ರೌಡಿ ಶೀಟರ್ ಪಟ್ಟಿಯಿಂದ ಹೆಸರು ಕೈ ಬಿಡಲು ಮಾರ್ಗಸೂಚಿಗಳು
ಬೆಂಗಳೂರು, ಜುಲೈ 14; ಕರ್ನಾಟಕದಲ್ಲಿ ರೌಡಿ-ಶೀಟರ್ ಪಟ್ಟಿಯಲ್ಲಿರುವವರ ಹೆಸರು ಒಟ್ಟು 46,149. ಕಳೆದ 5 ವರ್ಷಗಳಲ್ಲಿ 14,163 ಜನರನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೇ 27,294 ಹೆಸರುಗಳನ್ನು ಕೈಬಿಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಅರವಿಂದ ಕುಮಾರ ಅರಳಿ ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಎಷ್ಟು ವರ್ಷದಲ್ಲಿ, ಎಷ್ಟು ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಅಂಕಿ-ಅಂಶಗಳನ್ನು ಕೊಟ್ಟಿದ್ದಾರೆ.

ಪ್ರಶ್ನೆಯಲ್ಲಿ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 26,139 ಇದ್ದ ರೌಡಿ-ಶೀಟರ್‌ಗಳಲ್ಲಿ ಸುಮಾರು 12,586 ಜನರನ್ನು ಕೈ ಬಿಟ್ಟಿರುವುದು ನಿಜವೇ? ಎಂದು ಪ್ರಶ್ನಿಸಲಾಗಿತ್ತು.
ಅಲ್ಲದೇ ಯಾವ ಆಧಾರದ ಮೇಲೆ ಅಂತಹವರನ್ನು ಕೈ ಬಿಡಲಾಗಿದೆ ಮತ್ತು ಅವರು ಯಾವ-ಯಾವ ಜಾತಿ, ಸಮುದಾಯಕ್ಕೆ ಸೇರಿದವರು (ಜಿಲ್ಲಾವಾರು, ವರ್ಷವಾರು ಸ್ಪಷ್ಟ ಕಾರಣದೊಂದಿಗೆ ವಿವರ ನೀಡುವುದು) ಎಂದು ಸಚಿವರನ್ನು ಕೇಳಲಾಗಿತ್ತು.
ಸಚಿವರ ಉತ್ತರ; ಸಚಿವರು ತಮ್ಮ ಉತ್ತರದಲ್ಲಿ ರಾಜ್ಯದಲ್ಲಿ ಪ್ರಸ್ತುತ ಒಟ್ಟು 46,149 ರೌಡಿ-ಶೀಟರ್‌ಗಳಿದ್ದು, ಕಳೆದ 5 ವರ್ಷಗಳಲ್ಲಿ ರೌಡಿ-ಶೀಟರ್ ಪಟ್ಟಿಗೆ ಸೇರಿಸಲಾದವರ ಸಂಖ್ಯೆ 14,163 ಎಂದು ಮಾಹಿತಿ ನೀಡಿದ್ದಾರೆ.
ಈ ಪೈಕಿ 2018ರಲ್ಲಿ 3489,2019ರಲ್ಲಿ 2195, 2020ರಲ್ಲಿ 1748, 2021ರಲ್ಲಿ 8062, 2022ರಲ್ಲಿ 3314 ಮತ್ತು 2023ರಲ್ಲಿ 8516 ಸೇರಿ ಒಟ್ಟು 27,294 ಜನರ ಹೆಸರನ್ನು ರೌಡಿ ಶೀಟರ್‌ಗಳ ಪಟ್ಟಿಯಿಂದ ಕೈ ಬಿಡಲಾಗಿದೆ.
ಮಾನದಂಡಗಳು; ಈ ಮಾನದಂಡಗಳ ಅನ್ವಯ ಹೆಸರನ್ನು ರೌಡಿ-ಶೀಟರ್ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ಸಚಿವರು ಉತ್ತರದಲ್ಲಿ ವಿವರಣೆ ನೀಡಿದ್ದಾರೆ. ರೌಡಿ ಶೀಟರ್‌ನಿಂದ ಹೆಸರು ಕೈಬಿಡಲು ಹೊರಡಿಸಲಾದ ಸುತ್ತೋಲೆ 17/1/2022ರಲ್ಲಿ ಮಾನದಂಡಗಳನ್ನು ನಮೂದಿಸಲಾಗಿದೆ. ಇದನ್ನು ಅನುಸರಿಸಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
* ರೌಡಿ ಆಸಾಮಿಯು 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾಗಿದ್ದು ನಿಷ್ಕ್ರಿಯನಾಗಿದ್ದರೆ
* ರೌಡಿ ಆಸಾಮಿಯು ಮೃತನಾಗಿದ್ದಲ್ಲಿ/ ಮರಣ ಹೊಂದಿದ್ದಲ್ಲಿ.
* ರೌಡಿ ಆಸಾಮಿಯು ಸಂಪೂರ್ಣ ಅಂಗವಿಕಲನಾಗಿದ್ದಲ್ಲಿ ಅಥವಾ ಮಾನಸಿಕ ಅಸ್ವಸ್ಥನಾಗಿದ್ದಲ್ಲಿ.
* ರೌಡಿ ಆಸಾಮಿಯು ಕಳೆದ 10 ವರ್ಷಗಳಲ್ಲಿ ಯಾವುದೇ ಪ್ರಕರಣದಲ್ಲಿ ಭಾಗವಹಿಸದೇ ಸನ್ನಡತೆಯಿಂದ ಇರುವುದು ಕಂಡು ಬಂದಲ್ಲಿ, (ಯಾವುದೇ ಪ್ರಕರಣ ತನಿಖಾ ಹಂತದಲ್ಲಿ ಅಥವಾ ನ್ಯಾಯಾಲಯದ ವಿಚಾರಣಾ ಹಂತದಲ್ಲಿ ಇರುವುದನ್ನು ಹೊರತುಪಡಿಸಿ)
* ಪೊಲೀಸ್ ಮ್ಯಾನ್ಯೂಯಲ್ ಕ್ರಮ ಸಂಖ್ಯೆ1059ರಲ್ಲಿ ನಮೂದಿಸಿದಂತೆ ಇರುವ ಮಾರ್ಗದರ್ಶನ ಅನುಸರಿಸಿ ರೌಡಿ ಹಾಳೆ ಮುಕ್ತಾಯಗೊಳಿಸಲಾಗುವುದು ಎಂದು ಸಚಿವರು ವಿವರಣೆ ಕೊಟ್ಟಿದ್ದಾರೆ.
ಒಬ್ಬ ಆಸಾಮಿಯನ್ನು ರೌಡಿ ಶೀಟರ್‌ಗೆ ಸೇರಿಸಬೇಕಾದರೆ ಹಾಗೂ ಹಿಂತೆಗೆಯಬೇಕಾದರೆ ಆತನ ಜಾತಿಯನ್ನು ಪರಿಗಣಿಸುವುದಿಲ್ಲ. ಕರ್ನಾಟಕ ಅಧಿನಿಯಮ ಆದೇಶ ಸಂಖ್ಯೆ 1059(3)ರನ್ವಯ ರೌಡಿಶೀಟ್ ಮಾಹಿತಿಯು ಗೌಪ್ಯ ಮಾಹಿತಿ ಎಂದು ಪರಿಗಣಿಸುವುದರಿಂದ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಟ್ಟಿರುವ ಹೆಸರುಗಳು 2022 ಮತ್ತು 2023ಕ್ಕೆ ಸಂಬಂಧಿಸಿದಂತೆ. ಬೆಂಗಳೂರು ನಗರದಲ್ಲಿ 2022ರಲ್ಲಿ 285, 2023ರಲ್ಲಿ 64. ಮೈಸೂರು ನಗರ 2022 19 ಮತ್ತು 2023 148.
ಹುಬ್ಬಳ್ಳಿ-ಧಾರವಾಡ 2022 9 ಮತ್ತು 2023 148 ಹೆಸರುಗಳು. ಬೆಳಗಾವಿ ನಗರ 2022 13 ಮತ್ತು 2023 167. ಕಲಬುರಗಿ ನಗರದಲ್ಲಿ 2022ರಲ್ಲಿ 18, 2023 99 ಹೆಸರುಗಳು.
-
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್












Click it and Unblock the Notifications