ಮೊದಲು ಸರ್ಕಾರಿ ಆಸ್ಪತ್ರೆ ಗುಣಮಟ್ಟ ಹೆಚ್ಚಿಸಿ : ಎಚ್ಡಿಕೆ

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 3 : 'ಕರ್ನಾಟಕ ಸರ್ಕಾರ ತರಾತುರಿಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017 ಅನ್ನು ಜಾರಿಗೆ ತರಲು ಹೊರಟಿರುವುದು ಹುಚ್ಚುತನದ ನಿರ್ಧಾರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ

ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, 'ವೈದ್ಯರು ಸರ್ಕಾರದ ಗುಲಾಮರಲ್ಲ. ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ವೈದ್ಯರ ವಿರುದ್ಧ ಬಳಸಿರುವ ಪದ ಸರಿಯಲ್ಲ. ಸರ್ಕಾರ ಅವೈಜ್ಞಾನಿಕ ರೀತಿಯಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ನಿಯಂತ್ರಣ ಮಾಡುತ್ತಿದೆ' ಎಂದು ಆರೋಪಿಸಿದರು.

HD Kumaraswamy supports doctors one day strike

'ಎಲ್ಲಾ ವೈದ್ಯರು ಮೋಸಗಾರರಲ್ಲ. ಕಾರ್ಪೊರೇಟ್ ಆಸ್ಪತ್ರೆಗಳ ಬಿಲ್ಲಿಂಗ್‌ನಲ್ಲಿ ಮೋಸವಾಗಿರಬಹುದು. ಸರ್ಕಾರ ತರಾತುರಿಯಲ್ಲಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ ಜಾರಿಗೆ ತರುವ ಅಗತ್ಯವಿಲ್ಲ' ಎಂದು ಹೇಳಿದರು.

'ಬೇಡಿಕೆಗೆ ಸರ್ಕಾರ ಬಗ್ಗದಿದ್ದರೆ, ವೃತ್ತಿ ತೊರೆಯುವ ಬೆದರಿಕೆ'

'ಮೊದಲು ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಸುಧಾರಿಸಿ ಆಗ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ವಿಕ್ಟೋರಿಯಾ ಮತ್ತು ಕಿಮ್ಸ್ ಆಸ್ಪತ್ರೆ ಒಳಗೆ ಸಾಮಾನ್ಯ ಜನರು ಹೋಗಲು ಸಾಧ್ಯವಿದೆಯೇ?' ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

'ಸರ್ಕಾರ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ರಚನೆ ಮಾಡುವಾಗ ಆಸ್ಪತ್ರೆಗಳ ಅಭಿಪ್ರಾಯ ಪಡೆದಿಲ್ಲ. ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲ. ಇದು ಪ್ರಚಾರ ಪಡೆದುಕೊಳ್ಳುವ ಹೊಸ ತಂತ್ರ' ಎಂದು ಕುಮಾರಸ್ವಾಮಿ ದೂರಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS state president H.D.Kumaraswamy extended support to private hospital doctors one day strike on November 3, 2017. Doctors protesting against Karnataka Private Medical Establishment Act (KPMA).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ