ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ: ರಸ್ತೆಯಲ್ಲೇ ಗಿಡನೆಟ್ಟು ವಿನೂತನ ಪ್ರತಿಭಟನೆ

By ನಮ್ಮ ಪ್ರತಿನಿಧಿ
|
Google Oneindia Kannada News

ಹಾಸನ, ಜುಲೈ 03: ನಗರದ ರಿಂಗ್ ರಸ್ತೆಯ ಚಿಕ್ಕಹೊನ್ನೇನಹಳ್ಳಿ ಬಳಿಯಿರುವ ಜಯನಗರ 2ನೇ ಹಂತದ ದೇವಿರಮ್ಮ ರಸ್ತೆಯಲ್ಲಿ ಶನಿವಾರ ನಾಗರಿಕರು ರಸ್ತೆ ನಡುವೆಯೇ ಗಿಡನೆಟ್ಟಿದ್ದಾರೆ. ಹಾಗೆಂದು ಇವರೇನು ಗಿಡನೆಟ್ಟು ಕೋಟಿವೃಕ್ಷ ಆಂದೋಲನಕ್ಕೆ ಸಾಥ್ ನೀಡಿದ್ದಲ್ಲ. ಬದಲಾಗಿ ಕೆಸರುಗದ್ದೆಯಂತಹ ರಸ್ತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿಯಷ್ಟೆ.

ಮಳೆ ಬಂದರೆ ಕೆಸರು ಗದ್ದೆಯಂತಾಗುವ ರಸ್ತೆಯನ್ನು ದುರಸ್ತಿ ಮಾಡಿಕೊಡಿ ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸುತ್ತಲೇ ಬರುತ್ತಿದ್ದರಾದರೂ ಇದಕ್ಕೆ ಯಾರೂ ಸೊಪ್ಪು ಹಾಕಿರಲಿಲ್ಲ. ಈ ರಸ್ತೆಯಲ್ಲಿ ತೆರಳುವ ವಾಹನ ಸವಾರರು ಸರ್ಕಸ್ ಮಾಡಿಕೊಂಡು ತೆರಳಿದರೆ, ರಸ್ತೆ ಬದಿಯಲ್ಲಿ ನಡೆದಾಡುವವರಿಗೆ ಕೆಸರಿನ ಸಿಂಚನದ ಜೊತೆಗೆ ಹೆಜ್ಜೆ ಹಾಕಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಹಲವರು ಆಯತಪ್ಪಿ ಬಿದ್ದ ಘಟನೆಗಳು ನಡೆದಿದ್ದವು.

Hassan : Chikkahonnenahalli villagers plant saplings on poorly constructed road

ರಸ್ತೆ ಸರಿಪಡಿಸುವಂತೆ ಹಲವು ಬಾರಿ ಹರಳಹಳ್ಳಿ ಗ್ರಾಮಪಂಚಾಯಿತಿ ಸದಸ್ಯರಿಗೆ ಮನವಿ ಮಾಡಿದರೂ ಅವರ್ಯಾರು ತಲೆಕೆಡಿಸಿಕೊಂಡಿರಲಿಲ್ಲ.

ಇದರಿಂದ ಆಕ್ರೋಶಗೊಂಡ ನಾಗರಿಕರು ಕೆಸರುಗದ್ದೆಯಂತಿದ್ದ ರಸ್ತೆಯಲ್ಲೇ ಗಿಡಗಳನ್ನು ನೆಟ್ಟು ಶನಿವಾರ ವಿನೂತನ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಈ ಪ್ರತಿಭಟನೆ ಇಷ್ಟಕ್ಕೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ಪ್ರತಿಭಟನಾಕಾರರು ಕೂಡಲೇ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆಯ ಎರಡು ಬದಿ ಬಂದ್ ಮಾಡಿ ಬೆಳೆ ಬೆಳೆಯಲಾಗುವುದಾಗಿ ಹೇಳಿದ್ದಾರೆ.

English summary
Hassan : In a unique way for protesting Chikkahonnenahalli villagers plant saplings on poorly constructed ring road also known as Deviramma road in Jayanagar 2nd phase, Hassan city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X