Karnataka Rains: ಆಗಸ್ಟ್ 05ರಿಂದ ಮತ್ತೆ ಭಾರೀ ಮುಂಗಾರು ಮಳೆ ಅಲರ್ಟ್; ಶಾಲೆಗಳಿಗೆ ರಜೆ ಸಾಧ್ಯತೆ: IMD
ಬೆಂಗಳೂರು, ಆಗಸ್ಟ್ 03: ಕರ್ನಾಟಕದಾದ್ಯಂತ ಮುಂಗಾರು ಮಳೆ ಅಬ್ಬರ ಕೊಂಚ ತಣ್ಣಗಾಗಿತ್ತು, ಇದೀಗ ಮತ್ತೆ ಆಗಸ್ಟ್ 05ರಿಂದ ರಾಜ್ಯವ್ಯಾಪಿ ಮುಂಗಾರು ಸಕ್ರಿಯವಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬರೀ ಕರಾವಳಿ ಹಾಗೂ ಮಲೆನಾಡು ಮಾತ್ರವಲ್ಲದೇ ಒಳನಾಡು ಜಿಲ್ಲೆಗಳಿಗೂ ಸಾಧಾರಣದಿಂದ ಭಾರೀ ಮಳೆ ನಿರೀಕ್ಷಿಸಬಹುದು. ಗರಿಷ್ಠ 200 ಮಿಲಿ ಮೀಟರ್‌ವರೆಗೆ ಮಳೆ ಸಂಭವವಿದ್ದು, ಆಯಾ ಜಿಲ್ಲೆಗಳ ಶಾಲೆಗಳಿಗೆ ಮತ್ತೆ ಮಳೆ ರಜೆ ಘೋಷಣೆ ಆಗಬಹುದು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಆಗಸ್ಟ್ 06ರಂದು ನಂತರ ಮೂರು ದಿನ ಹಾಸನ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಇಂದಿನ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರದ ವಿಜ್ಞಾನಿಗಳು ಮುನ್ಸೂಚನೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 05ರ ನಂತರ ಉಡುಪಿ ಮತ್ತು ಮೈಸೂರಲ್ಲಿ 4 ದಿನ, ಗದಗ, ಚಿಕ್ಕಮಗಳೂರು, ಹಾವೇರಿ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಮೂರು ದಿನ ಕೊಪ್ಪಳ, ರಾಯಚೂರು & ಶಿವಮೊಗ್ಗದಲ್ಲಿ ತಲಾ ಎರಡು ದಿನ, ಬೆಂಗಳೂರು ನಗರದಲ್ಲಿ ಒಂದು ದಿನ, ರ ರಾಮನಗರ & ಮಂಡ್ಯದಲ್ಲಿ ಒಂದು ದಿನ ಭಾರೀ ಮಳೆ ಆಗಲಿದ್ದು, ಅಷ್ಟೂ ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಗಾಳಿಯ ವೇಗ ಗರಿಷ್ಠ 40-50 ಕಿಲೋ ಮೀಟರ್ ವೇಗದ ಸಹಿತ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ವರದಿ ಹೇಳಿದೆ.
ಶಾಲೆಗಳಿಗೆ ರಜೆ ಸಾಧ್ಯತೆ
ಕಳೆದ ಒಂದೂವರೆ ತಿಂಗಳಿನಿಂದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಇನ್ನಿಲ್ಲದಂತೆ ಮಳೆ ಅಬ್ಬರಿಸಿತ್ತು. ಆಗ ಕೊಡಗು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಶಾಲೆ ಮತ್ತು ಅಂಗನವಾಡಿಗಳಿಗೆ ಹೆಚ್ಚಿನ ಮಳೆ ಹಿನ್ನೆಲೆ ರಜೆ ನೀಡಲಾಗಿತ್ತು. ಇದೀಗ ಅಂಥದ್ದೆ ಸ್ಥಿತಿ ಮತ್ತೆ ಎದುರಾಗಲಿದ್ದು, ಈ ತಿಂಗಳು ಹಲವು ಶಾಲೆ-ಅಂಗನವಾಡಿ ಕೇಂದ್ರಗಳಿಗೆ ಮಳೆ ರಜೆ ಘೋಷಣೆ ಆದರೂ ಅಚ್ಚರಿ ಇಲ್ಲ. ಮಳೆಗಾಲದಲ್ಲಿ ಈ ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಉಂಟಾಗಿದ್ದ ಹವಾಮಾನ ವೈಪರೀತ್ಯಗಳು ಮತ್ತೆ ಮುಂದುವರಿಯುವ ಲಕ್ಷಣ ಇದೆ. ಹೀಗಾಗಿ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳು ಮತ್ತೆ ಒಂದು ವಾರ ಕಾಲ ಭರ್ಜರಿ ಮಳೆಗೆ ಸಾಕ್ಷಿ ಆಗಲಿವೆ. ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುತ್ತಿರುವ ನಿರಂತರ ಬದಲಾವಣೆಯು ಮುಂಗಾರು ಮಳೆ ಹೆಚ್ಚಳಕ್ಕೆ ಕಾರಣವಾಗಿದೆ.
ಬೆಂಗಳೂರಲ್ಲೂ ವಾರಾಂತ್ಯಕ್ಕೆ ಭಾರೀ ಮಳೆ
ಬೆಂಗಳೂರಲ್ಲಿ ಈಗಾಗಲೇ ಮಬ್ಬು ವಾತಾವರಣ ಇದ್ದು, ವಾರಾಂತ್ಯಕ್ಕೆ ಆಗಾಗ ಬಿಸಿಲಿನ ದರ್ಶನವಾಗಿದೆ. ಮುಂದಿನ ವಾರಾಂತ್ಯದ ಹೊತ್ತಿಗೆ ಮತ್ತೆ ಜೋರು ಮಳೆ ಆಗಲಿದೆ. ಕನಿಷ್ಠ ತಾಪಮಾನ 21 ಹಾಗೂ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಸು ಪಾಸು ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications