Karnataka Weather: ರಾತ್ರಿಯಿಡೀ ಅಬ್ಬರಿಸಿದ ಮಳೆ; ಇಂದು ಈ ಜಿಲ್ಲೆಗಳಲ್ಲಿ ವರ್ಷಧಾರೆ

ಸೋಮವಾರ ಸಂಜೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುರುವಾದ ಮಳೆ, ರಾತ್ರಿಯಿಡೀ ಅಬ್ಬರಿಸಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಲ್ಲಿ ಹರ್ಷ ತಂದಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಇಂದು ಕೂಡ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.

ಭಾರಿ ಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದಲ್ಲಿ ಈ ವಾರ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಸೋಮವಾರವೇ ಅದರ ಮುನ್ಸೂಚನೆ ಸಿಕ್ಕಿದೆ. ಸೋಮವಾರ ಬೆಳಗ್ಗೆಯೇ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಸೇರಿದಂತೆ ಒಂದು ಅಥವಾ ಎರಡು ಕಡೆ ಗುಡುಗು ಸಹಿತ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.

Heavy Rain Alert for Karnataka on May 7th Including Bengaluru

ಸೋಮವಾರ ರಾತ್ರಿಯಿಡೀ ಮಳೆ

ಸೋಮವಾರ ರಾತ್ರಿಯಿಡೀ ಹಲವು ಕಡೆಗಳಲ್ಲಿ ವ್ಯಾಪಕ ಮಳೆಯಾಗಿದ್ದು ವಾತಾವರಣ ತಂಪಾಗಿಸಿದೆ. ಚಾಮರಾಜನಗರ 115.5 ಮಿ.ಮೀ, ಮೈಸೂರು 108.5 ಮಿ.ಮೀ, ಕೋಲಾರ 94 ಮಿ.ಮೀ, ಬೆಂಗಳೂರು ನಗರ 69 ಮಿ.ಮೀ, ಬೆಂಗಳೂರು ಗ್ರಾಮಾಂತರ 43 ಮಿ.ಮೀ, ಮಂಡ್ಯ 55.5 ಮಿ.ಮೀ, ರಾಮನಗರ 35 ಮಿ.ಮೀ, ತುಮಕೂರು 37.5 ಮಿ.ಮೀ, ಹಾಸನ 33.5 ಮಿ.ಮೀ, ಕೊಡಗು 25.5 ಮಿ.ಮೀ, ಚಿಕ್ಕಬಳ್ಳಾಪುರ 19 ಮಿ.ಮೀ, ಚಿಕ್ಕಮಗಳೂರು 17.5 ಮಿ.ಮೀ ಮಳೆಯಾಗಿದೆ.

ಅತಿ ಹೆಚ್ಚು ಮಳೆ ಬಿದ್ದ ಪ್ರದೇಶ

ಚಾಮರಾಜನಗರ ಜಿಲ್ಲೆಯ ನವಿಲೂರಿನಲ್ಲಿ 115.5ಮಿ.ಮೀ ಮಳೆಯಾಗಿದ್ದು ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ. ಹೊಸಕೋಟೆ 108.5ಮಿಮೀ, ಮೈಸೂರು ಜಿಲ್ಲೆ ಕರೋಹಟ್ಟಿ 104.5ಮಿಮೀ ಮತ್ತು ವಾಟಾಳು 94.5 ಮಿಮೀ ಮಳೆಯಾಗಿದೆ. ಕೋಲಾರ ಜಿಲ್ಲೆಯ ಜಯಮಂಗಲ 94 ಮಿ.ಮೀ, ಉರಗಲಿ ಮತ್ತು ಘಟ್ಟಕಾಮಾದೇನಹಳ್ಳಿಯಲ್ಲಿ 76 ಮಿ.ಮೀ. ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶಾಂತಿಪುರ 69 ಮಿ.ಮೀ ಮತ್ತು ಕೋನಪ್ಪನ ಅಗ್ರಹಾರ 67.5 ಮಿ.ಮೀ. ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+