ಮಳೆ.. ಮಳೆ.. ಜುಲೈ 2 ಬುಧವಾರ ನಂತರ ಭಾರಿ ಭರ್ಜರಿ ಮಳೆ! Rain Alert

ಮಳೆ.. ಮಳೆ.. ಎಲ್ಲೆಲ್ಲೂ ಭಾರಿ ಭರ್ಜರಿ ಮಳೆ ಸುರಿಯುತ್ತಿದ್ದು, ಈಗಾಗಲೇ ಕರ್ನಾಟಕ ರಾಜ್ಯದ ಎಲ್ಲಾ ಡ್ಯಾಂ ಅಂದ್ರೆ ಕನ್ನಡಿಗರ ಜೀವನಾಡಿ ಜಲಾಶಯಗಳು ತುಂಬಿ ತುಳುಕುತ್ತಿವೆ. ಭಾರಿ ಮಳೆ ಬೀಳುವ ಜಾಗ ಮಲೆನಾಡು ಮಾತ್ರವಲ್ಲದೆ, ದಕ್ಷಿಣ ಕರ್ನಾಟಕ & ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಜಲಾಶಯಗಳು ಜೂನ್ ತಿಂಗಳಲ್ಲೇ ತುಂಬಿ ತುಳುಕುತ್ತಾ ಖುಷಿ ನೀಡುತ್ತಿವೆ. ಇಂತಹ ಸಮಯದಲ್ಲೇ, ಮಳೆ.. ಮಳೆ.. ಜುಲೈ 2 ಬುಧವಾರ ನಂತರ ಭಾರಿ ಭರ್ಜರಿ ಮಳೆ!

ಮಳೆ.. ಮಳೆ.. ಭರ್ಜರಿಯಾಗಿ ಮಳೆ ಸುರಿಯುತ್ತಿದೆ... ಅದರಲ್ಲೂ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಈ ಬಾರಿ ಭರ್ಜರಿ ಮಳೆ ಬಂದಿದೆ. ಮಳೆ ಆರ್ಭಟ ಶುರುವಾದ ಕಾರಣ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ಈ ರೀತಿ ಸರಾಸರಿ 100 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಹಲವು ಜಿಲ್ಲೆಗಳಲ್ಲಿ ಸುರಿದ ಕಾರಣಕ್ಕೆ, ಮುಂದಿನ 1 ವರ್ಷ ನೀರಿಗೆ ಯಾವುದೇ ತೊಂದರೆ ಇಲ್ಲ ಬಿಡು ಅಂತಾ ಅನ್ನದಾತ ರೈತರು ಕೂಡ ಸಿಕ್ಕಾಪಟ್ಟೆ ಖುಷಿ, ಖುಷಿಯಾಗಿದ್ದಾರೆ. ಹೀಗಿದ್ದಾಗಲೇ, ಜುಲೈ 2 ಬುಧವಾರ ನಂತರ ಈ ಜಿಲ್ಲೆಗಳಲ್ಲಿ ಮತ್ತೆ ಭಾರಿ ಭರ್ಜರಿ ಮಳೆ ಬೀಳಲಿದೆಯಂತೆ!

Heavy Rain Alert For These Districts Of Karnataka After July 2 Of 2025

ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ...

2025 ವರ್ಷ ಕನ್ನಡ ನಾಡಿಗೆ ಮತ್ತು ಕನ್ನಡಿಗರ ಪಾಲಿಗೆ ತುಂಬಾನೇ ಅದೃಷ್ಟ ತಂದು ಕೊಡುತ್ತಿದೆ. ಯಾಕೆ ಅಂದ್ರೆ 2025 ವರ್ಷ ಶುರು ಆಗುತ್ತಿದ್ದಂತೆ ಭಾರಿ ದೊಡ್ಡ ಮಟ್ಟದಲ್ಲಿ ಮಳೆ ಸುರಿಯಲು ಆರಂಭ ಆಗಿದೆ. ಹೀಗೆ ಸುರಿಯುತ್ತಿರುವ ಮಳೆ ರೈತರು ಸೇರಿದಂತೆ 7 ಕೋಟಿ ಕನ್ನಡಿಗರಿಗೆ ಭಾರಿ ಭರ್ಜರಿ ಖುಷಿ ನೀಡಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಜನರು ಇದ್ದಾರೆ. ಇಂತಹ ಸಮಯದಲ್ಲೇ, ಜುಲೈ 2 ಬುಧವಾರ ನಂತರ ಮತ್ತೆ ಭಾರಿ ಮಳೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ ನಮ್ಮ ಕರ್ನಾಟಕ ರಾಜ್ಯದ ಈ ಜಿಲ್ಲೆಗಳಿಗೆ!

ಬೆಂಗಳೂರು ಸೇರಿ ಮಂಗಳೂರು, ದಾವಣಗೆರೆ...

ಕರ್ನಾಟಕದ ಮೂಲೆ ಮೂಲೆಯಲ್ಲೂ ಭಾರಿ ಮಟ್ಟದಲ್ಲಿ ಮಳೆ ಸುರಿದು ರೈತರು ಕೂಡ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದ್ದಾರೆ. ಇಂತಹ ಸಮಯದಲ್ಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 2 ಬುಧವಾರ ನಂತರ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೀಗ ಸಿಕ್ಕಿದೆ. ಬೆಂಗಳೂರು ಸೇರಿದಂತೆ ಕರಾವಳಿ ಪ್ರದೇಶವಾದ, ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು ಸೇರಿ ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಜೊತೆ ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಜುಲೈ 2 ಬುಧವಾರ ನಂತರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ & ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಎಚ್ಚರಿಕೆ ನೀಡಲಾಗಿದ್ದು, ಕುಂದಾ ನಗರಿ ಬೆಳಗಾವಿ ಜಿಲ್ಲೆಯಲ್ಲೂ ಭಾರಿ ಮಳೆಯಾಗಲಿದೆಯಂತೆ.

ತುಂಬಿ ತುಳುಕುತ್ತಿರುವ ಕನ್ನಡ ನಾಡಿನ ಜಲಾಶಯಗಳು!

ಹೌದು, ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜೂನ್ ತಿಂಗಳಲ್ಲೇ ಈ ಬಾರಿ ಜಲಾಶಯಗಳು ಅಂದ್ರೆ ಡ್ಯಾಂಗಳು ತುಂಬಿ ತುಳುಕಲು ಶುರು ಮಾಡಿವೆ. ಹೀಗಾಗಿ ರೈತರು ಹಾಗೂ ಕನ್ನಡ ನಾಡಿನ ಕನ್ನಡಿಗರು ಕೂಡ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದ್ದಾರೆ. ಅದರಲ್ಲೂ, ಬೆಂಗಳೂರಿಗೆ ಕುಡಿಯುವ ನೀರು ನೀಡುವ ಕೃಷ್ಣರಾಜ ಸಾಗರ ಅಂದ್ರೆ ನಮ್ಮ ಕೆಆರ್‌ಎಸ್ ಈಗ ಫುಲ್ ತುಂಬಿ ತುಳುಕುತ್ತಿದ್ದು, ಗರಿಷ್ಠ 124.80 ಅಡಿ ಇರುವ ಜಲಾಶಯಕ್ಕೆ 50,000ಕ್ಕೂ ಹೆಚ್ಚು ಕ್ಯುಸೆಕ್ ನೀರು ಇದೀಗ ಹರಿದು ಹರಿದು ಬರುತ್ತಿದೆ. ಇದರ ಜೊತೆಗೆ ಆಲಮಟ್ಟಿ ಜಲಾಶಯಕ್ಕೆ 1,07,081 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ತುಂಗಭದ್ರಾ ಡ್ಯಾಂಗೆ 65,182 ಕ್ಯುಸೆಕ್ ಅಡಿ ನೀರು ಹರಿದು ಬರುತ್ತಿದೆ. ಈ ಮೂಲಕ ಭಾಗಶಃ ಕರ್ನಾಟಕದ ಎಲ್ಲಾ ಡ್ಯಾಂಗಳು ತುಂಬಿ ತುಂಬಿ ತುಳುಕುತ್ತಿವೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+