ಪ್ರತಿಷ್ಠೆಯ ಕಣವಾದ ಹಾಸನ ಕ್ಷೇತ್ರ ಕುರಿತು ದೇವೇಗೌಡ್ರು ಮೀಟಿಂಗ್! ಸಭೆಯಿಂದ ದೂರ ಉಳಿದ ಕುಮಾರಸ್ವಾಮಿ! ಕಾರಣವೇನು?
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಗೊಂದಲಕ್ಕೆ ತೆರೆ ಎಳೆಯುವ ಕುರಿತು ಹಾಸನ ಮುಖಂಡರ ಜೊತೆಗೆ ಸಭೆ ನಡೆಸಿದರು.
ಬೆಂಗಳೂರು, ಮಾರ್ಚ್ 21: ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್ ಗೆ ಹಾಸನ ವಿಧಾನಸಭಾ ಕ್ಷೇತ್ರವೇ ದೊಡ್ಡ ತಲೆನೋವಾಗಿದೆ.
ಈಗಾಗಲೇ ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ದಳಪತಿಗಳು ಕ್ಷೇತ್ರವನ್ನ ಕಳೆದುಕೊಳ್ಳುತ್ತಿದ್ದು, ಈ ಬಾರಿ ಚುನಾವಣೆಯಲ್ಲಿ ಕಳೆದುಕೊಂಡ ಸ್ಥಾನವನ್ನ ಮತ್ತೆ ಮರಳಿ ಪಡೆಯಬೇಕು ಎಂದು ದೊಡ್ಡ ಗೌಡರು ಪ್ಲಾನ್ ನಡೆಸಿದ್ದಾರೆ.

ಈ ಕುರಿತು ಸೋಮವಾರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ಹಾಸನ ಜಿಲ್ಲಾ ಜೆಡಿಎಸ್ ಅಭ್ಯರ್ಥಿಗಳ ಸಭೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ನಡೆಯಿತು. ಈಗಾಗಲೇ ಅರಕಲಗೂಡು ಹಾಗೂ ಅರಸೀಕೆರೆ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕರು ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ. ಹೀಗಾಗಿ ಹಾಸನ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಗೆಲ್ಲುವ ಸಾಧಿಸಿ, ಹಾಸನ ಕ್ಷೇತ್ರದ ಟಿಕೆಟ್ ಸಂಬಂಧ ಹೆಚ್ಚು ತಲೆಕೆಡಿಸಿಕೊಳ್ಳೋದು ಬೇಡ ಎಂದು ದೇವೇಗೌಡ್ರು ಸೂಚನೆ ನೀಡಿದ್ದಾರೆ.
ಈಗಾಗಲೇ ಸ್ವರೂಪ್ ಪ್ರಕಾಶ್ ಗೆ ಹಾಸಪನ ಟಿಕೆಟ್ ನೀಡುವ ಕುರಿತು ಕುಮಾರಸ್ವಾಮಿ ಒಲುವು ತೋರಿದ್ರು, ಆದರೆ, ಹಾಸನ ಟಿಕೆಟ್ ಗಾಗಿ ಪಟ್ಟು ರೇವಣ್ಣ ದಂಪತಿಗಳು ಪಟ್ಟು ಹಿಡಿದಿದ್ದು,ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದ ಟಿಕೆಟ್ ಅನ್ನು ಸಾಮಾನ್ಯ ಕಾರ್ಯಕರ್ತನಿಗೆ ನೀಡುತ್ತೇನೆ ಎಂದು ಸಾಕಷ್ಟು ಬಾರೀ ಹೇಳಿಕೆಯನ್ನ ನೀಡಿದ್ರು, ಆದರೆ ಟಿಕೆಟ್ ಕುರಿತು ಕುಟುಂಬದಲ್ಲಿ ನಡೆಯುತ್ತಿರುವ ಚರ್ಚೆಯಿಂದಾಗಿ ಕುಮಾರಸ್ವಾಮಿ ಅವರು ದೇವೇ ಗೌಡರ ಜೊತೆಗಿನ ಹಾಸನ ಶಾಸಕರ ಸಭೆಗೆ ಗೈರಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಇನ್ನೂ ಸಭೆಯ ಬಳಿಕ ಮಾಜಿ ಸಚಿವ ರೇವಣ್ಣ ಮಾತನಾಡಿ, ದೇವೇಗೌಡರು ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಗೆಲ್ಲಬೆಕು ಅಂತ ಸೂಚನೆ ಕೊಟ್ಟಿದ್ದಾರೆ. ಈ ಪಕ್ಷ ಧೃಡವಾಗಿದ್ದು, ಕುಮಾರಸ್ವಾಮಿ ಕೊಟ್ಟ ಅನುದಾನಕ್ಕೆ ಬಿಜೆಪಿ ತಡೆ ಹಾಕಿದೆ ಎಂದು ಕಿಡಿಕಾರಿದರು. ಇನ್ನೂ ಕಾಂಗ್ರೆಸ್ ಮತ್ತು ಬಿಜೆಪಿಯಿಂದಲೇ ಐಐಟಿ, ವಿಮಾನ ನಿಲ್ದಾಣಕ್ಕೆ ತಡೆಯಾಗಿದೆ. ಆದರೂ ನಾವು ಧೃತಿಗೆಡದೆ ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಪಂಚರತ್ನ ಯಾತ್ರೆ ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಅವರು ಡಜನ್ ಗಟ್ಟಲೆ ಜನರನ್ನು ಕರೆದುಕೊಂಡು ಯಾತ್ರೆ ಮಾಡ್ತಾ ಇದ್ದಾರೆ. ಬೆಸ್ಕಾಂ ನಲ್ಲಿ 48 ಸಾವಿರ ಕೋಟಿ ಈಗ ನಷ್ಟದಲ್ಲಿದೆ. ಕಾಂಗ್ರೆಸ್ ನವರು ಯಾರಿಗೆ ಗ್ಯಾರಂಟಿ ಕಾರ್ಡ್ ಕೊಡುತ್ತಾರೆ. ಮೈಸೂರು ಬೆಂಗಳೂರು ಹೆದ್ದಾರಿ ಇಷ್ಟು ಶರವೇಗದಲ್ಲಿ ಆಗಿದೆ ಎಂದರೆ ಅದಕ್ಕೆ ಕುಮಾರಸ್ವಾಮಿ ಮತ್ತು ನಾನು ಕಾರಣ. ನಾನು ಭೂಮಿ ಕೊಡದೇ ಹೋಗಿದ್ದಿದ್ದರೆ ಏನಾಗುತ್ತಿತ್ತು? ಮೈಸೂರು ಸಂಸದರು ಏನು ಹೇಳುತ್ತಾರೋ ಆ ಬಗ್ಗೆ ನಾನು ಮಾತಾಡುವುದಿಲ್ಲ ಎಂದರು.
ಇನ್ನೂ ಹಾಸನದ ಟಿಕೆಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ ಎಂದು ದೇವೇಗೌಡರು ಹೇಳಿದ್ದಾರೆ. ಏನಾಗಿತ್ತದೆ ಅಂತ ಪರದೆ ಮೇಲೆ ನಡೆಯಲಿ. ಎರಡು ರಾಷ್ಟ್ರೀಯ ಪಕ್ಷ ಟ್ರೈಲರ್ ಬಿಡುಗಡೆ ಮಾಡಲಿ, ಆಮೇಲೆ ನೋಡೊಣ. ದೇಶದಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕು. ಕುಮಾರಸ್ವಾಮಿ ಶಿಕ್ಷಣ ಇಲಾಖೆಗೆ ಕ್ರಾಂತಿ ಮಾಡಿದ್ದಾರೆ. ಶಾಲೆ, ಶಿಕ್ಷಕರನ್ನು ನೇಮಿಸಿದ್ದು ಕುಮಾರಸ್ವಾಮಿಯವರು. ಅನೇಕ ಯೋಜನೆಗಳನ್ನು ನೀಡಿರುವುದು ಕುಮಾರಸ್ವಾಮಿ ಎಂದರು.












Click it and Unblock the Notifications