2009 ಮತ್ತು 2019ರ ಸಮ್ಮಿಶ್ರ ಸರ್ಕಾರಗಳ ಪತನಕ್ಕೆ ಕಾರಣ ಯಾರು ಎಂಬ ಸತ್ಯ ಬಿಚ್ಚಿಟ್ಟ ಹೆಚ್ ವಿಶ್ವನಾಥ್
ಬೆಂಗಳೂರು, ಸೆಪ್ಟೆಂಬರ್ 30: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಪೂರೈಸಿದ್ದು, ಇದೀಗ ಮುಂದಿನ ಲೋಕಸಭಾ ಚುನಾವಣೆಗೆ 20 ಸ್ಥಾನ ಗುರಿ ಹಾಕಿಕೊಂಡಿರುವ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದ್ರೆ, ಇತ್ತ ಲೋಕಸಮರಕ್ಕೆ ಮೈತ್ರಿಯಾಗಿರುವ ಬಿಜೆಪಿ ಜೆಡಿಎಸ್ ನಾಯಕರು ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗುತ್ತೆ ಎಂಬ ಹೇಳಿಕೆಯನ್ನ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರುದ್ದ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಜೆಡಿಎಸ್ ನಾಯಕರಾದ ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆ. 2009 ರಲ್ಲಿ ಸಮ್ಮಿಶ್ರ ಸರ್ಕಾರ ಪತನಾವಾಗಿದ್ದಕ್ಕೆ ಕುಮಾರಸ್ವಾಮಿಯೇ ಕಾರಣ ಹಾಗೂ 2018 ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೂ ಅವರೇ ಕಾರಣ ಎಂದು ಹೆಚ್ ವಿಶ್ವನಾಥ್ ಹೇಳಿದ್ದಾರೆ.

ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆ ಮತ್ತು ಮನಸ್ಸಿಗೆ ಬಂದಿದ್ದನ್ನು ಬಡಬಡಾಯಿಸುತ್ತಿದ್ದಾರೆ. 2009 ರಲ್ಲಿ ಸಮ್ಮಿಶ್ರ ಸರ್ಕಾರ ಪತನಾವಾಗಿದ್ದಕ್ಕೆ ಕುಮಾರಸ್ವಾಮಿಯೇ ಕಾರಣ ಎಂದ ಅವರು, 2009 ರಲ್ಲಿ ಶಾಸಕರು ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ತನಗೆ ಅವರು ಮಾಡಿದ್ದೇನು ಅಂತ ಚೆನ್ನಾಗಿ ಗೊತ್ತಿದೆ.
ಇನ್ನೂ 2018 ರಲ್ಲಿ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರದ ಪತನಕ್ಕೂ ಅವರೇ ಕಾರಣರಾಗಿದ್ದರು. ಅಲ್ಲದೇ 2018 ಸರ್ಕಾರ ರಚನೆಯ ವೇಳೆ ಕಾಂಗ್ರೆಸ್ ಪಕ್ಷವು ಆವರಿಗೆ 12 ಮಂತ್ರಿಗಳನ್ನು ಆರಿಸಿಕೊಳ್ಳುವ ಅವಕಾಶ ನೀಡಿತ್ತು ಆದರೆ ಕುಮಾರಸ್ವಾಮಿ ಆಯ್ದುಕೊಂಡಿದ್ದು 10 ಜನ ಮತ್ತು ಅದರಲ್ಲಿ 7 ಮಂತ್ರಿಗಳು ಅವರ ಸಂಬಂಧಿಕರಾಗಿದ್ದರು. ಒಬ್ಬ ಅಲ್ಪಸಂಖ್ಯಾತ ಹಾಗೂ ಒಬ್ಬ ದಲಿತನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ತಾನು ನೀಡಿದ ಸಲಹೆ ಕುಮಾರಸ್ವಾಮಿ ಅವರು ತಿರಸ್ಕರಿಸಿದ್ದರು ಎಂದು ಕಿಡಿಕಾರಿದರು.
ಇನ್ನೂ ಮುಖ್ಯಮಂತ್ರಿ ಆದವರುವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕೂತು ರಾಜ್ಯಾಭಾರ ಮಾಡುತ್ತಾ ಜನಸಾಮಾನ್ಯ ಮತ್ತು ಖುದ್ದು ಅವರ ಪಕ್ಷದ ಶಾಸಕರಿಗೆ ಮರೀಚಿಕೆಯಾದರು ಎಂದು ವಿಧಾನ ಪರಿಷತ್ ಸದಸ್ಯರಾದ ಹೆಚ್ ವಿಶ್ವನಾಥ್ ಹೇಳಿದರು.
ಎಚ್ಡಿಕೆ ಹೇಳಿಕೆ ಈ ವಾರದ ಅತ್ಯುತ್ತಮ ಜೋಕ್: ದಿನೇಶ್ ಗುಂಡೂರಾವ್
6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂಬ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಈ ವಾರದ ಅತ್ಯುತ್ತಮ ಜೋಕ್ ಎಂದು ಟ್ವೀಟ್ ಮೂಲಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿಯವರು ನಮ್ಮ ಸರ್ಕಾರದ ಭವಿಷ್ಯದ ಬಗ್ಗೆ ಚಿಂತಿಸುವುದು ಬಿಟ್ಟು, ಈಗಾಗಲೇ ಜನರ ಮನಸ್ಸಿನಿಂದ ಗೇಟ್‌ಪಾಸ್ ಆಗಿರುವ ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಚಿಂತಿಸಲಿ.
ಅಧಿಕಾರವಿಲ್ಲದೆ ಅತೃಪ್ತ ಆತ್ಮವಾಗಿರೋ ಎಚ್ ಡಿ ಕುಮಾರಸ್ವಾಮಿ ಅವರು ಹತಾಶೆಯಿಂದ ಸರ್ಕಾರ ಬೀಳುವ ಕನಸು ಕಾಣುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ರಾಜ್ಯದ ಜನ ನಾವು ನಿರೀಕ್ಷೆ ಮಾಡದಷ್ಟು ಸಂಪೂರ್ಣ ಜನಾದೇಶ ನೀಡಿದ್ದಾರೆ.
ನಾವು ಪೂರ್ಣಾವಧಿ ಆಡಳಿತ ನಡೆಸುವುದು ನಿಶ್ಚಿತ. ಇನ್ನೊಬ್ಬರ ಆಸರೆಯಲ್ಲಿ ಸರ್ಕಾರ ರಚಿಸಿಲ್ಲ, ಸ್ವಂತ ಬಲದಿಂದ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಸರ್ಕಾರ ಬೀಳಲಿದೆ ಎಂಬ ಕನಸು ತಿರುಕನ ಕನಸಷ್ಟೆ.ಸ್ಥಾಪಿತ ಸರ್ಕಾರವನ್ನು ಕೆಡವುವ ಕೆಟ್ಟ ಚಾಳಿ ಆರಂಭಿಸಿದ್ದೇ BJP. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ BJP ಜೊತೆ ಮೈತ್ರಿ ಮಾಡಿಕೊಂಡ ತಕ್ಷಣವೆ HDKಗೂ ಆ ಚಾಳಿ ಅಂಟಿಕೊಂಡಂತಿದೆ. ಹೀಗಾಗಿ ಸರ್ಕಾರ ಬೀಳಿಸುವ ಮಾತನಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗದ ಮಾತು. ಇದು ಕೊನೆಗೆ, ಸಿಗದ ದ್ರಾಕ್ಷಿ ಹುಳಿ ಎಂಬ ನರಿಯ ಕಥೆಯಂತಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.












Click it and Unblock the Notifications