Heavy Rain: ಮಳೆ ಅಬ್ಬರ ಮತ್ತೆ ಶುರು, ಎಲ್ಲೆಲ್ಲಿ ಮಳೆ ಮತ್ತೆ ಶುರು?
ಮಳೆ ಅಬ್ಬರ ಕಡಿಮೆ ಆಗುತ್ತಿಲ್ಲ, ಮನುಷ್ಯರು ಪ್ರಕೃತಿ ಮೇಲೆ ತೋರಿಸಿದ ದೌರ್ಜನ್ಯ ಪರಿಣಾಮ ಇದೀಗ ಭಾರಿ ದೊಡ್ಡ ಅವಾಂತರ ಸೃಷ್ಟಿ ಆಗುತ್ತಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಯಾಕಂದ್ರೆ ಮಳೆಗಾಲ & ಬೇಸಿಗೆ ಕಾಲದ ವ್ಯತ್ಯಾಸ ಗೊತ್ತೇ ಇಲ್ಲದಂತೆ ಇದೀಗ ಮಳೆರಾಯ ತನ್ನ ಆರ್ಭಟ ತೋರಿಸುತ್ತಾ ಇದ್ದಾನೆ. ಇದನ್ನೆಲ್ಲಾ ನೋಡಿ ಕನ್ನಡಿಗರು ಕೂಡ ಬೇಸರ ಹೊರ ಹಾಕುತ್ತಿದ್ದು, ಮಳೆ ಅಬ್ಬರ ಯಾಕೆ ಇಷ್ಟೊಂದು? ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಮತ್ತಷ್ಟು ಪ್ರದೇಶಗಳಿಗೆ ಇದೀಗ ಭಾರಿ ಮಳೆ ಸುರಿಯುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ...
ಹೌದು, ಜುಲೈ 26 ಶನಿವಾರದಿಂದ ನಮ್ಮ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ರೀತಿ ಮುಂದಿನ 3 ದಿನಗಳ ಕಾಲ ಇನ್ನಷ್ಟು ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ನಮ್ಮ ಬೆಂಗಳೂರು ಸೇರಿದಂತೆ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಗ್ಯಾರಂಟಿ ಆಗಿದೆ. ಹೀಗೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು ಸೇರಿ ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಸನ, ಮಂಡ್ಯ, ಮೈಸೂರು, ರಾಮನಗರ & ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಭಾರಿ ಮಳೆ ಗ್ಯಾರಂಟಿ... ಇಂತಹ ಸಮಯದಲ್ಲೇ ಹಲವು ಜಿಲ್ಲೆ ಮತ್ತು ತಾಲೂಕಗಳಲ್ಲಿ ಇದೀಗ ಮುನ್ನೆಚ್ಚರಿಕೆ ವಹಿಸಲಾಗಿದೆ.

ತುಂಬಿ ತುಳುಕುತ್ತಿವೆ ಬಹುತೇಕ ಡ್ಯಾಂಗಳು
ಕರ್ನಾಟಕದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜೂನ್ ತಿಂಗಳಲ್ಲೇ ಈ ಬಾರಿ ಜಲಾಶಯಗಳು ಅಂದ್ರೆ ಡ್ಯಾಂಗಳು ತುಂಬಿ ತುಳುಕಲು ಶುರು ಮಾಡಿವೆ. ಈ ಕಾರಣ ರೈತರು ಹಾಗೂ ಕನ್ನಡ ನಾಡಿನ ಪ್ರಜೆಗಳು ಕೂಡ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಕುಡಿಯುವ ನೀರು ನೀಡುವ ಕೃಷ್ಣರಾಜ ಸಾಗರ ಅಂದ್ರೆ ನಮ್ಮ ಕೆಆರ್‌ಎಸ್ ಈಗ ಫುಲ್ ತುಂಬಿ ತುಳುಕುತ್ತಿದ್ದು, ಭಾರಿ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಹಾಗೇ ಆಲಮಟ್ಟಿ, ತುಂಗಭದ್ರಾ ಸೇರಿದಂತೆ ರಾಜ್ಯದ ದೊಡ್ಡ ದೊಡ್ಡ ಡ್ಯಾಂಗಳು ಭರ್ಜರಿಯಾಗಿ ಭರ್ತಿಯಾಗಿವೆ.
ಜುಲೈ 28 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ?
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ ತಿಂಗಳಲ್ಲಿ ಶಾಲಾ & ಕಾಲೇಜುಗಳಿಗೆ ಸಾಲು, ಸಾಲು ರಜೆ ಘೋಷಣೆ ಮಾಡಲಾಗಿದೆ. ಜುಲೈ 25 ಶುಕ್ರವಾರ & ಜುಲೈ 26 ಶನಿವಾರ ಸಾಲು ಸಾಲಾಗಿ ಶಾಲಾ & ಕಾಲೇಜುಗಳಿಗೆ ರಜೆ ನೀಡಿರುವ ಕಾರಣ ಭಾನುವಾರ ಕೂಡ ಸೇರಿ 3 ದಿನಗಳ ಕಾಲ ನಿರಂತರ ರಜೆ ಸಿಕ್ಕಂತೆ ಆಗಿದೆ. ಹೀಗಿದ್ದಾಗಲೇ, ಜುಲೈ 28 ಸೋಮವಾರ ಕೂಡ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೀಗ ದಟ್ಟವಾಗಿದೆ...












Click it and Unblock the Notifications