ಮಳೆ.. ಮಳೆ.. ಜುಲೈ 3 ಗುರುವಾರ ಬಳಿಕ ಭಾರಿ ಭರ್ಜರಿ ಮಳೆ ಫಿಕ್ಸ್! Rain Alert
ಮಳೆ ಆರ್ಭಟ ಜೋರಾಗಿದ್ದು, ಭಾರಿ ಮಳೆಯ ಕಾರಣಕ್ಕೆ ಜನರು ಕೂಡ ಕಳೆದ ಕೆಲವು ತಿಂಗಳಿಂದ ಹೊರ ಹೋಗಲು ಯೋಚನೆ ಮಾಡುವಂತೆ ಆಗಿತ್ತು. ಆದರೆ ಒಂದಷ್ಟು ಬ್ರೇಕ್ ತೆಗೆದುಕೊಂಡಿದ್ದ ಮಳೆರಾಯ ಈಗ ದಿಢೀರ್ ಮತ್ತೆ ಅಬ್ಬರಿಸಲು ಸಿದ್ಧನಾಗಿದ್ದಾನೆ. ಅದರಲ್ಲೂ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಹಾಗಾದ್ರೆ, ಮಳೆ ಸುರಿಯಲಿರುವ ಕರ್ನಾಟಕದ ಜಿಲ್ಲೆಗಳು ಯಾವುವು?
ಮಳೆ ಆರ್ಭಟ ಶುರು ಆಯ್ತು ಅಂದ್ರೆ ರೈತರು ಮತ್ತು ಕನ್ನಡಿಗರಿಗೆ ಸಿಕ್ಕಾಪಟ್ಟೆ ಖುಷಿ. ಯಾಕಂದ್ರೆ, ಮಳೆ ಇಲ್ಲದೆ ನೀರು ಇಲ್ಲ... ನೀರೇ ಇಲ್ಲದೆ ಜೀವನ ಸಾಗಲ್ಲ... ಹೀಗಿದ್ದಾಗ ಬೆಂಗಳೂರು ಮಹಾನಗರ ಕೂಡ ಕಾವೇರಿ ನೀರು ಆಶ್ರಯಿಸಿ ದಿನ ದೂಡುತ್ತಿದೆ. ಹೀಗಿದ್ದಾಗ ಭರ್ಜರಿಯಾಗಿ ಮಳೆ ಸುರಿದರೆ ಮಾತ್ರ ಒಂದಷ್ಟು ಖುಷಿ ಆಗುತ್ತದೆ. ಇಂತಹ ಸ್ಥಿತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ, 2023 ವರ್ಷದಲ್ಲಿ ಭೀಕರ ಬರ ಆವರಿಸಿತ್ತು. ಅಲ್ಲದೆ ಕನ್ನಡಿಗರು ತತ್ತರಿಸಿ ಹೋಗಿದ್ದರು. ಆದರೆ 2024 ವರ್ಷ ಪೂರ್ತಿ ಭರ್ಜರಿಯಾಗಿ ಮಳೆ ಸುರಿದಿತ್ತು, ಅದೇ ರೀತಿಯಾಗಿ 2025 ಆರಂಭ ಆಗುತ್ತಿದ್ದಂತೆ ಮಳೆಯ ಅಬ್ಬರ ಮತ್ತಷ್ಟು ಜೋರಾಗಿದೆ. ಇನ್ನು ಜುಲೈ 3 ಗುರುವಾರ ಬಳಿಕ ಭಾರಿ ಭರ್ಜರಿ ಮಳೆ ಫಿಕ್ಸ್ ಆಗಿದೆ!

ಮಳೆ.. ಮಳೆ.. ಎಲ್ಲೆಲ್ಲಿ ಮಳೆ?
ಕರ್ನಾಟಕದ ಬಹುತೇಕ ಎಲ್ಲಾ ಜಲಾಶಯಗಳು ಇದೀಗ ತುಂಬಿ ತುಳುಕುತ್ತಿದ್ದು, ಭಾರಿ ಮಳೆ ಹಿನ್ನೆಲೆಯಲ್ಲಿ ರೈತರು ಹಾಗೂ ಜನ ಸಾಮಾನ್ಯರು ಸಂಭ್ರಮಿಸುತ್ತಿದ್ದಾರೆ. ಇಂತಹ ಸಮಯದಲ್ಲೇ, ಮತ್ತಷ್ಟು ಮಳೆಯು ಸುರಿಯುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಆ ಪ್ರಕಾರ, ಕರ್ನಾಟಕದ ಮೂಲೆ ಮೂಲೆಯಲ್ಲೂ ಈಗ ಭಾರಿ ಭರ್ಜರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಹಲವು ಜಿಲ್ಲೆಗಳಿಗೆ ಎಚ್ಚರಿಕೆಯ ಸಂದೇಶ ಕೂಡ ರವಾನೆ ಮಾಡಲಾಗಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಮಳೆ.. ಮಳೆ.. ಮಳೆ... ಎಲ್ಲೆಲ್ಲೂ ಮಳೆಯ ಆರ್ಭಟ ಬಲು ಜೋರಾಗಿದ್ದು, ರೈತರು ಖುಷಿಯಾಗಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಭಾರಿ ಮಟ್ಟದಲ್ಲಿ ಮಳೆ ಸುರಿದು ರೈತರು ಕೂಡ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದ್ದಾರೆ. ಇಂತಹ ಸಮಯದಲ್ಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 2 ಬುಧವಾರ ನಂತರ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೀಗ ಸಿಕ್ಕಿದೆ. ಬೆಂಗಳೂರು ಸೇರಿದಂತೆ ಕರಾವಳಿ ಪ್ರದೇಶವಾದ, ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು ಸೇರಿ ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಇದರ ಜೊತೆ ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಜುಲೈ 2 ಬುಧವಾರ ನಂತರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ & ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿವ ಎಚ್ಚರಿಕೆ ನೀಡಲಾಗಿದೆ, ಕುಂದಾ ನಗರಿ ಬೆಳಗಾವಿ ಜಿಲ್ಲೆಯಲ್ಲೂ ಭಾರಿ ಮಳೆಯಾಗಲಿದೆಯಂತೆ. ಹೀಗಾಗಿ ಇದೀಗ ಹಲವು ಕಡೆಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವನ್ನ ಕೂಡ ಕೈಗೊಳ್ಳಲಾಗಿದೆ. ಮತ್ತೊಂದ್ಕಡೆ ಮಳೆ ಹಿನ್ನೆಲೆಯಲ್ಲಿ ಹಲವು ಭಾಗದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ.












Click it and Unblock the Notifications