Rain Alert: ಮಳೆ.. ಮಳೆ.. ಭಾರಿ ಮಳೆ ಸುರಿಯುವ ಬಗ್ಗೆ ಎಚ್ಚರಿಕೆ!
ಮಳೆ ಆರ್ಭಟ ಎಲ್ಲೆಲ್ಲೂ ಜೋರಾಗಿದ್ದು, ಎಲ್ಲಾ ಕಡೆಯೂ ಮಳೆ ಬಗ್ಗೆಯೇ ಚಿಂತೆ ಶುರುವಾಗಿದೆ. ಇದೇ ರೀತಿ ಮಳೆ ತನ್ನ ಆರ್ಭಟ ಮುಂದುವರಿಸಿದರೆ, ಬೆಳೆ ಉಳಿಸಿಕೊಳ್ಳಲು ಆಗಲ್ಲ ಅಂತಾ ಇದೀಗ ಅನ್ನದಾತ ರೈತರು ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯದಲ್ಲೇ ಮತ್ತೆ ಮಳೆ.. ಮಳೆ.. ಭಾರಿ ಮಳೆ ಸುರಿಯುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಭಾಗದಲ್ಲಿ ಭಾರಿ ಮಳೆ ಸುರಿಯಲಿದೆ? ಮುಂದೆ ಓದಿ.
ಮಳೆ.. ಮಳೆ.. ಮಳೆ.. ಎಲ್ಲಾ ಕಡೆ ಇದೀಗ ಬರೀ ಮಳೆಯ ಅಬ್ಬರ ಬಲು ಜೋರಾಗುತ್ತಾ ಸಾಗುತ್ತಿದೆ. ಮಳೆಯ ಅಬ್ಬರದ ಕಾರಣಕ್ಕೆ ಈಗಾಗಲೇ ಹಲವು ಅವಾಂತರಗಳು ಆಗಿ ಹೋಗಿದ್ದು, ಜನರು ತತ್ತರಿಸಿದ್ದಾರೆ. ಮುಂಗಾರು ಮಳೆ ನಂಬಿಕೊಂಡಿದ್ದ ರೈತರಿಗೆ ಖುಷಿಯಾಗಿದೆ. ಎಲ್ಲೆಲ್ಲೂ ಮಳೆಯ ಆರ್ಭಟ ಜೋರಾಗಿದ್ದು, ರೈತರು ಖುಷಿಯಾಗಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಭಾರಿ ಮಟ್ಟದಲ್ಲಿ ಮಳೆ ಸುರಿದು ರೈತರು ಕೂಡ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದ್ದಾರೆ. ಇಂತಹ ಸಮಯದಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 5 ಶನಿವಾರ ನಂತರ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ.

ಯಾವ ಯಾವ ಜಿಲ್ಲೆಯಲ್ಲಿ ಮಳೆ?
ಬೆಂಗಳೂರು ಸೇರಿ ಕರಾವಳಿ ಪ್ರದೇಶ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು ಸೇರಿದಂತೆ ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೇ ಸೋಮವಾರ & ಮಂಗಳವಾರ ತನಕ ಕೂಡ ಕರ್ನಾಟಕದಲ್ಲಿ ಭಾರಿ ಮಳೆ ಬೀಳುವ ಎಚ್ಚರಿಕೆ ಕೊಡಲಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಈ ವರುಣಾರ್ಭಟ ಹೆಚ್ಚಾಗಿದ್ದು, ಕನ್ನಡಿಗರ ರಾಜಧಾನಿ ಬೆಂಗಳೂರಿಗೆ ಕೂಡ ಮಳೆಯಿಂದ ಆಪತ್ತು ಗ್ಯಾರಂಟಿ ಎಂಬ ಮುನ್ನೆಚ್ಚರಿಕೆ ಸಿಕ್ಕಿದೆ.
ಈ ವರ್ಷ ಬೆಳೆಗೆ ನೀರು ಗ್ಯಾರಂಟಿ!
ಕರ್ನಾಟಕದ ಬೃಹತ್ ಡ್ಯಾಂಗಳ ಪೈಕಿ ಒಂದಾಗಿರುವ ಆಲಮಟ್ಟಿ, ಕೆಆರ್‌ಎಸ್, ತುಂಗಭದ್ರಾ ಸೇರಿದಂತೆ ಬಹುತೇಕ ಎಲ್ಲಾ ಡ್ಯಾಂಗಳು ಇದೀಗ ತುಂಬಿ ತುಳುಕುತ್ತಿವೆ. ಭಾರಿ ಮಳೆಯಾಗಿರುವ ಕಾರಣಕ್ಕೆ ಡ್ಯಾಂಗಳ ನೀರಿನ ಮಟ್ಟ ಇದೀಗ ಭರ್ಜರಿ ಏರಿಕೆ ಕಂಡಿದ್ದು, ಹೀಗಾಗಿ ಈ ವರ್ಷ ಕೂಡ ಬೆಳೆಗಳಿಗೆ ನೀರು ಗ್ಯಾರಂಟಿ ಆಗಿದೆ. ಇನ್ನೊಂದು ಕಡೆ ಮಳೆಗಾಲ ಮುಗಿಯಲು ಇನ್ನೂ 3-4 ತಿಂಗಳು ಬಾಕಿ ಇದ್ದು, ಮತ್ತಷ್ಟು ಮಳೆ ಸುರಿಯುವ ನಿರೀಕ್ಷೆ ಕೂಡ ಇದೆ. ಆದರೆ ಅತಿಯಾದ ಮಳೆಯಿಂದ ಬೆಳೆ ಹಾನಿ ಆಗದೇ ಇರಲಿ ದೇವರೇ, ಅಂತಾ ಅನ್ನದಾತ ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications