Gruha Lakshmi Scheme: ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಮನೆ-ಮನೆಗೆ ಪರಿಶೀಲನಾ ತಂಡ; ಯಜಮಾನಿ ನೀಡಬೇಕಾದ ದಾಖಲೆಗಳೇನು?

ಬೆಂಗಳೂರು: ಡಿ.ಕೆ. ಶಿವಕುಮಾರ್ಅವರು ಅಧಿಕಾರ ವಹಿಸಿಕೊಂಡ ಬಳಿಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಫಲಾನುಭವಿಗಳ ಅರ್ಹತೆ ಪರಿಶೀಲನೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನಾ ಸಮೀಕ್ಷೆ ಮುಕ್ತಾಯದ ಹಂತಕ್ಕೆ ಬರುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಲು ಮುಂದಾಗಿದೆ.

ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನೂ ಮತ್ತೊಮ್ಮೆ ಪರಿಶೀಲಿಸಲು ಸಿದ್ಧತೆ ನಡೆದಿದ್ದು, ಶೀಘ್ರದಲ್ಲೇ ಮನೆ-ಮನೆಗೆ ಗಣತಿದಾರರು ಭೇಟಿ ನೀಡಲಿದ್ದಾರೆ. ಈ ವೇಳೆ ಮನೆ ಯಜಮಾನಿಯ ದಾಖಲೆಗಳು ಹಾಗೂ ಗುರುತಿನ ಮಾಹಿತಿಯನ್ನು ಪರಿಶೀಲಿಸುವ ಸಾಧ್ಯತೆ ಇದೆ. ಫಲಾನುಭವಿಗಳ ಅರ್ಹತೆ, ಗುರುತು ಹಾಗೂ ಯೋಜನೆಯ ಹಣ ಸರಿಯಾದವರಿಗೆ ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮನೆ-ಮನೆ ಸಮೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿದೆ.

Gruha Lakshmi Scheme Verification Team to Visit Homes Which Documents Woman Head of Household Submit

ಅನರ್ಹರ ಪತ್ತೆಗೆ ಮುಂದಾದ ಸರ್ಕಾರ

ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿರುವ ಕೆಲ ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಮಾಸಿಕ ಕಂತು ಜಮೆಯಾಗುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿವೆ ಎನ್ನಲಾಗಿದೆ. ಇದರೊಂದಿಗೆ ಫಲಾನುಭವಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೂ ಯೋಜನೆಯ ಹಣ ಪಡೆಯುತ್ತಿರುವ ಪ್ರಕರಣಗಳೂ ವರದಿಯಾಗಿವೆ.

ಹೀಗಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಹಣದ ಸೋರಿಕೆ ತಡೆಯುವುದು ಮತ್ತು ನಿಜವಾಗಿಯೂ ಅರ್ಹರಾಗಿರುವ ಫಲಾನುಭವಿಗಳಿಗೆ ಮಾತ್ರ ಹಣ ತಲುಪಿಸುವ ಉದ್ದೇಶದಿಂದ ಮರುಪರಿಶೀಲನಾ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಆ್ಯಪ್ ಮೂಲಕವೇ ಸಂಪೂರ್ಣ ಪರಿಶೀಲನೆ

ಈ ಬಾರಿ ಸಮೀಕ್ಷೆ ಕೇವಲ ದಾಖಲೆ ಪರಿಶೀಲನೆಗೆ ಸೀಮಿತವಾಗಿರುವುದಿಲ್ಲ. ಫಲಾನುಭವಿಗಳ ಗುರುತನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಇದಕ್ಕಾಗಿ EDCS ನಿರ್ದೇಶನಾಲಯ ವಿಶೇಷ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುತ್ತಿದೆ. ಗಣತಿದಾರರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಪರಿಶೀಲಿಸುವುದರ ಜೊತೆಗೆ ಫಲಾನುಭವಿಯ ಬಯೋಮೆಟ್ರಿಕ್ ಮತ್ತು ಫೇಸ್ ರೆಕಗ್ನಿಷನ್ ಮೂಲಕ ದೃಢೀಕರಣ ನಡೆಸಲಿದ್ದಾರೆ. ಫಲಾನುಭವಿಯ ಫೋಟೊ ಸಹಿತ ಮಾಹಿತಿಯನ್ನು ಆ್ಯಪ್‌ನಲ್ಲಿ ದಾಖಲಿಸುವ ವ್ಯವಸ್ಥೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1,500 ಗಣತಿದಾರರ ನಿಯೋಜನೆ

ಯಾದಗಿರಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ 2,51,806 ಫಲಾನುಭವಿಗಳಿದ್ದಾರೆ. ಈ ಎಲ್ಲ ಫಲಾನುಭವಿಗಳ ಮನೆಗಳಿಗೆ ತೆರಳಿ ಮಾಹಿತಿ ಪರಿಶೀಲಿಸಲು ದೊಡ್ಡ ಪ್ರಮಾಣದ ಸಿಬ್ಬಂದಿ ಅಗತ್ಯವಿದೆ.

ಪ್ರತಿ ಗಣತಿದಾರರಿಗೆ ಸುಮಾರು 250 ಮನೆಗಳ ಸಮೀಕ್ಷೆಯ ಗುರಿ ನೀಡಲಾಗಿದೆ. ಹೆಚ್ಚುವರಿ ಶೇ.10ರಷ್ಟು ಸಿಬ್ಬಂದಿಯನ್ನು ಒಳಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 1,500 ಗಣತಿದಾರರನ್ನು ನಿಯೋಜಿಸಲು ಸಿದ್ಧತೆ ನಡೆಸಲಾಗಿದೆ. ನಗರ ಪ್ರದೇಶಗಳಲ್ಲಿ ಗಣತಿದಾರರ ನೇಮಕಾತಿಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯಿತಿ ಸಿಇಒಗೆ ಅಧಿಕಾರ ನೀಡಲಾಗಿದೆ.

Gruha Lakshmi Scheme: ವಲಸೆ ಸಮಸ್ಯೆ ದೊಡ್ಡ ಸವಾಲು

ಗೃಹಲಕ್ಷ್ಮಿ ಫಲಾನುಭವಿಗಳ ಮನೆ-ಮನೆ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾಡಳಿತಕ್ಕೆ ಹಲವು ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ಉದ್ಯೋಗಕ್ಕಾಗಿ ಜಿಲ್ಲೆಯ ಅನೇಕ ಕುಟುಂಬಗಳು ಬೇರೆ ಪ್ರದೇಶಗಳಿಗೆ ವಲಸೆ ಹೋಗುವುದು ಪ್ರಮುಖ ಸಮಸ್ಯೆಯಾಗಿದೆ.

ಇದರ ಜೊತೆಗೆ ನಗರ ಪ್ರದೇಶಗಳಲ್ಲಿ ಗಣತಿದಾರರ ಕೊರತೆಯೂ ಇದೆ. ಕೆಲವು ಫಲಾನುಭವಿಗಳ ವಾಸಸ್ಥಳ ಒಂದು ಕಡೆ ಇದ್ದರೆ, ಅವರು ಪಡಿತರ ಪಡೆಯುವ ನ್ಯಾಯಬೆಲೆ ಅಂಗಡಿ ಮತ್ತೊಂದು ಪ್ರದೇಶದಲ್ಲಿರುವುದು ಸಮೀಕ್ಷಾ ಕಾರ್ಯವನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರ ಸಹಕಾರವನ್ನೂ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ.

Gruha Lakshmi Scheme: ದಾಖಲೆ ಸಿದ್ಧವಾಗಿಟ್ಟುಕೊಳ್ಳಿ

ಇನ್ನೂ ಮನೆ ಮನೆ ಸಮೀಕ್ಷೆ ವೇಳೆ ಸರ್ಕಾರ ಅಥವಾ ಅಧಿಕಾರಿಗಳು ಸೂಚಿಸುವ ದಾಖಲೆಗಳನ್ನು ಗಣತಿದಾರರಿಗೆ ಹಾಜರುಪಡಿಸಬೇಕಾಗಬಹುದು. ಫಲಾನುಭವಿಯ ಗುರುತು, ಕುಟುಂಬದ ಮಾಹಿತಿ ಹಾಗೂ ಯೋಜನೆಗೆ ಸಂಬಂಧಿಸಿದ ಅರ್ಹತೆಯನ್ನು ಪರಿಶೀಲಿಸಲು ಅಗತ್ಯ ದಾಖಲೆಗಳನ್ನು ಕೇಳುವ ಸಾಧ್ಯತೆ ಇದೆ.

ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಹಾಗೂ ವೋಟರ್ ಐಡಿ ಕಾರ್ಡ್ (Voter ID Card) ಬ್ಯಾಂಕ್ ಪಾಸ್‌ಬುಕ್ (ಗೃಹಲಕ್ಷ್ಮಿ ಹಣ ಜಮೆಯಾಗುವ ಆಧಾರ್‌ ಜೋಡಣೆಗೊಂಡ ಬ್ಯಾಂಕ್ ಖಾತೆ ವಿವರ) ನೋಂದಾಯಿತ ಮೊಬೈಲ್ ನಂಬರ್ ನೀಡಲಾಗುವುದು. ಹೀಗಾಗಿ ಅಗತ್ಯ ದಾಖಲೆಗಳನ್ನ ಸಿದ್ದವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+