ಕಡ್ಡಾಯ ಮತದಾನ ನಿಯಮ ಮುರಿದ ದೇವೇಗೌಡ್ರು!

ಬೆಂಗಳೂರು, ಮೇ.31: ರಾಜ್ಯದ 15 ಜಿಲ್ಲೆಗಳಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಸಂಪೂರ್ಣ ಯಶಸ್ವಿಯಾಗಿದೆ. ರಾಜ್ಯದಲ್ಲಿ ಒಟ್ಟಾರೆ ಶೇ 80.33ರಷ್ಟು ಮತದಾನ ದಾಖಲಾಗಿದೆ. ಈ ನಡುವೆ ಮಾಜಿ ಪ್ರಧಾನಿ ದೇವೇಗೌಡ ಅವರು ಮತದಾನಕ್ಕೆ ಗೈರಾಗಿದ್ದು ಸದ್ಯದ ಚರ್ಚಿತ ವಿಷಯ.

ಕಡ್ಡಾಯ ಮತದಾನ ಜಾರಿಗೊಳಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಿ, ತಮ್ಮ ಮತ ಕ್ಷೇತ್ರದ ವ್ಯಾಪ್ತಿಗೆ ಬರುವ ಸಿದ್ದರಾಮನ ಹುಂಡಿಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದು, ಐಡಿ ಕಾರ್ಡ್ ಇಲ್ಲ ನಾನೇ ಐಡೆಂಟಿಟಿ ಎಂದು ಹೇಳಿದ್ದು ಎಲ್ಲರ ಗಮನ ಸೆಳೆದಿತ್ತು.[ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮತದಾನ ಕಡ್ಡಾಯ]

ಈಗ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಿಲ್ಲ ಎಂಬ ಸುದ್ದಿ ಬಂದಿದೆ. ಸಾಮಾನ್ಯವಾಗಿ ಎಲ್ಲಾ ಚುನಾವಣೆಯಲ್ಲಿ ಮತದಾನ ಮಾಡುವ ದೇವೇಗೌಡ್ರು ಗ್ರಾಮ ಪಂಚಾಯಿತಿ ಚುನಾವಣೆ ಮತದಾನಕ್ಕೆ ಏಕೆ ಗೈರು ಹಾಜರಾದರು ಎಂಬ ವಿಷಯ ಗೊತ್ತಿಲ್ಲ. [ಓಟ್ ಒತ್ತುವಾಗ ಬಾಡಿ ಶೇಕ್ ಆಗಿದ್ದು ಯಾಕೆ?]

ಹಾಸನದ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ ದೇವೇಗೌಡ ಹಾಗೂ ಅವರ ಕುಟುಂಬದ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿದೆ. [ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ ಡಿಕೆ ರವಿ ಕುಟುಂಬ]

ಮತದಾನಕ್ಕೂ ಎರಡು ದಿನ ಮುಂಚೆ ಅರಸೀಕೆರೆಗೆ ರೈಲಿನಲ್ಲಿ ಹೋಗಿದ್ದ ದೇವೇಗೌಡ್ರು, ಗುರುವಾರ ಮೈಸೂರಿನಲ್ಲಿ ನಡೆದ ಯದುವೀರ ಒಡೆಯರ್ ಪಟ್ಟಾಭಿಷೇಕ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು. ಅದರೆ, ಶುಕ್ರವಾರ ಅವರಿಗೆ ಅನಾರೋಗ್ಯ, ಬಳಲಿಕೆ ಕಾಡಿದ್ದರಿಂದ ಮತದಾನಕ್ಕೆ ಗೈರು ಹಾಜರಾದರು ಎಂಬ ಸುದ್ದಿ ಬಂದಿದೆ. ದೇವೇಗೌಡ್ರ ಪತ್ನಿ ಚನ್ನಮ್ಮ ಅವರು ಕೂಡಾ ಈ ಬಾರಿ ಮತ ಹಾಕಿಲ್ಲ.

ಮತದಾನ ಮಾಡಿದ ಪ್ರಮುಖರು

ಮತದಾನ ಮಾಡಿದ ಪ್ರಮುಖರು

ಸಿದ್ದರಾಮಯ್ಯ ಸಂಪುಟ ಸದಸ್ಯರಾದ ಸಚಿವ ಅಂಬರೀಷ್, ಡಾ.ಮಹಾದೇವಪ್ಪ, ಮಹದೇವಪ್ರಸಾದ್, ರಮಾನಾಥ್ ರೈ, ವಿನಯಕುಮಾರ್ ಸೊರಕೆ, ಎಚ್.ಕೆ. ಪಾಟೀಲ್ ಸೇರಿದಂತೆ ಬಹುತೇಕ ಶಾಸಕರು, ಸಂಸದರು ತಮ್ಮ ತಮ್ಮ ಗ್ರಾಮಗಳಲ್ಲಿ ಮತದಾನ ಮಾಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಮತದಾನಕ್ಕೆ ಗೈರು ಹಾಜರಾಗಿದ್ದಾರೆ.

ಮೊದಲ ಹಂತದ ಮತದಾನ ಎಲ್ಲೆಲ್ಲಿ?

ಮೊದಲ ಹಂತದ ಮತದಾನ ಎಲ್ಲೆಲ್ಲಿ?

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಹಾವೇರಿ, ಧಾರವಾಡ ಗದಗ, ಬಿಜಾಪುರ, ಬಾಗಲಕೋಟೆ, ಉತ್ತರ ಕನ್ನಡ ಸೇರಿದಂತೆ 15 ಜಿಲ್ಲೆಗಳಲ್ಲಿ ಮುಂಜಾನೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಿತು. ಇಲ್ಲಿ ಬಳಸಿರುವುದು ಸಾಂದರ್ಭಿಕ ಚಿತ್ರ

ಎರಡನೇ ಹಂತದ ಮತದಾನ ಯಾವಾಗ?

ಎರಡನೇ ಹಂತದ ಮತದಾನ ಯಾವಾಗ?

ಎರಡನೇ ಹಂತದ ಚುನಾವಣೆ - ಜೂನ್ 2
ಅಧಿಸೂಚನೆ ಪ್ರಕಟ - ಮೇ 15
ನಾಮಪತ್ರ ಸಲ್ಲಿಕೆ ಕೊನೆ ದಿನ - ಮೇ 22
ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ - ಮೇ 25
ಅಗತ್ಯ ಬಿದ್ದರೆ ಮೊದಲ ಹಂತಕ್ಕೆ ಮೇ 31 ರಂದು 2 ನೇ ಹಂತಕ್ಕೆ ಜೂನ್ 4 ರಂದು ಮರುಮತದಾನ. ಜೂ.5ರಂದು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ. ಒಟ್ಟಾರೆ 5844 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ.
ಚಿತ್ರದಲ್ಲಿ ರಾಜ್ಯ ಚುನಾವಣಾಧಿಕಾರಿ ಶ್ರೀನಿವಾಸಾಚಾರಿ.

ಎರಡನೇ ಹಂತದ ಚುನಾವಣೆ ಎಲ್ಲೆಲ್ಲಿ?

ಎರಡನೇ ಹಂತದ ಚುನಾವಣೆ ಎಲ್ಲೆಲ್ಲಿ?

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೀದರ್, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಮತದಾನ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+