Prajwal Revanna: ಒಂದು ತಿಂಗಳ ಬಳಿಕ ಕೊನೆಗೂ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ !
ಬೆಂಗಳೂರು, ಮೇ 27: ಲೋಕಸಭಾ ಚುನಾವಣಾ ಅಬ್ಬರದ ಪ್ರಚಾರ ನಡೆಸುವ ಹೊತ್ತಲಿ ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ತೀವ್ರ ಸದ್ದು ಮಾಡಿತ್ತು. ಇತ್ತ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ಕುರಿತು ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆ ಹೊತ್ತಲಿ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಿಂದ ಮೈತ್ರಿ ನಾಯಕರು ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬ ತೀವ್ರ ಮುಜುಗರವನ್ನ ಅನುಭವಿಸ್ದು, ತಾತಾ ಕೊಟ್ಟ ಎಚ್ಚರಿಕೆ ಬಳಿಕ ಮಂಡ್ಯ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಸ್ ಆಗುವ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಇಂದಿಗೆ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿ ಬರೋಬ್ಬರಿ ಒಂದು ತಿಂಗಳ ಬಳಿಕ ಪ್ರತ್ಯಿಕ್ಷವಾಗಿದ್ದಾರೆ. ತಂದೆ, ತಾಯಿ ಹಾಗೂ ತಾತನ ಬಳಿ ನಾನು ಕ್ಷಮೆ ಕೇಳುತ್ತೇನೆ. ನಮ್ಮ ಕುಮಾರಣ್ಣ, ನಾಡಿನ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಕ್ಷಮೆ ಕೇಳಿದ್ದಾರೆ.
ಏಪ್ರಿಲ್ 26 ರಂದು ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ನಾನು ಫಾರಿಬನ್ ಹೊರಟ ಮೇಲೆ ನನಗೆ ಈ ಬಗ್ಗೆ ವಿಷಯ ಗೊತ್ತಾಯ್ತು, ಎಸ್ ಐಟಿ ರಚನೆ ಬಳಿಕ ಎಸ್ ಐಟಿ ನೋಟಿಸ್ ನಾನು ಸಮಯವಕಾಶವನ್ನ ನೀಡಿದೆ. ಈ ವಿಚಾರವನ್ನ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಲು ಪ್ರಾರಂಭ ಮಾಡಿದರು. ನಾನು ಎಲ್ಲಾರನ್ನು ಕ್ಷಮೆ ಕೇಳುತ್ತೇನೆ. ಹಾಸನದ ಎಲ್ಲಾ ಶಕ್ತಿಗಳು ಒಟ್ಟಾಗಿ, ನನ್ನ ಕುಗ್ಗಿಸಲು ಪ್ರಯತ್ನ ಮಾಡಿದ್ದಾರೆ. ಈ ಎಲ್ಲಾ ಬೆಳವಣೆಗೆಯಿಂದಾಗಿ ನಾನೇ ಈ ವಿಚಾರದಿಂದ ದೂರ ಇದ್ದೆ ಎಂದು ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಹೇಳಿದ್ದಾರೆ.
ಒಂದು ತಿಂಗಳ ಬಳಿಕ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ#Prajwalrevanna #PrajwalrevannaCase #PrajwalRevannaPenDriveCase pic.twitter.com/NyO9v88cxL
— oneindiakannada (@OneindiaKannada) May 27, 2024
ನಾನೇ ಶುಕ್ರವಾರ (ಮೇ 31) ಖುದ್ದಾಗಿ ಬೆಳಿಗ್ಗೆ 10 ಗಂಟೆಗೆ ಎಸ್ ಐಟಿ ಮುಂದೆ ಬಂದು ನಾನು ಉತ್ತರ ಕೊಡುತ್ತೇನೆ. ಸರಿಯಾದ ಉತ್ತರ ಕೊಡುವ ಪ್ರಯತ್ನವನ್ನ ಮಾಡುತ್ತೇನೆ, ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಈ ಸುಳ್ಳು ಪ್ರಕರಣಗಳಿಂದ ಆಚೆ ಬರುವ ಕೆಲಸವನ್ನ ನಾನು ನ್ಯಾಯಾಲಯದ ಮೂಲಕ ಮಾಡಿಕೊಳ್ಳುತ್ತೇನೆ, ನನ್ನ ಮೇಲೆ ದೇವರ ಆಶೀರ್ವಾದ ಹಾಗೂ ನಾಡಿನ ಜನರ, ಕುಟುಂಬದ ಆಶೀರ್ವಾದವಿರಲಿ. ಎಸ್ ಐಟಿ ಮುಂದೆ ಬಂದು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.












Click it and Unblock the Notifications