Hasanamba Temple: ಹಾಸನಾಂಬ ದರ್ಶನಕ್ಕೆ ಹೋಗುವವರಿಗೆ ಮಹತ್ವದ ಸುದ್ದಿ
ಇತಿಹಾಸ ಪ್ರಸಿದ್ಧ ಹಾಸನಾಂಬ ದರ್ಶನಕ್ಕೆ ಈ ಬಾರಿಯೂ ಭಕ್ತಸಾಗರ ಹರಿದುಬರುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಭಕ್ತಾದಿಗಳಿಗೆ ದರ್ಶನಕ್ಕೆ ಅಡಚಣೆ ರಹಿತ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಮಹತ್ವದ ವಿಚಾರವೊಂದನ್ನು ಭಕ್ತಾದಿಗಳ ಗಮನಕ್ಕೆ ತಂದಿದ್ದಾರೆ. ಅಕ್ಟೋಬರ್ 22ರ ಬುಧವಾರದಂದು ದರ್ಶನವು ಬೆಳಿಗ್ಗೆ 5.30ರಿಂದ ಸಂಜೆ 7 ರವರೆಗೆ ತಡೆರಹಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ 5.30ರಿಂದ ಸಂಜೆ 7ರವರೆಗೆ ತಡೆರಹಿತ ದರ್ಶನಕ್ಕೆ ಅವಕಾಶವಿರುತ್ತದೆ. ಬುಧವಾರ ಮಧ್ಯಾಹ್ನ ನೈವೇದ್ಯ ಪೂಜೆ ಇರುವುದಿಲ್ಲ. ಹಾಗಾಗಿ ದಿನವಿಡೀ ಯಾವುದೇ ಅಡೆತಡೆ ಇಲ್ಲದೆ ದರ್ಶನ ಮುಂದುವರೆಯಲಿದೆ. ಸಂಜೆ 7 ಗಂಟೆಗೆ ಸಾರ್ವಜನಿಕ ದರ್ಶನ ನಿಲ್ಲಲಿದೆ. ದರ್ಶನ ಪಡೆಯಬಯಸುವವರು ಸಂಜೆ 5 ಗಂಟೆಯೊಳಗೆ ಬರಬೇಕು. ಗುರುವಾರದಂದು ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಮಂಗಳವಾರ ದರ್ಶನ ಬಹಳ ಸರಾಗವಾಗಿ ನಡೆಯುತ್ತಿದೆ. ಸೋಮವಾರ ಸುಮಾರು 2 ಲಕ್ಷ ಜನರು ದರ್ಶನ ಪಡೆದಿದ್ದಾರೆ. ಪ್ರಸ್ತುತ ವರ್ಷ ಇಲ್ಲಿಯವರೆಗೆ 23 ಲಕ್ಷ ಜನರು ದರ್ಶನ ಪಡೆದಿದ್ದಾರೆ. ಕಳೆದ ವರ್ಷದ ಒಟ್ಟಾರೆ 17.46 ಲಕ್ಷ ಜನ ದರ್ಶನ ಪಡೆದಿದ್ದರು. ಈ ವರ್ಷ 300ರೂ ಹಾಗೂ 1000 ರೂ. ಟಿಕೆಟ್ ಸಾಲಿನಲ್ಲಿ 3,40,260 ಜನರು ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಈ ಸಾಲಿನಲ್ಲಿ ಒಟ್ಟಾರೆ 1,29,956 ಜನ ದರ್ಶನ ಪಡೆದಿದ್ದರು ಎಂದು ವಿವರಿಸಿದ್ದಾರೆ.
ಬುಧವಾರದವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿದೆ. ಮಂಗಳವಾರ ಮಧ್ಯಾಹ್ನ 3.30 ರವರೆಗೆ ನೈವೇದ್ಯ ಇದಿದ್ದರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಕ್ಯೂ ಲೈನ್‌ಗಳ ಪ್ರವೇಶ ದ್ವಾರಗಳು ರಾತ್ರಿ 9 ಗಂಟೆಗೆ ಮುಚ್ಚಲ್ಪಡುತ್ತವೆ. ದರ್ಶನ ಮಧ್ಯರಾತ್ರಿ 12 ಗಂಟೆಗೆ ನಿಲ್ಲುತ್ತದೆ. ಬುಧವಾರ ದರ್ಶನ ಬೆಳಿಗ್ಗೆ 5ರಿಂದಲೇ ಪ್ರಾರಂಭವಾಗಿ ಸಂಜೆ 7 ಗಂಟೆಯವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಸಾರ್ವಜನಿಕರ ದರ್ಶನ ಸಂಜೆ 7 ಗಂಟೆಗೆ ಮುಗಿಯುತ್ತದೆ. ಅದಾದ ನಂತರ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಗುರುವಾರ ಕೂಡ ದರ್ಶನ ಇರುವುದಿಲ್ಲ ಎಂದು ಹೇಳಿದ್ದಾರೆ.
ಎಲ್ಲ ದೇವಾಲಯಗಳಲ್ಲಿ ಗೋಪೂಜೆ
ಅಕ್ಟೋಬರ್ 22ರಂದು ಬಲಿಪಾಡ್ಯಮಿ ಪ್ರಯುಕ್ತ ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಶಾಸ್ತ್ರೋಕ್ತ ಗೋಪೂಜೆ ನೆರವೇರಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಗೋವಿನ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದೇವಸ್ಥಾನಗಳಲ್ಲಿ ಗೋವುಗಳಿಗೆ ಸ್ನಾನ, ಅರಿಶಿನ-ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಿ, ನಂತರ, ಅಕ್ಕಿ, ಬೆಲ್ಲ, ಹಣ್ಣುಗಳನ್ನು ಒಳಗೊಂಡ 'ಗೋಗ್ರಾಸ'ವನ್ನು ನೀಡಿ, ಸಂಜೆ ವಿಧಿವತ್ತಾಗಿ ಗೋಪೂಜೆ ನಡೆಯಲಿದೆ ಎಂದು ಹೇಳಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications