Get Updates
Get notified of breaking news, exclusive insights, and must-see stories!

Happy Children's Day Wishes 2025: ಮಕ್ಕಳ ದಿನಾಚರಣೆ ಶುಭಾಶಯಗಳು 22+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ!

Happy Children's Day Wishes 2025: ನವೆಂಬರ್ 14 ಮಕ್ಕಳ ದಿನಾಚರಣೆಯ ಸಂಭ್ರಮಾಚರಣೆಯ ದಿನ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವೂ ಹೌದು. ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಬಾಲ್ಯ ಎನ್ನುವುದು ಬಂಗಾರದ ದಿನಗಳು. ಕಲಿಯುವುದು - ನಲಿಯುವ ವಯಸ್ಸು. ಈ ದಿನದಂದು ಮಕ್ಕಳಿಗೆ ವಿಶೇಷವಾದ ಮಕ್ಕಳ ದಿನಾಚರಣೆಯ ಶುಭಾಶಯ ಸಂದೇಶಗಳನ್ನು ಹಂಚಿಕೊಳ್ಳಲು ಈ ಲೇಖನ ಓದಿ.

ಬಾಲ್ಯ ದಿನಗಳು ಎನ್ನುವುದು ಎಂದಿಗೂ ಮರೆಯಲಾಗದ ಮಧುರ ಅನುಭವ. ಬಾಲ್ಯದ ನೆನೆಪುಗಳು ಯೌವನ ಸರಿದು ಮುಪ್ಪಾದರೂ ಉಳಿಯುತ್ತದೆ. 90ರ ದಶಕದಲ್ಲಿ ಮಕ್ಕಳು ಹೇಗೆಲ್ಲಾ ಎಂಜಾಯ್ ಮಾಡಿದ್ದೆವು ಎನ್ನುವುದನ್ನು ಈಗಲೂ 90ಕಿಡ್ಸ್‌ ನೆನಪಿಸಿಕೊಳ್ಳುವುದು ಇದೆ. ಅದೇ ರೀತಿ 2ಕೆ ಕಿಡ್ಸ್‌ ಸಹ ತಮ್ಮ ಬಾಲ್ಯದ ನೆನಪುಗಳು ಭಿನ್ನವಾಗಿತ್ತು ಎನ್ನುತ್ತಾರೆ. ಮಕ್ಕಳ ದಿನಾಚರಣೆಯ ಸಂಭ್ರಮಾಚರಣೆಯ ನೆನಪಿನಲ್ಲಿ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ವಾಟ್ಸಾಪ್, ಸಂದೇಶ ಹಾಗೂ ಫೇಸ್‌ಬುಕ್ ಸ್ಟೇಟಸ್ ಸೇರಿದಂತೆ ಎಲ್ಲಾ ಮಾದರಿಯ ಮಕ್ಕಳ ದಿನಾಚರಣೆಯ ವಿಶೇಷ ಶುಭಾಶಯ ಸಾಲುಗಳು ಇಲ್ಲಿವೆ.

Happy Children s Day 2025 22 Heartwarming Wishes Messages Greetings and Status Lines

1. ಬಾಲ್ಯದ ನೆನಪು ಸದಾ ಶಾಶ್ವತ.. ಈ ದಿನಗಳನ್ನು ಸಂತೋಷದಿಂದ ಕಳೆಯಿರಿ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು

2. ನಾವು ಎಳೆಯರು ನಾವು ಗೆಳೆಯರು ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸು ಸುಂದರ. ಎಲ್ಲರಿಗೂ ಮಕ್ಕಳ ದಿನಾಚರಣೆಯ
- ಶಂಗು ಬಿರಾದರ

3. ಮಕ್ಕಳ ದಿನಾಚರಣೆ 2025ರ ಶುಭಾಶಯಗಳು. ನಿಮ್ಮ ಜಗತ್ತು ಯಾವಾಗಲೂ ನಗು, ಸಾಹಸ ಮತ್ತು ಕುತೂಹಲದಿಂದ ಕೂಡಿರಲಿ.

4. ಮಕ್ಕಳು ವಿಶ್ವದ ಅತ್ಯಂತ ಅಮೂಲ್ಯವಾದ ಸಂಪನ್ಮೂಲ ಮತ್ತು ಭವಿಷ್ಯದ ಅತ್ಯುತ್ತಮ ಭರವಸೆ. ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.
- ಜಾನ್ ಎಫ್. ಕೆನಡಿ

5. ಪ್ರತಿಯೊಬ್ಬ ಮಗುವಿನಲ್ಲೂ ಒಂದೊಂದು ಕಲೆ ಇರುತ್ತದೆ. ಅದಕ್ಕೆ ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹವಿರಲಿ ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

6. ಮಗುವಿನಂತಹ ಮನಸ್ಸಿರುವ ನಿಮಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

7. ನಿಮ್ಮ ನಗು ಎಂದಿಗೂ ಮಾಸಬಾರದು ಮತ್ತು ನಿಮ್ಮ ಕನಸುಗಳು ಎಂದಿಗೂ ಸಾಯಬಾರದು ನಿಮಗೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು

8. ನಿಮ್ಮ ನಗುವಿನ ಮೂಲಕವೇ ಜಗತ್ತನ್ನು ನಗಿಸುತ್ತಿರುವ ಪುಟ್ಟ ಮಕ್ಕಳೇ ನಿಮಗೆಲ್ಲ ಮಕ್ಕಳ ದಿನಾಚರಣೆಯ ಶುಭಾಶಯಗಳು.

9. ಹೋದಲ್ಲೆಲ್ಲವೂ ಸಂತೋಷವನ್ನಂಚುವ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.

10. ಪುಟಾಣಿ ಮಕ್ಕಳೇ ನಿಮ್ಮ ನಾಳೆಯ ಕನಸುಗಳೆಲ್ಲವೂ ನನಸಾಗಲಿ.. ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

11. ನಿಮ್ಮ ಬಾಲ್ಯವು ಅದ್ಭುತ ನೆನಪುಗಳು, ಅಂತ್ಯವಿಲ್ಲದ ನಗು ಮತ್ತು ಮಿತಿಯಿಲ್ಲದ ಪ್ರೀತಿಯಿಂದ ತುಂಬಿರಲಿ. ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

12. ಬಾಲ್ಯವು ಎನ್ನುವುದು ಪ್ರತಿಯೊಬ್ಬರ ಜೀವನದ ಅತ್ಯಂತ ಸುಂದರವಾದ ಹಂತ. ಪ್ರತಿ ಕ್ಷಣವನ್ನು ಆನಂದಿಸಿ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

13. ಪ್ರತಿಯೊಂದು ಮಗುವೂ ಜಗತ್ತಿಗೆ ಸಂತೋಷದ ಉಡುಗೊರೆ ಮಕ್ಕಳ ದಿನಾಚರಣೆಯ ಶುಭಾಶಯಗಳು

14. ಪ್ರತಿಯೊಂದು ಮಗುವೂ ಪ್ರೀತಿ ಮತ್ತು ಗೌರವಕ್ಕೆ ಅರ್ಹ ಎನ್ನುವುದನ್ನು ನೆನಪಿಡಿ. ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

15. ಬಾಲ್ಯದ ನೆನಪುಗಳು ಸದಾ ಶಾಶತ್ವ. ಈ ನೆನಪುಗಳು ಸಹಿ ಮತ್ತು ಸಂತೋಷದಿಂದ ತುಂಬಿರಲಿ. ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

16. ಬಾಲ್ಯ ಎನ್ನುವುದು ಮನುಷ್ಯರ ಜೀವನದಲ್ಲಿ ಸಿಗುವ ಅತ್ಯುತ್ತಮ ಕೊಡುಗೆ. ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

17. ಪುಟ್ಟ ನಕ್ಷತ್ರಗಳೇ ಪ್ರಕಾಶಮಾನವಾಗಿ ಹೊಳೆಯುತ್ತಿರಿ. ಮುಂದೆ ನಿಮಗೆ ಅದ್ಭುತವಾದ ಭವಿಷ್ಯವಿದೆ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯ.

18. ನಿಮ್ಮ ಬಾಲ್ಯದ ನೆನಪುಗಳು ಪ್ರತಿದಿನ ನಿಮಗೆ ಸಂತೋಷವನ್ನು ತರಲಿ. ಮಕ್ಕಳ ದಿನಾಚರಣೆಯ ಶುಭಾಶಯಗಳು.

19. ಜೀವನದ ಪ್ರತಿಯೊಂದು ಹಂತದಲ್ಲೂ ಎಲ್ಲಾ ಮಕ್ಕಳಿಗೂ ಸಂತೋಷ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸೋಣ. ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

20. ನೀವು ಹೋದಲ್ಲೆಲ್ಲಾ ಪ್ರೀತಿ ಮತ್ತು ನಗುವನ್ನು ಹರಡುತ್ತಿರಿ. ಮಕ್ಕಳ ದಿನಾಚರಣೆಯ ಶುಭಾಶಯಗಳು.

21. ನಿನ್ನ ಕಲ್ಪನಾ ಲೋಕ ಎಂದಿಗೂ ಮಸುಕಾಗದಿರಲಿ ಮತ್ತು ನಿನ್ನ ಹೃದಯ ಎಂದಿಗೂ ಗಟ್ಟಿಯಾಗದಿರಲಿ.

22. ನಿಮ್ಮ ಹೃದಯವನ್ನು ಅನುಸರಿಸಲು ಮತ್ತು ನಿಮ್ಮ ಕನಸುಗಳನ್ನು ಬೆನ್ನಟ್ಟಲು ನಿಮಗೆ ಯಾವಾಗಲೂ ಧೈರ್ಯವಿರಲಿ.

23. ನಿಮ್ಮ ಮುಗ್ಧತೆ ಮತ್ತು ನಗು ಶಾಶ್ವತವಾಗಿ ಪ್ರಜ್ವಲಿಸಲಿ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

24. ನೀನು ಕೇವಲ ಮಗುವಲ್ಲ, ನೀನು ನಾಳೆಯ ಭರವಸೆ.

25. ಅಮೂಲ್ಯ ರತ್ನಕ್ಕೆ ಮಕ್ಕಳ ದಿನಾಚರಣೆಯ ಶುಭಾಶಯಗಳು

26. ಬಂಗಾರ ಮಕ್ಕಳ ದಿನಾಚರಣೆಯ ಶುಭಾಶಯಗಳು.

27. ಚಿನ್ನು ಮರಿ ಮಕ್ಕಳ ದಿನಾಚರಣೆಯ ಶುಭಾಶಯಗಳು.. ನಿನ್ನೆಲ್ಲ ಕನಸುಗಳು ನನಸಾಗಲಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+