ಹಾಸನಾಂಬೆಗೆ ಕೋಟಿಗಟ್ಟಲೆ ಧನ, ಕನಕ ಅರ್ಪಣೆ
ಹಾಸನ, ನ,15: ಹಾಸನಾಂಬೆ ದೇಗುಲದ ವಾರ್ಷಿಕ ದರ್ಶನ, ಧಾರ್ಮಿಕ ಆಚರಣೆ, ಮಹೋತ್ಸವ ನ.14ಕ್ಕೆ ಸಂಪನ್ನಗೊಂಡಿದೆ.
ಹಾಸನಾಂಬೆ ವಾರ್ಷಿಕ 9 ದಿನದ ದರ್ಶನೋತ್ಸವದಲ್ಲಿ ಸರಿ ಸುಮಾರು 1.42 ಕೋಟಿ ರು. ಆದಾಯ ಸಂಗ್ರಹವಾಗಿದೆ.
ನ.5ರಂದು ಆರಂಭವಾದ ದರ್ಶನೋತ್ಸವ ನವೆಂಬರ್ 13ಕ್ಕೆ ಮುಕ್ತಾಯಗೊಂಡಿದೆ. ಹುಂಡಿ, ಹರಕೆ ರೂಪದ ಒಡವೆ ಸೇರಿ ಒಟ್ಟಾರೆ 1,42,84,989 ರು ಸಂಗ್ರಹವಾಗಿದೆ. ಇದು ಹಾಸನಾಂಬೆ ದೇವಾಲಯದ ಇತಿಹಾಸದಲ್ಲೇ ಸಂಗ್ರಹವಾಗಿರುವ ಅತ್ಯಧಿಕ ಕಾಣಿಕೆ. ಕಳೆದ ವರ್ಷ 1.27 ಕೋಟಿ ರು ಸಂಗ್ರಹವಾಗಿತ್ತು. [ಹಾಸಬಾಂಬೆ ಸ್ಥಳ ಪುರಾಣ ಓದಿ]

2013ರಲ್ಲಿ ಮೊದಲ ಬಾರಿಗೆ ಕಾಣಿಕೆ 1 ಕೋಟಿ ರೂ. ಗಡಿ ದಾಟಿತ್ತು. 13 ದಿನಗಳ ದರ್ಶನೋತ್ಸವ ನಡೆದು, 1,21,42,123 ರೂ. ಸಂಗ್ರಹವಾಗುವ ಮೂಲಕ ಹಾಸನಾಂಬೆ ದೇಗುಲಕ್ಕೆ 'ಎ' ದರ್ಜೆಯ ಮಾನ್ಯತೆ ದೊರಕುವಂತಾಗಿತ್ತು.
ಆ ದಾಖಲೆಯನ್ನು 2014ರಲ್ಲಿ ಹಿಂದಿಕ್ಕಿ 9 ದಿನದಲ್ಲಿ 1,27,08,706 ರೂ. ಆದಾಯ ಸಂಗ್ರಹವಾಗಿತ್ತು. ಇದೀಗ ಈ ಬಾರಿ ಆದಾಯ ಇನ್ನೂ ಜಾಸ್ತಿಯಾಗಿದ್ದು, 1,42,84,989 ರೂ. ಸಂಗ್ರಹವಾಗಿದೆ.
ಹಾಸನಾಂಬೆ ದೇವಾಲಯ ಹುಂಡಿಗೆ 75 ಲಕ್ಷ ರೂ. ಸೇರಿದ್ದರೆ, ಸಿದ್ದೇಶ್ವರ ದೇಗುಲದ ಹುಂಡಿಯಲ್ಲಿ 6 ಲಕ್ಷ ರೂ., ಲಾಡು ಪ್ರಸಾದ ವಿತರಣೆ, ವಿಶೇಷ ಟಿಕೆಟ್ ಮಾರಾಟ ಇತ್ಯಾದಿಯಾಗಿ 68 ಲಕ್ಷ ರೂ. ಸಂಗ್ರಹವಾಗಿದೆ. ಈ ಹಣವನ್ನು ಹಾಸನಾಂಬೆ ದೇಗುಲದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications