ ಅರೇಬಿಯನ್ ಸಮುದ್ರ & ಅದರ ಪಕ್ಕದಲ್ಲೇ ಇದೆ, ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಹೀಗೆ, ಕರ್ನಾಟಕದ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸೋಮವಾರದ ನಂತರ ಅಂದ್ರೆ ನವೆಂಬರ್ 11ರ ನಂತರ ಭರ್ಜರಿ ಮಳೆಯಾಗುವ ಮುನ್ಸೂಚನೆ ಇದೆ. ಅಷ್ಟೇ ಅಲ್ಲದೆ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪ್ರದೇಶಗಳ ಮೇಲೂ ಮಳೆಯ ಎಂಟ್ರಿ ಆಗಲಿದೆ. ಬೆಂಗಳೂರಲ್ಲಿ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ & ಒಣ ಹವೆ ಇರಲಿದೆ. ಗರಿಷ್ಠ & ಕನಿಷ್ಠ ತಾಪಮಾನ 30 ° C ಮತ್ತು 19 ° C ಇರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+