ಗುಲ್ಬರ್ಗಾ: ರೇಪ್ ಮಾಡಿ ತಪ್ಪಾಯ್ತು ಕ್ಷಮಿಸಿ ಎಂದ ಶಿಕ್ಷಕ

Gulbarga Mahagaon teacher Rajshekhar rapes student arrested
ಮಹಾಗಾಂವ್ (ಗುಲ್ಬರ್ಗಾ), ಸೆ. 23: ನೀತಿ ಬೋಧಿಸುವ ಮೇಷ್ಟ್ರೇ ಕಾಮಪಿಪಾಸುವಾಗಿ ತನ್ನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ, ಬಂಧನಕ್ಕೀಡಾಗಿದ್ದಾನೆ. 'ಯಡವಟ್ಟಾಗೋಯ್ತು. ತಪ್ ಮಾಡಿಬಿಟ್ಟೆ. ಕ್ಷಮಿಸಿ' ಎಂದು ಯುವ ಶಿಕ್ಷಕ ತಪ್ಪೊಪ್ಪಿಕೊಂಡಿದ್ದಾನೆ.

ಗುಲ್ಬರ್ಗಾದಿಂದ 28 ಕಿಮೀ ದೂರದಲ್ಲಿರುವ ಮಹಾಗಾಂವ್ ಪಟ್ಟಣದ ಚಾಣಕ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕ ರಾಜಶೇಖರ್ ಕೊಲ್ಕೂರ್ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

ಬಾಧಿತ 6 ವರ್ಷದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಮಿ ಶಿಕ್ಷಕ ರಾಜಶೇಖರ್ ಕೊಲ್ಕೂರ್ 15 ದಿನಗಳ ಹಿಂದೆ ಅತ್ಯಾಚಾರವೆಸಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಣಿಪಾಲ್ ಶಾಲಾ ಬಸ್ಸಿನಲ್ಲಿ ಕಾಮಚೇಷ್ಟೆ :
ಈ ಮಧ್ಯೆ, ಮಣಿಪಾಲ್ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ಕಳೆದ ವಾರ ಕೋರ್ಟ್ ವಿಚಾರಣೆಗೆ ಬಂದಿರುವ ದಿನವೇ ಮತ್ತೊಂದು ಹೇಯ ಘಟನೆ ನಡೆದಿದೆ.

ಶಾಲಾ ಬಸ್ಸಿನಲ್ಲಿ ನಾಲ್ಕು ವರ್ಷದ ಹಸುಳೆಗೆ ಇಬ್ಬರು ದುರುಳರು ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಈ ಸಂಬಂಧ ಬಸ್ಸಿನ ಕಂಡಕ್ಟರ್ ಶುಭ ಕುಮಾರ್ (21) ಮತ್ತು ಡ್ರೈವರ್ ಸುಧೀರ್ (46) ಎಂಬಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸೆ. 16ರಂದು ಈ ಘಟನೆ ನಡೆದಿದ್ದು, ಸೆ. 21ರಂದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಣಿಪಾಲ ಇನ್ಸ್‌ಪೆಕ್ಟರ್‌ ಸದಾನಂದ ತಿಪ್ಪಣ್ಣನವರ್‌ ಹೇಳಿದ್ದಾರೆ.

ಮಕ್ಕಳೆಲ್ಲಾ ಶಾಲಾ ಬಸ್ಸಿನಿಂದ ಇಳಿದ ಮೇಲೆ ಈ ಕಾಮುಕರಿಬ್ಬರೂ ತಮ್ಮ ಕಾಮಚೇಷ್ಟೆ ನಡೆಸಿದ್ದಾರೆ. ನಂತರ ಆರೋಪಿಗಳು ತಡವಾಗಿ ಮಗುವನ್ನು ಆಟೋ ರಿಕ್ಷಾದಲ್ಲಿ ಬಿಟ್ಟುಬಂದಾಗ ಪೋಷಕರು ಅನುಮಾನಗೊಂಡು ಮಗುವನ್ನು ವಿಚಾರಿಸಲಾಗಿ ಘಟನೆ ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+