ನಿಖಿಲ್ ಗೌಡ ಮದುವೆ, ಆರತಕ್ಷತೆ ಎಲ್ಲಿ ನಡೆಯುತ್ತೆ?
ಹಾಸನ, ಜೂ. 12: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆಸೆಯಂತೆ ಅವರ ಮೊಮ್ಮಗ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅವರ ಮದುವೆಯನ್ನು ಹರದನಹಳ್ಳಿಯಲ್ಲೇ ಆಯೋಜಿಸಲಾಗುತ್ತದೆ ಎಂದು ಎಚ್ಡಿಕೆ ಕುಟುಂಬದ ಮೂಲಗಳು ಹೇಳಿವೆ.
'ಜಾಗ್ವಾರ್' ಕನ್ನಡ ಸಿನಿಮಾದ ಮೂಲಕ ನಾಯಕ ನಟ ನಿಖಿಲ್ ಗೌಡ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಒಂದು ವರ್ಷ ಸಿನಿಮಾ, ಸುತ್ತಾಟದಲ್ಲೇ ಕಾಲ ಕಳೆಯಲಿದ್ದಾರೆ. [ಚಿರರುಣಿ...ನಿಖಿಲ್ ಬ್ಲಾಗ್, ಗೌಡ್ರ ಪಾಲಿಟಿಕ್ಸ್]
ಮುಂದಿನ ವರ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ನಿಖಿಲ್ ಹಾಗೂ ಸ್ವಾತಿ ಅವರ ಮದುವೆ ನಡೆಯಲಿದೆ.

ಜನವರಿ 22ರಂದು ನಿಖಿಲ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಂದೇ ಅವರ ಪ್ರಥಮ ಚಿತ್ರ 'ಜಾಗ್ವಾರ್' ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಜನವರಿ ತಿಂಗಳಲ್ಲೇ ನಿಖಿಲ್ ಮದುವೆ ಕೂಡಾ ಆಗಲಿದ್ದಾರೆ.['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]
ಹರದನಹಳ್ಳಿಯಲ್ಲಿ ದೇವೇಶ್ವರ ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ಆಗಮಿಸಿದ್ದಾಗ ತಮ್ಮ ಮಗನ ಮದುವೆ ಬಗ್ಗೆ ಮಾತನಾಡಿದರು. ಹರದನಹಳ್ಳಿಯಲ್ಲಿ ಮದುವೆ ಶುಭ ಕಾರ್ಯ ನಡೆಸಲು ಕುಟುಂಬದ ಎಲ್ಲರೂ ಇಷ್ಟಪಟ್ಟಿದ್ದಾರೆ. ಅದರಂತೆ ಮುಂದಿನ ವರ್ಷ ಮದುವೆ ನಡೆಸಲಾಗುತ್ತದೆ ಎಂದರು. [ಗಾಸಿಪ್ ಪಂಡಿತರ ಬಾಯಿಗೆ ಬೀಗ ಹಾಕಿದ ನಿಖಿಲ್ ಗೌಡ]
ನಿಖಿಲ್ ಹಾಗೂ ಸ್ವಾತಿ ಅವರ ಮದುವೆ ಹರದನಹಳ್ಳಿಯಲ್ಲಿ ನಡೆಸಿ, ರಾಮನಗರದಲ್ಲಿ ಆರತಕ್ಷತೆ ನಡೆಸಲು ಉದ್ದೇಶಿಸಲಾಗಿದೆ. ಆರತಕ್ಷತೆ ಬೆಂಗಳೂರಿನಲ್ಲೂ ಇಟ್ಟುಕೊಳ್ಳುವ ಸಾಧ್ಯತೆಯೂ ಇದೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ಹಾಗೂ ಪೂರ್ಣಿಮಾ ಮೋಹನ್ ಅವರ ಪುತ್ರಿ ಸ್ವಾತಿ ಅವರನ್ನು ಪ್ರೀತಿಸಿದ ನಿಖಿಲ್ ಅವರು ಈಗಷ್ಟೇ ಸಿನಿ ಬದುಕು ಆರಂಭಿಸಿದ್ದಾರೆ. ಮುಂದಿನ ವರ್ಷ ಅವರ ಹೊಸ ಬಾಳು ಆರಂಭವಾಗಲಿದೆ.












Click it and Unblock the Notifications