• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನ ಇಲ್ಲದಿದ್ದರೆ ನಿಮಗೆ ಒಂದೂ ಓಟು ಬೀಳುತ್ತಿರಲಿಲ್ಲ: ಬಿಜೆಪಿಗೆ ಎಚ್‌ಡಿಕೆ ಏಟು

|
   HD Kumaraswamy attacked minister Suresh Kumar and his BJP party on patriotism | BJP | JDS

   ಬೆಂಗಳೂರು, ಜನವರಿ 22: ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆಯನ್ನು ನಂಬರ್ ಒನ್ ದೇಶಭಕ್ತ ಎಂದು ಶ್ಲಾಘಿಸಿದ ಸಚಿವ ಸುರೇಶ್ ಕುಮಾರ್ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಟು ಟೀಕಾಪ್ರಹಾರ ನಡೆಸಿದ್ದಾರೆ.

   ದಿನಬೆಳಗಾದರೆ ಪಾಕಿಸ್ತಾನವನ್ನು ಜಪಿಸುತ್ತೀರಿ. ನಿಮ್ಮ ಮೂಲ ಅಲ್ಲಿಯೇ ಇರಬಹುದು. ಪಾಕಿಸ್ತಾನ ಎಂಬ ದೇಶ ಭೂಪಟದಲ್ಲಿ ಇಲ್ಲದೇ ಹೋಗಿದ್ದರೆ ನೀವು ಇಲ್ಲಿ ಒಂದೇ ಒಂದು ಓಟು ಪಡೆಯಲು ಆಗುತ್ತಿರಲಿಲ್ಲ ಎಂದು ಬಿಜೆಪಿ ವಿರುದ್ಧ ಲೇವಡಿ ಮಾಡಿದ್ದಾರೆ.

   ಕುಮಾರಸ್ವಾಮಿಯವರ ಜಮೀನಿನ ದಾಖಲೆಗಳೇ ಮಾಯವಾಗಿವೆ: ಎಸ್.ಆರ್.ಹಿರೇಮಠ್ ಗಂಭೀರ ಆರೋಪ

   ದೇಶಪ್ರೇಮ, ದೇಶಭಕ್ತಿಯ ವಿಚಾರದಲ್ಲಿ ಸುರೇಶ್ ಕುಮಾರ್, ಪ್ರಹ್ಲಾದ ಜೋಶಿ ವಿರುದ್ಧ ಸರಣಿ ಟ್ವೀಟ್‌ಗಳಲ್ಲಿ ವಾಗ್ದಾಳಿ ನಡೆಸಿರುವ ಅವರು, ಪಾಕಿಸ್ತಾನದ ಜಪ ಮಾಡುತ್ತಿದೆ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.

   ಅತ್ಯಾಚಾರಿಗಳಲ್ಲಿ ಧರ್ಮ ಹುಡುಕಿದವ

   ಅತ್ಯಾಚಾರಿಗಳಲ್ಲಿ ಧರ್ಮ ಹುಡುಕಿದವ

   ಹೈದರಾಬಾದಿನ ಪಶುವೈದ್ಯೆ ಅತ್ಯಾಚಾರಿಗಳಲ್ಲೂ ಧರ್ಮ ಹುಡುಕಿದವ, ಮತ ಕೇಳಲು ವೀರಯೋಧ ಅಭಿನಂದನ್ ವರ್ದಮಾನ್ ಫೋಟೊ ಬಳಸಿದವ, ಪೂರ್ಣಪ್ರಜ್ಞಾ ವಿದ್ಯಾಪೀಠದ ಪವಿತ್ರ ಆವರಣವನ್ನು ರಾಜಕೀಯಕ್ಕೆ ಬಳಸಿಕೊಂಡವ, ಬಿಜೆಪಿ ನಾಯಕ ಸದಾನಂದಗೌಡರಿಂದಲೇ ದೇಶದ್ರೋಹಿ ಎನಿಸಿಕೊಂಡವ ಸುರೇಶ್ ಕುಮಾರ್ ಅವರಿಗೆ ದೇಶಪ್ರೇಮಿ!

   ನಿಮ್ಮ ಮೇಲಿನ ಅಭಿಮಾನಕ್ಕೆ ಕುಂದಾಗಿದೆ

   ನಿಮ್ಮ ಮೇಲಿನ ಅಭಿಮಾನಕ್ಕೆ ಕುಂದಾಗಿದೆ

   ದೇಶಪ್ರೇಮಕ್ಕೆ Rank ಕೊಡುತ್ತಾರೆ ಸುರೇಶ್ ಕುಮಾರ್. ತಾಯಿ ಮೇಲಿನ ಪ್ರೀತಿಗೆ Rank ನೀಡಲು ಸಾಧ್ಯವೇ? ರಾಜಕೀಯಕ್ಕೆ ದೇಶಪ್ರೇಮವನ್ನು ಬಳಸಿಕೊಂಡ ನಿಮ್ಮ ಬೌದ್ಧಿಕ ದಿವಾಳಿತನ ನಿಜಕ್ಕೂ ನನ್ನಲ್ಲಿ ಬೇಸರ ತರಿಸಿದೆ. ಸಜ್ಜನರಾದ ನಿಮ್ಮ‌ ಮೇಲಿನ ನನ್ನ ಅಭಿಮಾನಕ್ಕೇ ಕುಂದುಂಟಾಗಿದೆ... ದೇಶಪ್ರೇಮದ ವಿಚಾರದಲ್ಲಿ Rank ಕೊಟ್ಟರೆ 'ಆತ' ಕೊನೇ Rank.

   ಮಂಗಳೂರು ಬಾಂಬ್ ಪ್ರಕರಣವನ್ನು "ಬಿಜೆಪಿ ಪ್ರಹಸನ" ಎಂದು ನಗೆಯಾಡಿದ ಎಚ್ ಡಿಕೆ

   ಮಾನಸಿಕ ಭ್ರಷ್ಟಾಚಾರಿ ಅನಾವರಣ

   ಮಾನಸಿಕ ಭ್ರಷ್ಟಾಚಾರಿ ಅನಾವರಣ

   ಸಾಲುಮರಗಳನ್ನು ಬೆಳೆಸಿದ ತಿಮ್ಮಕ್ಕ ನಿಮಗೆ ದೇಶಪ್ರೇಮಿ ಎನಿಸರು, ಕೆರೆ ಕಟ್ಟಿದ ಕಾಮೇಗೌಡ ನಿಮಗೆ ದೇಶಪ್ರೇಮಿಯಾಗರು. ರಾಜಕೀಯಕ್ಕಾಗಿ ಧರ್ಮಗಳನ್ನು ಬಳಸಿಕೊಳ್ಳುವ, ಕೋಮು ದಳ್ಳುರಿ ಬಿತ್ತುವವರಲ್ಲಿ ದೇಶಪ್ರೇಮ ಕಂಡ ನೀವು ನಿಮ್ಮಲ್ಲಿರುವ ಮಾನಸಿಕ ಭ್ರಷ್ಟಾಚಾರಿಯನ್ನು ಸಮಾಜದೆದುರು ಅನಾವರಣ ಮಾಡಿದ್ದೀರಿ‌.

   ನಮ್ಮ ಮನೆಗೆ ಒಮ್ಮೆ ಬನ್ನಿ

   ನಮ್ಮ ಮನೆಗೆ ಒಮ್ಮೆ ಬನ್ನಿ

   'ಆತ'ನ ದೇಶಭಕ್ತಿಗೆ ಸಾಕ್ಷ್ಯ ಕೊಡುವ ಸುರೇಶ್ ಕುಮಾರ್ ಅವರೇ, ನನ್ನ ಮನೆಗೆ ಒಮ್ಮೆ ಬನ್ನಿ. ನಿತ್ಯವೂ ಸಾವಿರಾರು ಮಂದಿ ನೆರವು ಕೋರಿ ನನ್ನ ಹುಡುಕಿ ಬರುತ್ತಾರೆ. ಬಾಲ್ಯದಿಂದ ಈವರೆಗೆ ಜಾತಿ, ಮತ, ಪಕ್ಷವೆಂದು ನೋಡದೆ ಲಕ್ಷಾಂತರ ಮಂದಿಗೆ ಹೆಗಲಾಗಿದ್ದೇನೆ. ಅದನ್ನು ನಾನು ವರ್ಣಿಸಿಕೊಳ್ಳಬೇಕಿಲ್ಲ. ಹಾಗೇ ನಿಮ್ಮಿಂದ ದೇಶ ಭಕ್ತಿ ತಿಳಿಯಬೇಕಿಲ್ಲ.

   ಕೋಮು ಭಾವನೆಗಳೇ ಬಂಡವಾಳ

   ಕೋಮು ಭಾವನೆಗಳೇ ಬಂಡವಾಳ

   ರೈತರ ಸಾಲಮನ್ನಾ, ಬಡವರ ಬಂಧು, ಸಾಲ ಋಣಮುಕ್ತ ಕಾಯ್ದೆ ಇವೆಲ್ಲವೂ ನಾನು ತಂದ ಕಾರ್ಯಕ್ರಮಗಳು. ಇವು ದೇಶವಿರೋಧಿಯೇ? ನಿಮ್ಮ ಸರ್ಕಾರ ಜಾರಿಗೆ ತಂದಿರುವ ದೇಶಭಕ್ತಿಯ ಕಾರ್ಯಕ್ರಮಗಳನ್ನು ತೋರಿಸಿ ನೋಡೋಣ‌. ಬಡವ ಬಲ್ಲಿದರು ಬೇಕಿಲ್ಲದ ನಿಮಗೆ ಕೋಮು ಭಾವನೆಗಳೇ ಬಂಡವಾಳ. ನಿಮ್ಮಂಥ ದೇಶಪ್ರೇಮ(ದ್ರೋಹ) ನಮಗೆ ಬೇಕಿಲ್ಲ ಸುರೇಶ್ ಅವರೇ.

   "14 ತಿಂಗಳ ಅಧಿಕಾರಾವಧಿಯಲ್ಲಿ ಈ ರೀತಿ ಆಗಲು ಬಿಟ್ಟಿರಲಿಲ್ಲ ನಾನು"; ಎಚ್ ಡಿಕೆ

   ಬಿರಿಯಾನಿ ತಿಂದುಬಂದ ಪ್ರಧಾನಿ

   ಬಿರಿಯಾನಿ ತಿಂದುಬಂದ ಪ್ರಧಾನಿ

   ನನ್ನನ್ನು ದೇಶದ್ರೋಹಿ, ಪಾಕಿಸ್ತಾನ ಪರ ವಾದಿ ಎಂದು ಕೂಗು ಮಾರಿಯಂತೆ ಅರಚುತ್ತಿರುವ ಪ್ರಹ್ಲಾದ್ ಜೋಶಿ ಅವರೇ, ದಿನಬೆಳಗಾದರೆ ಪಾಕಿಸ್ತಾನವನ್ನೇ ಜಪಿಸುವ ನಿಮ್ಮ ಮೂಲ ಪಾಕ್ ಇರಬಹುದೇನೋ ನನಗೆ ಗೊತ್ತಿಲ್ಲ. ಪಾಕಿಸ್ತಾನದ ನೆಲ ಸ್ಪರ್ಶಿಸಿ, ಬಿರಿಯಾನಿ ತಿಂದು ಬಂದ ಪ್ರಧಾನಿಯ ಮಂತ್ರಿಮಂಡಲದಲ್ಲಿರುವ ನೀವು ದೇಶಭ್ರಷ್ಟರು. ನಾನು ಈ ಮಣ್ಣಿನವನು.

   ಒಂದು ವೋಟೂ ಸಿಗುತ್ತಿರಲಿಲ್ಲ

   ಒಂದು ವೋಟೂ ಸಿಗುತ್ತಿರಲಿಲ್ಲ

   ಪಾಕಿಸ್ತಾನ ಎಂಬ ದೇಶ ಈ ಭೂಪಟದಲ್ಲಿ ಇರದೇ ಹೋಗಿದ್ದರೆ ನೀವಿಲ್ಲಿ ಒಂದು ವೋಟು ಪಡೆಯಲೂ ಸಾಧ್ಯವಿರುತ್ತಿರಲಿಲ್ಲ. ಅದಕ್ಕಾಗಿಯೇ ಪಾಕ್ ನಾಮಸ್ಮರಣೆ ನಿಮ್ಮ ಕಾಯಕವಾಗಿಬಿಟ್ಟಿದೆ. ನಿಮ್ಮದೂ ರಾಜಕಾರಣವೇ? ನಿಮ್ಮದೂ ದೇಶ ಪ್ರೇಮವೇ? ಎಂಥ ಯಃಕಶ್ಚಿತ್ ಬದುಕು....?

   ನಿಮ್ಮದೇ ಸಿದ್ಧಾಂತದ ಪ್ರತಿಪಾದಕರು

   ನಿಮ್ಮದೇ ಸಿದ್ಧಾಂತದ ಪ್ರತಿಪಾದಕರು

   ಸಮಾಜ ವಿರೋಧಿ ಕಾರಣಕ್ಕೆ ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ. ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುತ್ತೇನೆ ಎಂದಿದ್ದ ನಿಮ್ಮದೇ ಸಿದ್ಧಾಂತ ಪ್ರತಿಪಾದಕರೂ ದೇಶದ್ರೋಹಿಗಳೇ ಅಲ್ಲವೇ ಬಿಜೆಪಿ ನಾಯಕರೇ?

   English summary
   Former Chief Minister HD Kumaraswamy attacked minister Suresh Kumar and his BJP party on patriotism.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X