ಡೈರೆಕ್ಟರ್ ಗಿರಿ, ವಿಲನ್ ಗಿರಿ, ಹೀರೋಯಿನ್ ಗಿರಿ-ಜಾ : ಏನಿದು ಮೂರು ಗಿರಿಗಳ ಕಥೆ..?
ಮೂರು ಗಿರಿಗಳ ಸುತ್ತ ಸುತ್ತುವ ಕಥೆಯೇ ಹರಿಕಥೆಯಲ್ಲ ಗಿರಿಕಥೆ ಎಂಬುದರ ಸುಳಿವನ್ನು ಇತ್ತಿಚೆಗೆ ಚಿತ್ರತಂಡ ಬಿಟ್ಟುಕೊಟ್ಟಿತ್ತು. ಇದೀಗ ಟ್ರೇಲರ್‌ನಲ್ಲಿ ಆ ಗಿರಿಗಳು ಯಾರು, ಏನು ಎಂಬುದು ಅನಾವರಣವಾಗಿದೆ. ಒಂದು ಡೈರೆಕ್ಟರ್ ಗಿರಿ, ಮತ್ತೊಂದು ವಿಲನ್ ಗಿರಿ. ಇದರ ನಡುವೆ ಬರುವುದೇ ಹೀರೋಯಿನ್ ಗಿರಿ-ಜಾ. ಇದು ಟ್ರೇಲರ್‌ನಲ್ಲಿ ಒಂದಷ್ಟು ಹುಳ ಬಿಟ್ಟಂತ ವಿಚಾರವಾಗಿದೆ.
ಹರಿಕಥೆಯಲ್ಲ ಗಿರಿಕಥೆ ಸಿನಿಮಾಗೆ ಇಬ್ಬರು ನಿರ್ದೇಶಕರು. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ಇಬ್ಬರ ಯೋಚನಾ ಲಹರಿಯಲ್ಲಿ ಒಂದು ಅದ್ಭುತ ಸಿನಿಮಾ ಮೂಡಿ ಬಂದಿದೆ ಎಂಬುದು ಟ್ರೇಲರ್‌ನಲ್ಲಿ ಪ್ರೂವ್ ಆಗಿದೆ. ಕಾಮಿಡಿ ಜಾನರ್‌ನ ಸಿನಿಮಾವಾಗಿರುವ ಕಾರಣ ನಗುವಿಗೇನು ಕಡಿಮೆ ಇಲ್ಲ. ನಗುವಿನ ಪ್ರತಿಭೆಗಳು ಹೆಚ್ಚಾಗಿಯೇ ಇದ್ದಾರೆ.

ಹೊನ್ನವಳ್ಳಿ ಕೃಷ್ಣ, ಯೋಗರಾಜ್ ಭಟ್, ಪ್ರಮೋದ್ ಶೆಟ್ಟಿ ಇವರ ಜೊತೆಗೆ ರಿಷಭ್ ಶೆಟ್ಟಿ ಸೀರಿಯಸ್ ಆಗಿದ್ದೀನೆ ನಗಿಸುತ್ತಾರೆ. ಆದರೆ ಕಾಮಿಡಿ ಜೊತೆ ಜೊತೆಗೆ ಒಂದು ಸ್ಟ್ರಾಂಗ್ ಕಥೆ ಕೂಡ ಇದೆ. ಒಂದು ಭಾವನೆ ಇದೆ. ಸಿನಿಮಾ ಮಾಡಬೇಕೆಂಬ ನಿರ್ದೇಶಕನ ತೊಳಲಾಟವಿದೆ. ಈ ಚಿತ್ರ ಇದೇ ತಿಂಗಳ 23ರಂದು ತೆರೆ ಕಾಣಲಿದೆ.

ಡೈರೆಕ್ಟರ್ ಗಿರಿ ಬಳಿ ಉತ್ತಮ ಕಥೆ ಇದೆ. ನಿರ್ಮಾಪಕರು ಹಿಂಗ್ ಸಿಕ್ಕಿ ಹಂಗ್ ಎಸ್ಕೇಪ್ ಆಗಿಬಿಟ್ಟಿದ್ದಾರೆ. ಪೊಲೀಸ್ ಠಾಣೆ, ಅಲ್ಲೊಂದಿಷ್ಟು ಸುಳ್ಳುಗಳ ಸರಮಾಲೆ, ಕಥೆಯಲ್ಲೊಂದು ಲವ್ ಸ್ಟೋರಿ ಹೀಗೆ ನಾನಾ ಆಯಾಮಗಳಲ್ಲಿ ಸಿನಿಮಾ ಸಾಗುವುದನ್ನು ಟ್ರೇಲರ್ ಬಿಟ್ಟುಕೊಟ್ಟಿದೆ. ಇದೇ ಜೂನ್ 23 ರಂದು ಸಿನಿಮಾ ತೆರೆಗೆ ಬರಲಿದೆ. ಸಂದೇಶ್ ನಾಗರಾಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಸಿನಿಮಾ ರೆಡಿಯಾಗಿದೆ. ರಿಷಭ್ ಶೆಟ್ಟಿ ಜೊತೆಗೆ ತಪಸ್ವಿನಿ, ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ.

ಸದ್ಯ ಟ್ರೇಲರ್ ರಿಲೀಸ್ ಆಗಿದ್ದು, ಒಂದಷ್ಟು ಮನಸ್ಸುಗಳಿಗೆ ಹತ್ತಿರವಾಗಿದೆ. ಒಂದೊಳ್ಳೆ ಸಿನಿಮಾ ಕೊಡುತ್ತಿರುವ ವಿಶ್ವಾಸವನ್ನು ಪ್ರೇಕ್ಷಕ ವರ್ಗವೇ ವ್ಯಕ್ತಪಡಿಸುತ್ತಿದೆ. ಇದು ಟ್ರೇಲರ್‌ನ ಕಮೆಂಟ್ ಬಾಕ್ಸ್‌ನಲ್ಲಿ ಇಣುಕಿ ನೋಡಿದರೆ ತಿಳಿಯುವ ಸತ್ಯ. ಹರಿಕಥೆಯಲ್ಲ ಗಿರಿಕಥೆ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.











Click it and Unblock the Notifications