ಧಾರ್ಮಿಕ ನಗರಿ ಕಳಸಕ್ಕೆ ತಾಲೂಕು ಮಾನ್ಯತೆ ನೀಡಿ: ದೇವೇಗೌಡ
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕಳಸಕ್ಕೆ ತಾಲೂಕಿನ ಮಾನ್ಯತೆ ನೀಡಬೇಕೆಂದು ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಳಸ(ಚಿಕ್ಕಮಗಳೂರು), ಮಾರ್ಚ್ 28: ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕಳಸಕ್ಕೆ ತಾಲೂಕಿನ ಮಾನ್ಯತೆ ನೀಡಬೇಕೆಂದು ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದು ಮೂರು ದಶಕಗಳ ಬೇಡಿಕೆಯಾಗಿದ್ದು, ನನಗೂ ಕೂಡಾ ಈ ಬಗ್ಗೆ ಬೇಡಿಕೆ ಪತ್ರ ಬಂದಿದೆ. ಈ ಬಗ್ಗೆ ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ದೇವೇಗೌಡ ಅವರು ಅಧಿಕೃತ ಪತ್ರದ ಮೂಲದ ಮನವಿ ಸಲ್ಲಿಸಿದ್ದಾರೆ. ಈ ಮೂಲಕ 'ಕಳಸ ತಾಲೂಕು ಕೇಂದ್ರ' ವಾಗಲಿ ಎಂಬ ಕೂಗಿದೆ ಬಲ ಬಂದಿದೆ.[49 ಹೊಸ ತಾಲೂಕುಗಳು, ಅವುಗಳ ಹೆಸರುಗಳು]

ಎಂಬಿ ಪ್ರಕಾಶ್ ತಾಲೂಕು ರಚನಾ ಸಮಿತಿ ವರದಿ ಆಧಾರದ ಮೇಲೆ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ 43 ಹೊಸ ತಾಲೂಕುಗಳನ್ನು ಘೋಷಿಸಿತ್ತು. ಇದಕ್ಕೆ ಆರು ಹೊಸ ತಾಲೂಕು ಸೇರಿಸಿ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.[ಬಜೆಟ್ : ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ]











Click it and Unblock the Notifications