HD Deve Gowda: ಮೊಮ್ಮಗನ ಪರ ಅಬ್ಬರದ ಪ್ರಚಾರ ನಡೆಸಿದ ಹೆಚ್‌ ಡಿ ದೇವೇಗೌಡ್ರು

ರಾಮನಗರ, ನವೆಂಬರ್‌ 07: ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕಳೆದ ಮೂರು ದಿನಗಳಿಂದ ನಿರಂತರವಾಗಿ ಪ್ರಚಾರ ನಡೆಸುತ್ತಿದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ್ರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಚಾರ ಭಾಷಣದ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು, ನಾನು ಈ ಕ್ಷೇತ್ರವನ್ನು ನಿರ್ಮಿಸಿದ್ದೇನೆ ಅಂತಾ ಹೇಳುವುದಿಲ್ಲ, ಆದರೆ ನಾನು ನಿಖಿಲ್ ಕುಮಾರಸ್ವಾಮಿ ಪರ ಕೈಚಾಚಲು ಇಲ್ಲಿ ಬಂದಿದ್ದೇನೆ. ಈ ಪ್ರದೇಶದಲ್ಲಿ ಹೈನುಗಾರಿಕೆಯನ್ನು ಬಲಪಡಿಸುವಂತಹ ಅನೇಕರ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

HD Deve Gowda campaigning for NDA candidate Nikhil Kumaraswamy in Channapatna

ನಾನು ಇಗ್ಗಲೂರು ಡ್ಯಾಂ ನಿರ್ಮಾಣ ಮಾಡಿದ್ದೇನೆ. ಆದರೆ ಕೆಲವರು ನೀರನ್ನು ತಂದುಕೊಟ್ಟವರಂತೆ ನಾಟಕ ಮಾಡುತ್ತಾರೆ. ಇದು ರೈತನ ಮಗನ ಕೆಲಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನ ಮೇಲೆ ಚಾಟಿ ಬೀಸಿದರು.
ಸಿದ್ದರಾಮಯ್ಯನ ಅಧಿಕಾರದ ಮೇಲೆ ದೊಡ್ಡ ಮಾತುಗಳ ಬಗ್ಗೆ ದೇವೇಗೌಡರು ನಗುತ್ತಾ, ಅವರು, ನಾನು ಇಂದು ಮುಖ್ಯಮಂತ್ರಿಯಾಗಿದ್ದೇನೆ, ನಾಳೆಯೂ ಮುಂಬರುವೆ' ಅಂತಾರೆ. ಹೀಗೆಲ್ಲಾ ಮಾತಾಡುತ್ತೀರಾ?" ಎಂದು ವ್ಯಂಗ್ಯವಾಡಿ, "ಯಾವ ಸಿದ್ದರಾಮಯ್ಯ ಇತ್ತೀಚಿಗೆ ಲೋಕಾಯುಕ್ತ ವಿಚಾರಣೆಗೆ ಹೋಗಿದ್ದಾರೋ ಅಂದ್ರು?.

ನಾನು ಸಾಮಾನ್ಯ ರೈತನ ಮಗ, ರೈತರ ಕಷ್ಟವನ್ನು ನಾನು ಅರಿಯುತ್ತೇನೆ. ಜನರು ನನಗೆ, ನಾನು ಮೊಮ್ಮಗನ ಗೆಲ್ಲಿಸಲು ಬಂದಿದ್ದೇನೆ ಅಂತಾರೆ. ಆದರೆ ನಾನು ನಿಮ್ಮ ಆಶೀರ್ವಾದದಿಂದ ಇನ್ನೂ ಕೆಲವು ವರ್ಷ ಬದುಕಿ, ಈ ಸರ್ಕಾರದ ವಿರುದ್ಧ ಹೋರಾಟವನ್ನು ಮುಂದುವರಿಸಲು ಆಶಿಸುತ್ತೇನೆ. ಈ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ. ಇವರು ಇದ್ದಂತೆ ಬಡವರಿಗೆ ನೆಮ್ಮದಿ ಇಲ್ಲ, ರೈತರಿಗೆ ನೆಮ್ಮದಿ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ್ರು ಹೇಳಿದರು.

ನಾನು ಈ ಸರ್ಕಾರದ ವಿರುದ್ಧ ಮಾತನಾಡಲು ಅಪೇಕ್ಷಿಸೋದಿಲ್ಲ, ಆದರೆ ಈಗ ಮಾತನಾಡಬೇಕಾಗುತ್ತಿದೆ. ಕನಕಪುರಕ್ಕೆ ಹೋಗಿ ನೋಡಿ, ಡಿಕೆ ಸಹೋದರರು ಹೇಗೆ ಇತರರ ಜಮೀನುಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು. ನಾನು ಮತ್ತೊಮ್ಮೆ ರಾಂಪುರಕ್ಕೆ ಚುನಾವಣೆಗೆ ಬರುವೆ. ಈ ಸರ್ಕಾರ ನಿಮ್ಮ ರಕ್ತ ಹೀರುತ್ತಿದೆ, ಅದನ್ನು ಕಿತ್ತೊಗೆಯಬೇಕು ಎಂದು ಹೇಳಿದ್ದಾರೆ.

ಪ್ರಚಾರ ಸಭೆಯಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯಗಳನ್ನು ಜನರ ಮುಂದೆ ಎತ್ತಿ ಹಿಡಿದ ದೇವೇಗೌಡರು, ರಾಜ್ಯ ಖಜಾನೆ ಖಾಲಿ ಆಗಿದೆ, ರಾಜ್ಯ ದಿವಾಳಿ ಆಗಿದೆ. ಅಭಿವೃದ್ದಿ ಕೆಲಸಗಳಿಗೆ ಹಣ ಇಲ್ಲ. ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಮಾಡಿದರು. ಇಬ್ಬರೂ ಹಿರಿಯ ನಾಯಕರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರಲ್ಲದೆ, ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ನೀಡುವ ಮೂಲಕ ಅಭಿವೃದ್ಧಿಪರ ರಾಜಕಾರಣಕ್ಕೆ ಮಣೆ ಹಾಕಬೇಕು ಎಂದು ಮನವಿ ಮಾಡಿದರು.

ಗೆಲುವು ನಿನ್ನದೇ... ಅಜ್ಜಿಯ ಆಶೀರ್ವಾದ

ದೇವೇಗೌಡರ ಮೊಮ್ಮಗನನ್ನು ನೋಡಬೇಕು ಅಂತ ಕಾದು ಕುಳಿತಿದ್ದ ಗುಡ್ಡೆ ತಿಮ್ಮಸಂದ್ರ ಗ್ರಾಮದ ಅಜ್ಜಿಯನ್ನು ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ಮಾಡಿ ಮಾತನಾಡಿಸಿದರು. ಬೆನ್ನು ಬಾಗಿ ನಡೆಯಲು ಕಷ್ಟಪಡುತ್ತಿದ್ದ ಅಜ್ಜಿಯ ಅರೋಗ್ಯವನ್ನು ವಿಚಾರಿಸಿದರು.

ಪ್ರಚಾರದ ವೇಳೆ ಅಜ್ಜಿಯೊಬ್ಬರು ನಿಖಿಲ್ ಅವರಿಗೆ ಗೆದ್ದೇ ಗೆಲ್ಲುತ್ತೀಯಾ ಹೋಗು ಮಗನೇ ಎಂದು ಹರಸಿ ಆಶೀರ್ವದಿಸಿದರು.ನಂತರ ನಿಖಿಲ್ ನಿಖಿಲ್‌ ಕುಮಾರಸ್ವಾಮಿ ಅಜ್ಜಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಅಜ್ಜಿಯಿಂದ ಮಾತಿನಿಂದ ನಿಖಿಲ್ ಅವರು ನಿಮ್ಮಂಥ ಹಿರಿಯರ ಆಶೀರ್ವಾದ ಇದ್ದರೆ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+