• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ ಮುಕ್ತ ಮಾಡುವುದೇ 'ಮನುವಾದಿ' ಬಿಜೆಪಿಗರ ಗುರಿ

By ಡಾ.ಎಚ್.ಸಿ.ಮಹದೇವಪ್ಪ
|
Google Oneindia Kannada News

ಎದುರಾಳಿ ಪಕ್ಷದ 17 ಜನ ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡು ಅನೈತಿಕ ಮಾರ್ಗದಲ್ಲಿ ಸರ್ಕಾರವನ್ನು ರಚಿಸಲು ಹೊರಟಿದ್ದ ಪ್ರಯತ್ನಕ್ಕೆ ನೇರವಾಗಿ ಬೆಂಬಲ ನೀಡಿದ್ದು ಬಿಜೆಪಿ ಪಕ್ಷ.

ಇದೀಗ ಪಕ್ಷವು ಒಂದು ಹಂತಕ್ಕೆ ತಲುಪುತ್ತಿದೆ ಎಂಬ ಸೂಚನೆಯನ್ನು ಅರಿತಾಕ್ಷಣ ಸರ್ಕಾರ ರಚನೆಗೆ ಕಾರಣರಾದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿ ನಿರ್ದಾಕ್ಷಿಣ್ಯವಾಗಿ ಮನೆಗೆ ಕಳಿಸಿದ್ದಾರೆ.

ವಿದಾಯ ಭಾಷಣದಲ್ಲೂ ಅಪ್ಪ, ಮಗನನ್ನು ಕುಟುಕಿದ ಯಡಿಯೂರಪ್ಪವಿದಾಯ ಭಾಷಣದಲ್ಲೂ ಅಪ್ಪ, ಮಗನನ್ನು ಕುಟುಕಿದ ಯಡಿಯೂರಪ್ಪ

ಓರ್ವ ಜನ ಬೆಂಬಲ ಇರುವ ನಾಯಕನಾಗಿದ್ದರೂ ಕೂಡಾ ಕೇಂದ್ರದ ಬಿಜೆಪಿ ಪಕ್ಷದ ನಾಯಕರ ಪ್ರೇರಣೆಯಿಂದ ಅನೈತಿಕ ಮಾರ್ಗದಲ್ಲಿ ಸರ್ಕಾರವನ್ನು ರಚಿಸಿದ ಯಡಿಯೂರಪ್ಪನಂತಹ ನಾಯಕನನ್ನು ಎರಡನೇ ಆಲೋಚನೆಯೇ ಇಲ್ಲದೇ ಬಿಜೆಪಿ ಪಕ್ಷವು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದೆ.

ಮತ್ತು, ಆ ಮೂಲಕ ಯಡಿಯೂರಪ್ಪನವರಿಗೂ ಕೂಡಾ ಮನುವಾದಿಗಳ ಫ್ಯಾಸಿಸಂನ ಸ್ವರೂಪ ಹೇಗಿರುತ್ತದೆ ಎಂಬುದರ ಪರಿಚಯವಾಗಿದ್ದು ಇದೇ ಫ್ಯಾಸಿಸಂನ ಮೂಲ ಮಂತ್ರ ಮತ್ತು ತಂತ್ರವಾಗಿದೆ.

ಇದರ ಜೊತೆಗೆ ಯಡಿಯೂರಪ್ಪನವರನ್ನೇ ನಂಬಿಕೊಂಡು ಮಾಡಬಾರದ್ದನ್ನಲ್ಲಾ ಮಾಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಹೋಗಿದ್ದ 17 ಜನ ಶಾಸಕರು ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು.

 ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ: ಹಾಲು ಕುಡಿದವರು ಯಾರ್ಯಾರು? ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ: ಹಾಲು ಕುಡಿದವರು ಯಾರ್ಯಾರು?

ಆದರೆ ಹಿರಿತನ ಮತ್ತು ಅವರ ಹಿಂದಿನ ಜನ ಬೆಂಬಲವನ್ನೂ ಲೆಕ್ಕಿಸದೇ ಇದೀಗ ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವ ಕಾರಣ ಇದೀಗ ಅವರನ್ನು ಮುಖ್ಯಮಂತ್ರಿ ಮಾಡಲು ಹೋದ 17 ಜನರು ಯಾವ ನೈತಿಕತೆಯ ಆಧಾರದ ಮೇಲೆ ತಮ್ಮ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎಂಬುದು ನನ್ನ ಪ್ರಶ್ನೆಯಾಗಿದೆ.

ಹೀಗಾಗಿ ಇವರೆಲ್ಲರೂ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಸಾರ್ವಜನಿಕ ಜನಾಭಿಪ್ರಾಯ ಪಡೆಯುವುದೇ ಸೂಕ್ತ ಎಂದು ಈ ಮೂಲಕ ನಾನು ಆಗ್ರಹಿಸುತ್ತೇನೆ!

   ಯಡಿಯೂರಪ್ಪನವರ ಪಾತ್ರವೇ ಇಲ್ಲ ಅಂದ್ಮೇಲೆ ಅವರ ಮಕ್ಕಳ ಪಾತ್ರ ಎಲ್ಲಿರುತ್ತೆ? | Oneindia Kannada
   English summary
   Dr HC Mahadevappa reaction to BS Yeddyurappa resign to CM of Karnataka. Read on.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X