ಆರೋಗ್ಯ ಇಲಾಖೆ ನೌಕರರ ವರ್ಗಾವಣೆಗೆ ಚಾಲನೆ
ಬೆಂಗಳೂರು, ಜೂನ್ 14: 2018-19 ಸಾಲಿಗೆ ಸಾರ್ವತ್ರಿಕ ವರ್ಗಾವಣೆ ಬಯಸುವ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದೆ.
ರಾಜ್ಯ ಸಿವಿಲ್ ಸೇವೆಗಳ ವರ್ಗಾವಣೆ ನಿಯಂತ್ರಣ ನಿಯಮಗಳು 2011 ಮತ್ತು ತಿದ್ದುಪಡಿಗಳ ಅನ್ವಯ ಜೂನ್ 4ರಂದು ಸಭೆ ನಡೆಸಿ 2018-19 ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಪ್ರಕಟಿಸಿದ್ದು, ವರ್ಗಾವಣೆ ಅರ್ಜಿ ಸಲ್ಲಿಸಲು ಜೂನ್ 23 ಕೊನೆಯ ಕೊನೆಯ ದಿನಾಂಕವಾಗಿದೆ.

ಮಾರ್ಗಸೂಚಿ ಅನ್ವಯ ವರ್ಗಾವಣೆ ಬಯಸುವ ವೈದ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ನಿಗದಿತ ಅರ್ಜಿ ನಮೂನೆಗಳನ್ನು ಕಚೇರಿ ಮುಖ್ಯಸ್ಥರ ಮೂಲಕ ಜೂ.23ರೊಳಗೆ ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.












Click it and Unblock the Notifications