ಒಬ್ಬರಿಗೆ ಪೈಲ್ಸ್, ಇನ್ನೊಬ್ಬರಿಗೆ 104 ಡಿಗ್ರಿ ಜ್ವರ : ಎಚ್ಡಿಕೆ ವ್ಯಂಗ್ಯ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 16 : ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೆಲವು ಶಾಸಕರು ಈಗಾಗಲೇ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೊಂದಿಗೆ ಮುನಿಸಿಕೊಂಡಿದ್ದರೆ, ಮತ್ತೆ ಕೆಲವರು ಕಾಂಗ್ರೆಸ್, ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಜೆಡಿಎಸ್‌ನಲ್ಲಿ ಒಳಗೊಳಗೆ ಬೆಳವಣಿಗೆ ಆರಂಭವಾಗಿವೆ.

ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೆಡಿಎಸ್‌ನ ಕೆಲವು ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. [ಮತ್ತೆ ಆಪರೇಷನ್ ಕಮಲ, ನಾಲ್ವರು ಶಾಸಕರು ಬಿಜೆಪಿಗೆ?]

HD Kumaraswamy faces humiliation again in Mysuru

ಇದರಿಂದ ಭಯಗೊಂಡ ಕುಮಾರಸ್ವಾಮಿ ಅವರು ಶನಿವಾರ ಮೈಸೂರಿನ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಶಾಸಕಾಂಗ ಸಭೆ ನಡೆಸಿದ್ದಾರೆ. ಆದರೆ ಈ ಸಭೆಗೆ ಕೆಲವು ಶಾಸಕರು ಗೈರು ಹಾಜರಾಗಿರುವುದು ಪಕ್ಷದಲ್ಲಿರುವ ಭಿನ್ನಮತವನ್ನು ಬಹಿರಂಗಗೊಳಿಸಿದೆ.

ಸಭೆಯಲ್ಲಿ ಶಾಸಕರಾದ ಜಮೀರ್ ಅಹಮದ್, ಚೆಲುವರಾಯಸ್ವಾಮಿ ಹಾಗೂ ಅಖಂಡ ಶ್ರೀನಿವಾಸ್ ಮೂರ್ತಿ ಕಾಣದೆ ಇದ್ದದ್ದು ಕುತೂಹಲ ಮೂಡಿಸಿದೆ. ಶಾಸಕರ ಗೈರು ಹಾಜರಿಯನ್ನು ಸಮರ್ಥಿಸಿಕೊಂಡಿರುವ ಕುಮಾರಸ್ವಾಮಿ ಅವರು, ಪೂರ್ವಾನುಮತಿ ಪಡೆದು ಗೈರುಹಾಜರಾಗಿರುವುದಾಗಿ ಹೇಳಿದ್ದಾರೆ. [ಧನಂಜಯ್ ಕುಮಾರ್ ಬಿಜೆಪಿ ಸೇರುವುದು ಖಚಿತ]

HD Kumaraswamy faces humiliation again in Mysuru

ಇನ್ನು ಜಮೀರ್ ಅಹಮದ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸ್‌ಮೂರ್ತಿ ಅವರ ಗೈರುಹಾಜರಿ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸುತ್ತಾ, ಒಬ್ಬರಿಗೆ ಪೈಲ್ಸ್ ಆಗಿದ್ದರೆ, ಇನ್ನೊಬ್ಬರಿಗೆ 104 ಡಿಗ್ರಿ ಜ್ವರ... ಮಗದೊಬ್ಬರಿಗೆ ಆರೋಗ್ಯ ಸರಿಯಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸಭೆಗೆ ಒಟ್ಟು 10 ಮಂದಿ ಗೈರು ಹಾಜರಾಗಿದ್ದು ಅವರ ಪೈಕಿ ಏಳು ಮಂದಿ ಅನುಮತಿ ಪಡೆದಿದ್ದರು, ಆದರೆ ಮೂವರು ಯಾವುದೇ ಮಾಹಿತಿ ನೀಡಿಲ್ಲ. ಈ ಮೂವರು ಶಾಸಕರು ಜೆಡಿಎಸ್‌ನಿಂದ ಹೊರ ಹೋಗುವುದು ಖಚಿತ ಎನ್ನಲಾಗುತ್ತಿದೆ. ಇವರರೊಂದಿಗೆ ಇತರೆ ಶಾಸಕರು ಪಕ್ಷಾಂತರ ಮಾಡಿದರೆ ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ ಅಸ್ತಿತ್ವ ಕಳೆದುಕೊಳ್ಳುವುದು ಸನ್ನಿಹಿತವಾಗಲಿದೆ. [ಬದುಕಿರುವವರೆಗೆ ಸಹೋದರ ರೇವಣ್ಣನ ಜೊತೆ ಜಗಳವಾಡಲ್ಲ]

HD Kumaraswamy faces humiliation again in Mysuru

ಇದರಿಂದಾಗಿ ಶಾಸಕರ ಸಭೆ ಕರೆದರೂ ಯಾವುದೇ ಪ್ರಯೋಜನವಾಗದಿರುವುದು ಕುಮಾರಸ್ವಾಮಿ ಅವರನ್ನು ಆತಂಕಕ್ಕೀಡು ಮಾಡಿದೆ. ಗೈರಾದ ಮೂವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಆದರೆ ಕ್ರಮಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನು ಶಾಸಕರು ನೀಡುವಂತೆ ಕಾಣುತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All is not well in Janadal Secular in Karnataka. This proved again in Mysuru when H.D. Kumaraswamy had called meeting of legislators in a resort. Many notable leaders kept away from the meeting. Infuriated Kumaraswamy has made mockery of their absence.
Please Wait while comments are loading...