Get Updates
Get notified of breaking news, exclusive insights, and must-see stories!

ಒಂದೇ ದಿನ ದಾಖಲೆಯ 600 ಕೇಸ್ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ

ಬೆಂಗಳೂರು, ಜೂನ್ 19: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಂಗಳವಾರ ಒಂದೇ ದಿನದ ಕಲಾಪದಲ್ಲಿ ಬರೋಬ್ಬರಿ 600 ಪ್ರಕರಣ ವಿಚಾರಣೆ ನಡೆಸಿದ್ದಾರೆ.

ಈ ಹಿಂದೆ ಅವರು ಒಂದೇ ದಿನ 801 ಅರ್ಜಿಗಳನ್ನು ವಿಚಾರಣೆ ನಡೆಸಿದ್ದರು. ಇದೀಗ ಅದೇ ಹಾದಿಯಲ್ಲಿ ಮತ್ತೆ ಹೆಜ್ಜೆ ಇಟ್ಟಿದ್ದು ತ್ವರಿತ ನ್ಯಾಯದಾನಕ್ಕೆ ಹೆಸರುವಾಸಿಯಾದ ಅವರು ಎಂಥಹುದೇ ವ್ಯಾಜ್ಯವಿರಲಿ ಫಟಾಫಟ್ ವಿಚಾರಣೆ ನಡೆಸಿ, ಅಷ್ಟೇ ವೇಗವಾಗಿ ತೀರ್ಪುಗಳನ್ನು ನೀಡುವುದರಲ್ಲಿ ಸಿದ್ಧಹಸ್ತರು.

HC Judge M Nagaprasanna Disposed 600 Petitions In A Single Day

ಬೆಂಗಳೂರು ಪ್ರಧಾನ ಪೀಠದಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಕೋರ್ಟ್‌ಹಾಲ್‌ನ ಕೇಸ್‌ಲಿಸ್ಟ್‌ನಲ್ಲಿ (ವ್ಯಾಜ್ಯಗಳ ಪಟ್ಟಿ) 600 ಅರ್ಜಿಗಳನ್ನು ವಿಚಾರಣೆಗೆ ನಿಗದಿಪಪಡಿಸಲಾಗಿತ್ತು. ಅಷ್ಟೂ ಅರ್ಜಿಗಳ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆ 56 ನಿಮಿಷಕ್ಕೆ ಪೂರ್ಣಗೊಳಿಸಿ ಕಲಾಪ ಮುಗಿಸಿದರು. ನಿಗದಿಯಾಗಿದ್ದ 600 ಅರ್ಜಿಗಳ ಪೈಕಿ 180 ಅರ್ಜಿಗಳ ಸಂಬಂಧ ಮಧ್ಯಂತರ ಆದೇಶ ಮಾಡಿದ್ದಾರೆ. 87 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ವಿಲೇವಾರಿ ಮಾಡಿದ್ದಾರೆ.

ನ್ಯಾ. ನಾಗಪ್ರಸನ್ನ ಅವರು ಇದೇ 2024ರ ಮಾ.22ರಂದು ಒಂದೇ ದಿನದ ಕಲಾಪದದಲ್ಲಿ 801 ಅರ್ಜಿಗಳನ್ನು ವಿಚಾರಣೆ ನಡೆಸಿದ್ದರು. ಅವುಗಳ ಪೈಕಿ 36 ಅರ್ಜಿಗಳ ಸಂಬಂಧ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ್ದರು. ಉಳಿದಂತೆ ಸುಮಾರು 572 ಅರ್ಜಿಗಳನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಿದ್ದರು. ಇತ್ಯರ್ಥವಾದ ಪ್ರಕರಣಗಳಲ್ಲಿ 544 ಅರ್ಜಿಗಳು ಬೆಂಗಳೂರು ಜಲಮಂಡಳಿಗೆ ಸಂಬಂಧಿಸಿದ್ದಾಗಿದ್ದವು.

ಈ ಹಿಂದೆ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು, ಒಂದೇ ದಿನದ ಕಲಾಪದಲ್ಲಿ ಸುಮಾರು 750 ಅರ್ಜಿಗಳನ್ನು ವಿಲೇವಾರಿ ಮಾಡಿದ ಉದಾಹರಣೆಯಿದೆ. ಹೀಗೆ ನೂರಾರು ಅರ್ಜಿಗಳನ್ನು ಒಂದೇ ದಿನದ ಕಲಾಪದಲ್ಲಿ ವಿಲೇವಾರಿ ಮಾಡುವುದು ಅತ್ಯಂತ ಅಪರೂಪದ ಸಂಗತಿಯಾಗಿದೆ.

2023ರ ಡಿಸೆಂಬರ್‌ನಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಗಣ ವಿಚಾರಣೆ ನಡೆಸುತ್ತಿದ್ದರು. ಆಗ ಒಂದೇ ದಿನ 50 ಪ್ರಕರಣಗಳ ತೀರ್ಪನ್ನು ಪ್ರಕಟಿಸಿದ್ದರು. ಸೂರಜ್ ರೇವಣ್ಣ, ಕೊತ್ತನೂರು ಮಂಜುನಾಥ್, ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ವಿವಿಧ ಜನಪ್ರತಿನಿಧಿಗಳ ಒಟ್ಟು 50 ಪ್ರಕರಣಗಳ ತೀರ್ಪು ಪ್ರಕಟಿಸಿದ್ದರು.

2022ರಲ್ಲಿ ಒಡಿಶಾ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ಒಂದೇ ದಿನ 32 ಪ್ರಕರಣಗಳ ತೀರ್ಪು ನೀಡಿದ್ದರು. 2023ರಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು 65 ತೀರ್ಪುಗಳನ್ನು ಒಂದೇ ದಿನ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+