ಈ ಕಾರಣಕ್ಕೆ ರಾಜೀನಾಮೆ ಕೊಡ್ತೀನಿ ಎಂದ ರಾಜ್ಯದ ಮತ್ತೊಬ್ಬ ಪ್ರಭಾವಿ ಸಚಿವ, ಶಾಕಿಂಗ್

Ballari maternal death cases:ರಾಜ್ಯದ ಪ್ರಭಾವಿ ಸಚಿವರೊಬ್ಬರು ರಾಜೀನಾಮೆ ಕೊಡುವ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಈಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಫುಲ್‌ ಫಾರ್ಮ್‌ನಲ್ಲಿ ಇದೆ. ಈ ಸಂದರ್ಭದಲ್ಲೇ ಪ್ರಭಾವಿ ಸಚಿವರೊಬ್ಬರು ನನ್ನಿಂದ ತಪ್ಪಾಗಿದ್ದರೆ ನಾನು ರಾಜೀನಾಮೆ ಕೊಡುವುದಕ್ಕೆ ರೆಡಿ ಇದ್ದೀನಿ ಅಂತ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿನಿಂದ ಆರೋಗ್ಯ ಕ್ಷೇತ್ರದಲ್ಲಿ ಹಾಗೂ ಬಳ್ಳಾರಿಯ ಘಟನೆಗಳ ಬಗ್ಗೆ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಬೆಳವಣಿಗೆ ಸಾಕಷ್ಟು ಚರ್ಚೆಯಾಗುತ್ತಿರುವ ಹಿಂದೆಯೇ ಸಚಿವರು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.

ಹೌದು ಈಗಾಗಲೇ ರಾಜ್ಯದ ಪ್ರಭಾವಿ ಸಚಿವರೊಬ್ಬರ ವಿಕೆಟ್‌ ಪತನವಾಗಿದೆ. ಇದೀಗ ಇನ್ನೊಬ್ಬ ಸಚಿವರ ರಾಜೀನಾಮೆ ಕೊಡ್ತಾರೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಅವರೇ ಇಂದು (ಡಿಸೆಂಬರ್‌ 6) ನೀಡಿರುವ ಹೇಳಿಕೆ. ಶುಕ್ರವಾರ ಮಾಧ್ಯಮದರೊಂದಿಗೆ ಮಾತನಾಡಿರುವ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರು, ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನದೇನಾದರೂ ತಪ್ಪಾಗಿದ್ದರೆ ನಾನು ರಾಜೀನಾಮೆ ಕೊಡುವುದಕ್ಕೆ ರೆಡಿ ಎಂದಿದ್ದಾರೆ. ಇದು ಸಾಕಷ್ಟು ಕುತೂಹಲ ಹಾಗೂ ಅಚ್ಚರಿಯನ್ನು ಮೂಡಿಸಿದೆ.

Health Minister Dinesh Gundu Rao says he is ready to resign if I he wrong

ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿದ್ದು, ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ. ನಾನೇನಾದರು ತಪ್ಪು ಮಾಡಿದ್ದರೆ, ಇಲ್ಲವೇ ನನ್ನಿಂದ ತಪ್ಪಾಗಿದ್ದರೆ ನಾನು ರಾಜೀನಾಮೆ ಕೊಡ್ಲಿಕ್ಕೆ ಸಿದ್ಧನಾಗಿದ್ದೇನೆ. ಇದು ಜೀವದ ವಿಚಾರವಾಗಿದೆ ಅದರಲ್ಲಿ ನನ್ನ ಪ್ರತಿಷ್ಠೆ ಎನ್ನುವುದ ಏನು ಬರಲ್ಲ. ನಾವು (ಸರ್ಕಾರ) ಈ ವಿಚಾರದಲ್ಲಿ ಗಂಭೀರವಾಗಿದ್ದೇವೆ. ಬಾಣಂತಿಯರ ಸಾವು ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರಿಗೆ ಖಂಡಿತವಾಗಿಯೂ ಶಿಕ್ಷೆಯಾಗಲಿದೆ. ಆದರೆ, ಎಲ್ಲಾ ಸಮಸ್ಯೆಗಳು ನನ್ನ ರಾಜೀನಾಮೆಯಿಂದಲೇ ಸರಿ ಹೋಗಲಿದೆ ಎಂದಾರೆ ನಾನು ರಾಜೀನಾಮೆ ಕೊಟ್ಟು ಬಿಡ್ತೀನಿ ಅಂತ ಅವರು ಹೇಳಿರುವುದು ವರದಿಯಾಗಿದೆ.

ಟ್ವೀಟ್ ಮಾಡಿ ಕಿಡಿಕಾರಿದ ಬಿಜೆಪಿ

ಇನ್ನು ಇದೇ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್‌ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ರಾಜ್ಯ ಸರ್ಕಾರವನ್ನು ಹಾಗೂ ಆರೋಗ್ಯ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ. ಅಳುತೈತೆ ಬಾಣಂತಿಯರ ಕುಟುಂಬ - ನಗುತೈತೆ ಕಾಂಗ್ರೆಸ್‌ ಸರ್ಕಾರ ಎಂದು ಹೇಳಿದೆ. ಕರ್ನಾಟಕದಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರಿಯುತ್ತಿದೆ. ಆದರೆ, ಈ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಮಾತ್ರ ಡೋಂಟ್‌ ಕೇರ್ ಎನ್ನುವ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದೆ.

Health Minister Dinesh Gundu Rao says he is ready to resign if I he wrong

ಅಲ್ಲದೇ ಅದೆಷ್ಟೋ ನವಜಾತ ಶಿಶುಗಳು ತಾಯಿ ಪ್ರೀತಿಯಿಂದ ವಂಚಿತವಾಗುತ್ತಿವೆ. ವಂಶೋದ್ಧಾರಕರು ಜನಿಸಿದ್ದಾರೆ ಎಂದು ಸಂಭ್ರಮಿಸಬೇಕಾಗಿದ್ದ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗಿದೆ ಎಂದು ಬಿಜೆಪಿ ಟ್ವೀಟ್‌ ಮಾಡಿ ಆಕ್ರೋಶ ಹೊರ ಹಾಕಿದೆ.

ಇಷ್ಟಾದರೂ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರು ಮಾತ್ರ ಅದ್ಯಾವ ಈಜು ಕೊಳದಲ್ಲಿ ರಿಲಾಕ್ಸ್‌ ಮಾಡುತ್ತಿದ್ದಾರೊ, ಆ ದೇವರೇ ಬಲ್ಲ ಎಂದು ವ್ಯಂಗ್ಯವಾಡಿದೆ. ಮುಂದುವರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೂಡಲೇ ಬೇಜವಾಬ್ದಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ಸಂಪುಟದಿಂದ ವಜಾ ಮಾಡಿ ಎಂದು ಆಗ್ರಹಿಸಿದೆ. ಬಾಣಂತಿಯರ ಸರಣಿ ಸಾವನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಿ ಎಂದೂ ಒತ್ತಾಯಿಸಿದೆ.

ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+