HD Kumaraswamy: ಚನ್ನಪಟ್ಟಣ ಚುನಾವಣೆ ಮಧ್ಯೆ ಕುಟುಂಬದೊಂದಿಗೆ ಹಾಸನಾಂಬೆ ದರ್ಶನ ಪಡೆದ ಹೆಚ್‌ಡಿ‌ ಕುಮಾರಸ್ವಾಮಿ

ಹಾಸನ ಅಕ್ಟೋಬರ್ 27: ಒಂದೆಡೆ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ರಂಗೇರುತ್ತಿದೆ. ಚನ್ನಪಟ್ಟಣ ಚುನಾವಣಾ ಅಖಾಡಕ್ಕೆ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮಗನಿಗೆ ಒಳ್ಳೆಯದಾಗಲೆಂದು ಹಾಸನಾಂಬೆಯ ಮೊರೆ ಹೋಗಿದ್ದಾರೆ.

ಹೌದು... ಹೆಚ್‌ಡಿ ಕುಮಾರಸ್ವಾಮಿ ಅವರಿಂದ ಕುಟುಂಬಸ್ಥರೊಂದಿಗೆ ಹಾಸನಾಂಬೆ ದರ್ಶನ ಪಡೆದರು. ಛತ್ರಿ, ಚಾಮರ, ವಾದ್ಯಗೋಷ್ಠಿಯೊಂದಿಗೆ ಜಿಲ್ಲಾಡಳಿತ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡಿತು. ಚನ್ನಪಟ್ಟಣ ಚುನಾವಣೆ ಮಧ್ಯೆ ಕೇಂದ್ರ ಸಚಿವ ಹೆಚ್.ಡಿ‌‌ ಕುಮಾರಸ್ವಾಮಿ, ಅವರ ಪತ್ನಿ ಅನಿತಾ, ಸೊಸೆ ರೇವತಿ ಮತ್ತು ಮೊಮ್ಮಗನ ಜೊತೆ ಹಾಸನಾಂಬೆ ದರ್ಶನಕ್ಕೆ‌ ಆಗಮಿಸಿದ್ದರು. ಕುಟುಂಬಸ್ಥರೆಲ್ಲಾ ಹಾಸನಾಂಬೆ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

HD Kumaraswamy visited Hasanambe Temple with his family

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾವು ಚಿಕ್ಕಮಕ್ಕಳಿಂದ ಹಾಸನಾಂಬೆ ಪವಾಡವನ್ನ ಗಮನಿಸಿದ್ದೇವೆ. ಒಂದುವರೆ ತಿಂಗಳು ನಮ್ಮ‌ ಚಿಕ್ಕವಯಸ್ಸಿನಲ್ಲಿ ಜಾತ್ರೆ ನಡೆಯುತ್ತಿತ್ತು. ಉತ್ತಮ ರೀತಿಯಲ್ಲಿ ರೈತ ಬಂಧುಗಳು ಬದುಕು ನಡೆಸುವಂತಾಗಲಿ. ಮಳೆ,‌ ಬೆಳೆ ಎಲ್ಲವೂ ಚನ್ನಾಗಿ ಆಗಿ ನೆಮ್ಮದಿಯ ಬದುಕು ಅವರಿಗೆ ಸಿಗಲಿ. ನಮ್ಮ‌ ಹಳೆಯ ಸಂಪ್ರದಾಯದಂತೆ ಬಂಧು ಬಾಂಧವರು ಉತ್ತಮ‌ ಸಂಬಂಧ ಇಟ್ಟುಕೊಳ್ಳುವಂತಾಗಲಿ. ದೇವರ ಆಶೀರ್ವಾದದಿಂದ ನಮ್ಮ ಬೇಡಿಕೆಗಳು ಈಡೇರುತ್ತವೆ' ಎಂದು ತಿಳಿದರು.

'ದೇವರಲ್ಲಿ ಒಳ್ಳೆ ಕೆಲಸ ಮಾಡಲು ಶಕ್ತಿ ಕೊಡು ಎಂದು ಕೇಳಿದ್ದೇನೆ. ಈ ಬಾರಿ ನನ್ನ ಮಗ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಚುನಾವಣೆಗೆ ನಿಂತಿದ್ದಾನೆ. ಕೆಲ ಕಾರಣಗಳಿಂದ ಕಳೆದ ಎರಡು ಬಾರಿ‌ ಚುನಾವಣೆಯಲ್ಲಿ ಸೋತಿದ್ದಾನೆ. ಈ ಬಾರಿ ಚುನಾವಣೆಯಲ್ಲಿ‌ ಗೆಲ್ಲಿಸುವಂತೆ ಹಾಸನಾಂಬೆಯಲ್ಲಿ ಬೇಡಿಕೊಂಡಿದ್ದೇನೆ. ಆಕೆಯ ಆಶೀರ್ವಾದ ನಮ್ಮ ಮೇಲಿದೆ' ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+