Haliyal assembly elections: ಮತ್ತೆ ಗೆಲ್ತಾರಾ ಆರ್‌ವಿ ದೇಶಪಾಂಡೆ

ಹಳಿಯಾಳ, ಮಾರ್ಚ್‌ 29: ಉತ್ತರ ಕನ್ನಡ ಜಿಲ್ಲೆ ಪ್ರಮುಖ ವಿಧಾನಸಭಾ ಕ್ಷೇತ್ರವಾದ ಹಳಿಯಾಳದಲ್ಲಿ ಈ ಬಾರಿಯೂ ಕಾಂಗ್ರೆಸ್‌ ಹಿರಿಯ ರಾಜಕಾರಣ, ಮಾಜಿ ಸಚಿವ ಆರ್‌ವಿ ದೇಶಪಾಂಡೆ ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಹಳಿಯಾಳದಲ್ಲಿ ಈ ಬಾರಿ ದೇಶಪಾಂಡೆ ವಿರುದ್ಧ ಪ್ರಬಲ ಅಭ್ಯರ್ಥಿ ನಿಲ್ಲಿಸಲು ಇತರ ಪಕ್ಷಗಳು ಸಿದ್ಧತೆ ಮಾಡಿದೆ. ಈ ನಿಟ್ಟಿಲ್ಲಿ ಕ್ಷೇತ್ರದ ಚಿತ್ರಣ ಇಲ್ಲಿದೆ.

2018ರ ಚುನಾವಣೆಯಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್.ವಿ ದೇಶಪಾಂಡೆ 8ನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕಳೆದ 25 ವರ್ಷಗಳಿಂದ ಹಳಿಯಾಳ ವಿಧಾನಸಭಾ ಕ್ಷೇತ್ರವನ್ನು ತಮ್ಮ ಭದ್ರಕೋಟೆಯಾಗಿ ಮಾಡಿಕೊಂಡು ಕಾಂಗ್ರೆಸ್‌ನಲ್ಲಿ ಹಿರಿಯ ರಾಜಕಾರಣಿಯಾಗಿರುವ ದೇಶಪಾಂಡೆ ಅವರು ಈ ಬಾರಿಯೂ ಕಣಕ್ಕೆ ಇಳಿದಿದ್ದು, ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

Haliyala Constituency Map

ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯಾಗಿರುವ ಅವರ ವಿರುದ್ಧ ಬಿಜೆಪಿ, ಜೆಡಿಎಸ್‌ನಿಂದ ಪೈಪೋಟಿ ನೀಡುವ ಅಭ್ಯರ್ಥಿಗಳು ಸದ್ಯ ಇಲ್ಲ. ಬಿಜೆಪಿಯಿಂದ ರಾಜ್ಯ ವಿಧಾನಸಭೆ ಚುನಾವಣೆಗೆ ಟಿಕೆಟ್‌ ಘೋಷಣೆ ಮಾಡಿಲ್ಲ. ಆದರೂ ಸಮರ್ಪಕ ಅಭ್ಯರ್ಥಿಯನ್ನು ಹುಡುಕಾಟ ನಡೆಸಲಾಗಿದೆ. ರಾಜ್ಯದ ಹಿರಿಯ ಶಾಸಕ ಸದನದ ದೊಡ್ಡಣ್ಣ ಎಂದೇ ಗುರುತಿಸಿಕೊಳ್ಳುವ ಶಾಸಕ ಆರ್.ವಿ.ದೇಶಪಾಂಡೆಯವರ ಪಾಲಿಗೂ ಕಾಂಗ್ರೆಸ್ ಪಾಲಿಗೂ ಹಳಿಯಾಳ ಭದ್ರಕೋಟೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದ್ದರೂ ಹಳಿಯಾಳ ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ.

1983 ರಿಂದ ಸತತವಾಗಿ ಆರ್.ವಿ.ದೇಶಪಾಂಡೆ ಹಳಿಯಾಳದ ಶಾಸಕರಾಗಿದ್ದಾರೆ. ಮೊದಲ ವರ್ಷದಲ್ಲೇ ಅವರು ಸಚಿವರೂ ಆಗಿದ್ದು ವಿಶೇಷ. 1994 ರವರೆಗೆ 4 ಬಾರಿ ಜನತಾ ಪರಿವಾರದಿಂದ ಗೆಲುವು ಸಾಧಿಸಿದ್ದ ಅವರು 1999ರಲ್ಲಿ ಕಾಂಗ್ರೆಸ್ ಸೇರಿದರು. ಅಲ್ಲಿಂದ ಹಳಿಯಾಳ ಕ್ಷೇತ್ರವನ್ನು ಕಾಂಗ್ರೆಸ್‌ಮಯ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಬೆಂಬಲಿಗರ ಹಿಡಿತ ಸಾಧಿಸಿದ್ದಾರೆ. 2004, 2013 ಹಾಗೂ 2018 ರಲ್ಲಿಯೂ ಅವರು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ.

ಉತ್ತಮ ಶಾಸಕ ಪ್ರಶಸ್ತಿ ಪಡೆದಿರುವ ಆರ್‌ವಿ ದೇಶಪಾಂಡೆ ಅವರು ಈವರೆಗೂ ಕೈಗಾರಿಕೆ, ಕೃಷಿ, ಉನ್ನತ ಶಿಕ್ಷಣ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಹೀಗೆ ವಿವಿಧ ಇಲಾಖೆಗಳ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ರಾಜಕಾರಣಿ ಎನಿಸಿದ್ದಾರೆ. ಈ ಬಾರಿ ಅವರು ವಿಚಿತ್ರ ಸನ್ನಿವೇಶ ಎದುರಿಸಬೇಕಾಗಿ ಬಂದಿದೆ. ತಮ್ಮೊಂದಿಗೇ ಇದ್ದು ಈಗ ತಿರುಗಿ ಬಿದ್ದಿರುವ ಇಬ್ಬರು ಮಾಜಿ ಅನುಯಾಯಿಗಳ ಜೊತೆ ಕಾದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ, ಹಳಿಯಾಳದ ಚುನಾವಣಾ ಕಣ ರೋಚಕವಾಗಿ ಮಾರ್ಪಟ್ಟಿದೆ.

Deshpande

ಈ ಬಾರಿ ಬಿಜೆಪಿಯಿಂದ ಬಹುತೇಕ ಸುನೀಲ ಹೆಗಡೆ ಸ್ಪರ್ಧಿಸುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಶ್ರೀಕಾಂತ ಘೋಟ್ನೇಕರ ವಿರುದ್ಧ ಆರ್‌ವಿ ದೇಶಪಾಂಡೆ ಸೆಣಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಇವರಿಬ್ಬರೂ ಇವರ ಶಿಷ್ಯರು. ಮರಾಠಾ ಸಮುದಾಯಕ್ಕೆ ಸೇರಿದ ಘೋಟ್ನೇಕರ ಹಳಿಯಾಳ ಕ್ಷೇತ್ರದಲ್ಲಿ ಬಹುಸಂಖ್ಯಾತರಾದ ಮರಾಠಾ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ.

ಆರ್‌ವಿ ದೇಶಪಾಂಡೆ ಅವರು ಕಳೆದ 2 ಅವಧಿಯಲ್ಲಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿ ಹೆಸರಾಗಿದ್ದಾರೆ. ಕಾಳಿನದಿ ನೀರಾವರಿ ಯೋಜನೆ, ಬಹುಗ್ರಾಮ ಯೋಜನೆ, ಒಳಚರಂಡಿ ಸೇರಿದಂತೆ, ವಸತಿ ಯೋಜನೆಗಳು, ಕ್ರೀಡಾ ಯೋಜನೆಗಳ ಮೂಲಕ ಮತದಾರರಿಗೆ ಹತ್ತಿರಯಾಗಿದ್ದರೆ. ರುಡ್‌ಸೆಟ್‌ ಸಂಸ್ಥೆ ಆರಂಭಿಸಿ ಸಾವಿರಾರು ನಿರುದ್ಯೋಗಿಗಳಿಗೆ ಸ್ವಾವಲಂಭಿ ಬದುಕನ್ನು ಕಟ್ಟಿಸಿ ಕೊಟ್ಟ ದೇಶಪಾಂಡೆ, ಇನ್ನೊಂದೆಡೆ ತಂದೆಯೇ ಹೆಸರಿನಲ್ಲಿ ಸ್ಥಾಪಿಸಿರುವ ಟ್ರಸ್ಟ್ ಮೂಲಕ ಆರೋಗ್ಯ ಶಿಬಿರ, ಶೈಕ್ಷಣಿಕ ಶಿಬಿರ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಮತದಾರರ ಹತ್ತಿರವಾಗಿದ್ದಾರೆ. ತನ್ನ ಮನೆಗೆ ನೆರವು ಸಹಕಾರ ಯಾಚಿಸಿ ಬರುವ ಪ್ರತಿಯೊಬ್ಬರಿಗೂ ಪಕ್ಷಾತೀತವಾಗಿ ದೇಶಪಾಂಡೆ ನೆರವಿನ ಕೈಚಾಚುತ್ತಿದ್ದಾರೆ.

ಹಳಿಯಾಳ ಕ್ಷೇತ್ರದಲ್ಲಿ ಮರಾಠ ಭಾಷಿಕರ ಮತದಾರರು ಹೆಚ್ಚಾಗಿದ್ದಾರೆ. ಆದರೆ ಈವರೆಗೂ ಸಮರ್ಪಕ ಮರಾಠ ಭಾಷಿಕ ಅಭ್ಯರ್ಥಿ ಸಿಗದೆ ಇಲ್ಲಿ ಕಾಂಗ್ರೆಸ್‌ನ ಆರ್‌ವಿ ದೇಶಪಾಂಡೆ ಅವರೇ ಜಯ ಸಾಧಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಜೆಡಿಎಸ್‌ನಿಂದ ಶ್ರೀಕಾಂತ ಘೋಟ್ನೇಕರ್‌ ಸ್ಪರ್ಧೆ ಮಾಡುತ್ತಿದ್ದು, ದೇಶಪಾಂಡೆ ಅವರಿಗೆ ಪೈಪೋಟಿ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+