Gruhalakshmi Scheme: ಗೃಹಲಕ್ಷ್ಮಿಯರು ಗಮನಿಸಲೇಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ
Gruhalakshmi Scheme: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಮಹಿಳೆಯರಿಗೆ ಅನುಕೂಲ ಆಗುವಂತೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ್ದು, ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಖಾತೆಗೆ 2,000 ರೂಪಾಯಿ ಹಣವನ್ನು ಹಾಕುತ್ತಿದೆ. ಹಾಗಾದ್ರೆ ಇದುವರೆಗೂ ನಿಮಗೆ ಎಷ್ಟು ಹಣ ಬಂದಿದೆ ಎಂದು ಪರಿಶೀಲಿಸುವ ಸುಲಭ ವಿಧಾನ ಇಲ್ಲಿದೆ.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಾಕಲಾಗುತ್ತದೆ. ಈಗಾಗಲೇ ಇದೇ ಹಣದಿಂದ ಎಷ್ಟೋ ಮಹಿಳೆಯರು ಮನೆ ನಡೆಸುತ್ತಿದ್ದಾರೆ. ಬೋರ್‌ವೆಲ್ ಕೊರೆಸುವುದು, ಹೊಸ ವಾಹನ ಖರೀದಿ, ಗೃಹ ಉಪಯೋಗಿ ವಸ್ತುಗಳನ್ನು ಖರೀದಿ ಮಾಡಿರುವ ಉದಾಹರಣೆಗಳಿವೆ. ಹೀಗೆ ಈ ಯೋಜನೆಯ ಹಣವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಮನೆಯ ಜವಾಬ್ದಾರಿ ಹೋರುವುದೇ ಮಹಿಳೆಯರು ಆಗಿರುತ್ತಾರೆ. ಆದರೆ, ಹಣಕಾಸಿನ ಸಹಾಯಕ್ಕಾಗಿ ಪತಿ ಅಥವಾ ಕುಟುಂಬದ ಇತರ ಸದಸ್ಯರ ಮೇಲೆ ಅವಲಂಬಿತವಾಗಬೇಕಾಗಿರುತ್ತದೆ. ಆದ್ದರಿಂದ ಗೃಹಿಣಿಯರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಲು ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ.
ರಾಜ್ಯದಲ್ಲಿ 1.25 ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಬಜೆಟ್‌ನಲ್ಲಿ ಈ ವರ್ಷ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದರು.
ಇನ್ನು ಈ ಯೋಜನೆಗೆ ನೋಂದಣಿಯಾದ ಅರ್ಹ ಫಲಾನುಭವಿಯ ಖಾತೆಗೆ ಪ್ರತಿ ತಿಂಗಳಿ 2,000 ರೂಪಾಯಿಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ನೋಂದಣಿಗೆ ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿಲ್ಲ. ಈಗಲೂ ಕೂಡ ಅರ್ಹ ಫಲಾಣುಭವಿಗಳು ನೋಂದಣಿ ಮಾಡಿಕೊಳ್ಳಬಹುದು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಣೆ ಮಾಡುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಈ ಯೋಜನೆಯ ಅರ್ಹ ಫಲಾನುಭವಿ ಆಗಿರುತ್ತಾರೆ.
ಎಲ್ಲೆಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು?
* ಕರ್ನಾಟಕ ಒನ್
* ಬೆಂಗಳೂರು ಒನ್
* ಗ್ರಾಮ ಒನ್
* ಸೇವಾಸಿಂಧು
ಈ ಮೇಲೆ ನೀಡಲಾಗಿರುವ ಪೋರ್ಟಲ್ ಮೂಲಕ ಅರ್ಹ ಫಲಾನುಭವಿಗಳು ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ, ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನಗಳು
* ಅಧಿಕೃತ ಜಾಲತಾಣ ಸೇವಾ ಸಿಂಧು ಪೋರ್ಟಲ್ https://sevasindhuservices.karnataka.gov.in/ಗೆ ಭೇಟಿ ನೀಡಿ.
* ಸೇವಾ ಸಿಂಧು ಅಕೌಂಟ್ ಲಾಗ್‌ಇನ್ ಮಾಡಿ.
* ಅಲ್ಲಿ Apply For Services ಎಂದು ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ View All Available Services ಎಂದು ಕಾಣುತ್ತದೆ ಅದನ್ನು ಸೇಲೆಕ್ಟ್ ಮಾಡಿ.
* GruhaLakshmi Yojana Pre Approved ಮೇಲೆ ಕ್ಲಿಕ್ ಮಾಡಿ.
* Gruhalakshmi Application ಓಪನ್ ಆಗುತ್ತದೆ. ಅಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
* ಮೊದಲ ಭಾಗದಲ್ಲಿ ವೈಯಕ್ತಿಕ ವಿವರಗಳು ಎಂದಿರುತ್ತದೆ. ಅಲ್ಲಿ ಪಡಿತರ ಚೀಟಿ ಸಂಖ್ಯೆ ಅರ್ಜಿದಾರರ ಹೆಸರು, ವರ್ಗ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಲ್ಪಸಂಖ್ಯಾತ, ಇತರೆ) ಎಂದಿರುತ್ತದೆ. ನಿಮ್ಮ ವರ್ಗವನ್ನು ಆಯ್ಕೆ ಮಾಡಿ. ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಎರಡನೇ ಭಾಗದಲ್ಲಿ ಬ್ಯಾಂಕ್ ಖಾತೆಯ ವಿವರಗಳು ಅಂತಾ ಇರುತ್ತದೆ. ಅಲ್ಲಿ ಎರಡು ಆಯ್ಕೆಗಳಿವೆ. ಮೊದಲನೇಯದನ್ನು ಆಯ್ಕೆ ಮಾಡಿದರೆ, ಫಲಾನುಭವಿಯ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗುತ್ತದೆ. ಎರಡನೇ ಆಯ್ಕೆಯಲ್ಲಿ ಫಲಾನುಭವಿಯ ಬೇರೆ ಬ್ಯಾಂಕ್ ಖಾತೆಗೆ ಹಣ ಪಾವತಿಸುತ್ತಾರೆ. ಬೇರೆ ಬ್ಯಾಂಕ್ ಎಂಬ ಆಯ್ಕೆ ಮಾಡಿದರೆ, ಐಎಫ್‌ಎಸ್‌ಸಿ ಕೋಡ್, ಬ್ಯಾಂಕ್ ಖಾತೆಯ ಸಂಖ್ಯೆ, ಬ್ಯಾಂಕ್ ಹೆಸರು, ಶಾಖೆಯ ಹೆಸರನ್ನು ಭರ್ತಿ ಮಾಡಿ.
* ಮೂರನೇ ಭಾಗದಲ್ಲಿ ಸ್ವಯಂ ಘೋಷಣೆ ಅಂತಾ ಇರುತ್ತದೆ. ಅಲ್ಲಿ ಹೌದು ಅಥವಾ ಇಲ್ಲ ಎಂಬ ಆಯ್ಕೆಗಳಿರುತ್ತದೆ. ಅಲ್ಲಿ ನೀವು ಅರ್ಹರಾಗಿದ್ದರೆ ಸರಿಯಾಗಿ ಭರ್ತಿ ಮಾಡಬೇಕಾಗುತ್ತದೆ.
* ಆಧಾರ ದೃಢೀಕರಣ ವಿಭಾಗ: ಆಧಾರ ದೃಢೀಕರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಎಂದಿರುವ ಬಟನ್ ಮೇಲೆ ಕ್ಲಿಕ್ ಮಾಡಿ. ಆಧಾರ್ ಲಿಂಕ್ ಇರುವ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಓಟಿಪಿಯನ್ನು ಅಲ್ಲಿ ನಮೂದಿಸಿ.
* Word Verification: ಆರು ಅಂಕಿಗಳ ನಂಬರ್‌ನ್ನು ಖಾಲಿ ಇರುವ ಬಾಕ್ಸ್‌ನಲ್ಲಿ ಭರ್ತಿ ಮಾಡಿ. ನಂತರ ಹಸಿರು ಬಣ್ಣದ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ. ಭರ್ತಿ ಮಾಡಿರುವ ಎಲ್ಲಾ ಮಾಹಿತಿಗಳು ಸರಿ ಇವೆಯೇ ಎಂಬುದನ್ನು ಪರಿಶೀಲಿಸಿ ಅಂತಿಮ ಹಂತದ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ. ಅಲ್ಲಿ ಸ್ವೀಕೃತಿ ಪ್ರತಿ ಸಿಗುತ್ತದೆ. ಅದನ್ನು Screenshot ತೆಗೆದುಕೊಳ್ಳಿ ಅಥವಾ ಪಿಡಿಎಫ್ ಫೈಲ್ ಸೇವ್ ಮಾಡಿಕೊಳ್ಳಿ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಇಂಟರ್ನೆಟ್ ಸೌಲಭ್ಯ ಇಲ್ಲದ ಫಲಾನುಭವಿಗಳು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಂತಹ ಹತ್ತಿರದ ಕೇಂದ್ರಗಳಿಗೆ ಭೇಟಿ ನೀಡಬಹುದು. ಅವರು ಮನೆಗಳಿಗೆ ಭೇಟಿ ನೀಡುವ ಸ್ವಯಂ ಸೇವಕರಿಂದ ಉಚಿತ ಸಹಾಯವನ್ನು ಸಹ ಪಡೆಯಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
* ಕುಟುಂಬದ ಮಹಿಳಾ ಮುಖ್ಯಸ್ಥರ ಆಧಾರ್ ಕಾರ್ಡ್
* ನೋಂದಣಿದಾರರ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ
* ಮಹಿಳೆಯರ ಮತದಾರರ ಗುರುತಿನ ಚೀಟಿ
* ಪಡಿತರ ಚೀಟಿ: ಎಎಪಿ, ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿಗಳು
* ಬ್ಯಾಂಕ್ ಖಾತೆ ವಿವರಗಳು
* ಫಲಾನುಭವಿಗಳ ಛಾಯಾಚಿತ್ರ
* ಗಂಡನ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಅನ್ವಯವಾದರೆ ಮಾತ್ರ
ಗೃಹಲಕ್ಷ್ಮಿ ಹಣ ಬರದಿರಲು ಕಾರಣಗಳೇನು?
* ಫಲಾನುಭವಿಗಳು ಮತ್ತು ಅವರ ಪತಿ (ವಿವಾಹಿತರಾಗಿದ್ದರೆ) ತೆರಿಗೆದಾರರಾಗಿದ್ದರೆ, ಅವರು ಪಾವತಿಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ.
* ನಿಮ್ಮ ಆಧಾರ್ ಇ-ಕೆವೈಸಿ ಆಗಿರುವುದಿಲ್ಲ. ಆದ್ದರಿಂದ ಹಣ ಸ್ವೀಕರಿಸಲು ಸಾಧ್ಯವಾಗಿರುವುದಿಲ್ಲ.
* ನಿಮ್ಮ ಪಡಿತರ ಚೀಟಿ ಸ್ಥಿತಿ ಸಕ್ರಿಯವಾಗಿದ್ದರೆ ಮತ್ತು ಇ-ಕೆವೈಸಿ ಪರಿಷ್ಕರಣೆಗೊಂಡಿದ್ದರೆ ಸಮಸ್ಯೆ ಆಗಬಹುದು. ಆದ್ದರಿಂದ ಇ- ಕೆವೈಸಿಯನ್ನು ಆಧಾರ್‌ನೊಂದಿಗೆ ಅಪ್ಡೇಟ್ ಮಾಡಿಸಿ.
* ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ ಹಣ ಖಾತೆಗೆ ಜಮಾ ಆಗುವುದಿಲ್ಲ.
ಈವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 18 ಕಂತುಗಳ ಹಣವನ್ನು ಅಂದರೆ ಫಲಾನುಭವಿಗಳ ಖಾತೆಗೆ 36,000 ಸಾವಿರ ರೂಪಾಯಿ ಹಣವನ್ನು ಜಮಾ ಮಾಡಲಾಗಿದೆ. ಗೃಹಲಕ್ಷ್ಮಿ ಹಣ ಬಿಡುಗಡೆ ಆದ ಸಮಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಪ್ರಕಟಣೆಯನ್ನು ಹೊರಡಿಸಲಿದ್ದಾರೆ. ನಂತರ ಫಲಾನುಭವಿಗಳು ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಬಹುದು.
ಹಣ ಜಮೆ ಆಗಿದೆಯೇ ಎಂದು ಪರಿಶೀಲಿಸುವುದೇಗೆ?
* ಗೃಹಲಕ್ಷ್ಮಿ ಹಣಕಾಸಿನ ನಾಗರಿಕ/ಫಲಾನುಭವಿಗಳು/ಅರ್ಜಿದಾರರು ತಮ್ಮ ಪಾವತಿ ಸ್ಥಿತಿಯನ್ನು ಪರಿಶೀಲಿಸಲು ಮೊದಲನೆಯದಾಗಿ ಅವರು Google App Store ಅಥವಾ ನೇರ ಲಿಂಕ್ ಮೂಲಕ DBT App ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
* ನಿಮ್ಮ ಮೊಬೈಲ್‌ನಲ್ಲಿ DBT ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂದ ನಂತರ, ನಿಮ್ಮ ನೋಂದಾಯಿತ 12-ಅಂಕಿಯ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ತಂತ್ರಾಂಶದಲ್ಲಿ ನೋಂದಾಯಿಸಿ ಮತ್ತು ನಿಮ್ಮ ಆಧಾರ್ ಕಾರ್ಡ್‌ಗೆ ಸಂಯೋಜಿಸಲಾದ ಒಂದು ಬಾರಿಯ OTPಯನ್ನು ನಮೂದಿಸಿ.
* ಮುಂದಿನ ಹಂತದಲ್ಲಿ ನಿಮ್ಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 4 ಅಂಕಿಯ M- ಪಿನ್ ಅನ್ನು ರಚಿಸಿ.
* ಈಗ ಮತ್ತೆ ರುಜುವಾತುಗಳೊಂದಿಗೆ ಲಾಗಿನ್ ಮಾಡಿ ಮತ್ತು ಮುಖಪುಟದಲ್ಲಿ, ನೀವು ಪಾವತಿ ಸ್ಥಿತಿ ಆಯ್ಕೆಯನ್ನು ನೋಡುತ್ತೀರಿ. ಈ ಪಾವತಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಯೋಜನೆಗಳ ಪಟ್ಟಿಯೊಂದಿಗೆ ಹೊಸ ವಿಭಾಗವನ್ನು ತೆರೆಯಿರಿ.
* ಈ ಪಟ್ಟಿಯ ಅಡಿಯಲ್ಲಿ ನೀವು ಗೃಹಲಕ್ಷ್ಮಿ ಪಾವತಿ ಸ್ಥಿತಿ ಆಯ್ಕೆಯನ್ನು ವೀಕ್ಷಿಸಬಹುದು.
* ಈಗ ಗೃಹಲಕ್ಷ್ಮಿ ಪಾವತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಹಿವಾಟುಗಳ ಇತಿಹಾಸವು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯಲ್ಲಿ ಕಾಣಿದುತ್ತದೆ.
ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಅಥವಾ ಗೃಹ ಲಕ್ಷ್ಮಿ ಯೋಜನೆಯ ಸ್ಥಿತಿಗತಿ ಪರಿಶೀಲನೆಯಂತಹ ಯಾವುದೇ ಸಮಸ್ಯೆಗಳಿದ್ದರೆ, ನೀವು ಗೃಹಲಕ್ಷ್ಮಿ ಯೋಜನೆಯ ಕರ್ನಾಟಕದ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ: 08022279954 / 8792662814 / 8792662816 / 190700192216.












Click it and Unblock the Notifications