Bengaluru House Rent Surges: ನಗರದ ಈ ಏರಿಯಾಗಳಲ್ಲಿ ಬಾಡಿಗೆ ಮನೆಗಳ ಡಿಮ್ಯಾಂಡ್ ಭಾರೀ ಹೆಚ್ಚಳ, ಕಾರಣವೇನು

Bengaluru House Rent Surges: ಬೆಂಗಳೂರಿನಲ್ಲಿ ಬಾಡಿಗೆಮನೆದಾರರು ಅಥವಾ ಬಾಡಿಗೆಗೆ ಇರುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವ ವಿಚಾರವು ಪದೇ ಪದೇ ಚರ್ಚೆ ಆಗುತ್ತಲ್ಲೇ ಇದೆ. ಕರ್ನಾಟಕ ಹಾಗೂ ಕೇಂದ್ರ ಸರ್ಕಾರವು ಬಾಡಿಗೆ ಮನೆಯವರ ರಕ್ಷಣೆಗಾಗಿ ಕೆಲವೊಂದು ನಿಯಮಗಳನ್ನು ರೂಪಿಸಿದೆಯಾದರೂ, ಇದು ಕಾರ್ಯರೂಪಕ್ಕೆ ಬಂದಿಲ್ಲ. ಬೆಂಗಳೂರಿನಲ್ಲಿ ಹಲವು ಮನೆ ಮಾಲೀಕರು ಹೆಚ್ಚಿನ ಬಾಡಿಗೆ ನಿಗದಿ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿಗೆ ಬರುವ ಹಲವರು ಬಾಡಿಗೆ ಮನೆ ಹುಡುಕುವುದಕ್ಕೆ ಸಾಹಸ ಮುಂದುವರಿಸಿದ್ದಾರೆ. ಪ್ರಮುಖ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚಾಗಿದೆ.

ಬೆಂಗಳೂರಲ್ಲಿ ಹೆಚ್ಚಾಗುತ್ತಿದೆ ಬಾಡಿಗೆ ಮನೆಗಳ ಡಿಮ್ಯಾಂಡ್

ಇನ್ನು ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಬಾಡಿಗೆ ಮನೆಗಳ ಡಿಮ್ಯಾಂಡ್ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ತೀವ್ರ ಜಿಗಿತ ಕಂಡಿದೆ, ಆದರೆ, ಇದರ ಹೊರತಾಗಿಯೂ ಬಾಡಿಗೆ ಮನೆಗಳ ಡಿಮ್ಯಾಂಡ್ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಬಾಡಿಗೆಗಳು ತ್ರೈಮಾಸಿಕದಲ್ಲಿ ಸುಮಾರು 10% ಜಿಗಿತ ಕಂಡಿವೆ ಮತ್ತು ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 16.4% ಹೆಚ್ಚಾಗಿದೆ. ನಗರದಲ್ಲಿ ಮನೆ ಬದಲಾಯಿಸಲು, ಬಾಡಿಗೆ ಒಪ್ಪಂದವನ್ನು ನವೀಕರಿಸಲು ಅಥವಾ ಕಚೇರಿಗೆ ಸಮೀಪದಲ್ಲಿ ಮನೆ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿರುವುದು ಹಾಗೂ ಕೆಲಸದ ಒತ್ತಡದ ನಡುವೆ ವೈಯಕ್ತಿಕವಾಗಿ ಮತ್ತು ಕುಟುಂಬಕ್ಕೆ ಸಮಯ ಕೊಡಬೇಕು ಎನ್ನುವ ಕಾರಣಕ್ಕೂ ಹಲವರು ಕಚೇರಿಯ ಸಮೀಪದಲ್ಲೇ ಕೆಲಸ ಹುಡುಕುತ್ತಿದ್ದಾರೆ. 2026ರಲ್ಲಿ ಮನೆ ಬಾಡಿಗೆಗೆ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

Bengaluru House Rent

ಬೆಂಗಳೂರಿನ ಈ ಭಾಗಗಳಲ್ಲಿ ಬಾಡಿಗೆ ಮನೆಗಳಿಗೆ ಭಾರಿ ಡಿಮ್ಯಾಂಡ್

ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಿಗೆ ಡಿಮ್ಯಾಂಡ್ ಇದೆ. ಆದರೆ ಕೆಲವೊಂದು ಪ್ರದೇಶಗಳಲ್ಲಿ ಭಾರೀ ಡಿಮ್ಯಾಂಡ್ ಇದೆ. ಮುಖ್ಯವಾಗಿ ಆಫೀಸ್‌ಗಳು, ಕೈಗಾರಿಕಾ ಪ್ರದೇಶಗಳ ಸಮೀಪ ಹಾಗೂ ಐಟಿ - ಬಿಟಿ ಕಂಪನಿಗಳು ಇರುವ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಿಗೆ ಭಾರೀ ಡಿಮ್ಯಾಂಡ್‌ ಇದೆ. ಅದರಲ್ಲಿ ವೈಟ್‌ಫೀಲ್ಡ್, ಸರ್ಜಾಪುರ ರಸ್ತೆ, ಮಾರತ್ತಹಳ್ಳಿ ಹಾಗೂ ಕೋರಮಂಗಲ ರಸ್ತೆಗಳು ಪ್ರಮುಖವಾಗಿವೆ. ಮ್ಯಾಜಿಕ್‌ಬ್ರಿಕ್ಸ್ ಬಾಡಿಗೆ ಸೂಚ್ಯಂಕ ವರದಿಯ ಪ್ರಕಾರ, ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಈ ಪ್ರದೇಶಗಳು ಬಲವಾದ ಬಾಡಿಗೆ ಬೇಡಿಕೆಯನ್ನು ದಾಖಲಿಸಿವೆ.

ಬೆಂಗಳೂರಲ್ಲಿ ಯಾವ ಪ್ರಾಪರ್ಟಿಯ ಬೆಲೆ ಹೆಚ್ಚಾಗಿದೆ ?

ಕಳೆದ ಒಂದು ವರ್ಷದ ಅವಧಿಯಲ್ಲಿ ಬೆಂಗಳೂರಿನಲ್ಲಿ ಮಧ್ಯಮ ಗಾತ್ರದ ಆಸ್ತಿಗಳ ಬೇಡಿಕೆ ಹೆಚ್ಚಾಗಿದೆ. 1,000-1,500 ಚದರ ಅಡಿ ಅಳತೆಯ ಮನೆಗಳ ಬಾಡಿಗೆ ಬೇಡಿಕೆಯ ಈ ತ್ರೈಮಾಸಿಕದಲ್ಲಿ 41% ರಷ್ಟಿದೆ. 500-1,000 ಚದರ ಅಡಿ ಅಳತೆಯ ಮನೆಗಳ ಪಾಲು ಶೇ. 34% ರಷ್ಟಿದೆ. ವಿಶೇಷವಾಗಿ ಬಾಡಿಗೆಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಪ್ರದೇಶಗಳಲ್ಲಿ ಪ್ರಾಪರ್ಟಿಗಳ ಮೌಲ್ಯವೂ ಸಹ ಹೆಚ್ಚಾಗುತ್ತಿದೆ. ಒಟ್ಟು ಬಾಡಿಗೆ ಬೇಡಿಕೆಯ 72% ರಷ್ಟಿರುವುದು ಮುಖ್ಯವಾಗಿ 2BHK ಮತ್ತು 3BHK ಮನೆಗಳಿಗೆ ಎಂದು ವರದಿಯು ಉಲ್ಲೇಖಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+