ಬನವಾಸಿ ಕದಂಬೋತ್ಸವ ವೇದಿಕೆಗೆ ಹಾನಿ: ದೂರು ದಾಖಲು

Posted By:
Subscribe to Oneindia Kannada
ಶಿರಸಿ, ಫೆಬ್ರವರಿ 17: ಬನವಾಸಿಯಲ್ಲಿ ನಾಳೆ(ಫೆ.18) ರಂದು ನಡೆಯಲಿರುವ ರಾಜ್ಯಮಟ್ಟದ ಕದಂಬೋತ್ಸವ ವೇದಿಕೆ ಸಿದ್ಧಪಡಿಸುತ್ತಿದ್ದ ಕೆಲಸಗಾರರ ಮೇಲೆ ಗುಂಪೊಂದು ಆಕ್ರಮಣ ಮಾಡಿ ಕಂಬಗಳನ್ನು ಕಿತ್ತು ದಾಂಧಲೆ ನಡೆಸಿದ್ದು, ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣ ಕುರಿತಂತೆ ರುದ್ರಗೌಡ, ಬಸವರಾಜ, ಸಿದ್ಧಲಿಂಗೇಶ ಎಂಬ ಮೂವರನ್ನು ಬಂದಿಸಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ. ಬೆಂಗಳೂರಿನ ಕ್ಯಾಷ್ ಮೀಡಿಯಾ ಸಂಸ್ಥೆಯ ಕೆಲಸಗಾರರು ಶಾಮಿಯಾನ ಕಟ್ಟುತ್ತಿದ್ದಾನ ತಡರಾತ್ರಿ 15-20 ಗುಂಪೊಂದು ದಾಂಧಲೆ ನಡೆಸಿದ್ದು, ವೇದಿಯಲ್ಲಿದ್ದ ಕಂಬಗಳನ್ನು ಕಿತ್ತು ಹಾಕಿ, ಸಾಮಾಗ್ರಿಗಳನ್ನು ಹಾನಿ ಮಾಡಿದೆ. ಈ ವೇಳೆ ಕಾರ್ಮಿಕ ಪ್ರಕಾಶ ಬಸವಂತಪ್ಪ ಹೊಸಮನಿ ಅವರಿಗೆ ರಫೀಕ್ ಎಂಬಾತ ಕಲ್ಲಿನಿಂದ ಹೊಡೆದಿದ್ದು ಹಣೆಯಲ್ಲಿ ಗಾಯವಾಗಿದೆ.[ಶಿರಸಿ: ಬನವಾಸಿ ಕದಂಬೋತ್ಸವ ನೇರವಾಗಿ ಕಣ್ತುಂಬಿಕೊಳ್ಳಿ]

group people Make an attack on Kadambotsava platform Construction workers in Banavasi

ಪೊಲೀಸರು ತಲೆಮರೆಸಿಕೊಂಡಿರುವ ರಫೀಕ್ ಮತ್ತು ಸಿದ್ದವೀರೇಶ ಎಂಬವವರ ಹಿಡಿಯಲು ತನಿಖೆಗೆ ಮುಂದಾಗಿದ್ದಾರೆ. ಅಲ್ಲದೆ ಬಂಧಿಸಿರುವ ಮೂವರನ್ನು ವಿಚಾರಣೆ ನಡೆಸುತ್ತಿರುವುದಾಗಿ ಡಿವೈಎಸ್ಪಿ ನಾಗೇಶ ಶೆಟ್ಟಿ ತಿಳಿಸಿದರು.

ನಿನ್ನೆ(ಫೆ 16) ಕದಂಬೋತ್ಸವಕ್ಕೆ ಮುನ್ನ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಮೂರು ದಿನ ಸಂಚರಿಸುವ ಕದಂಬ ಜ್ಯೋತಿಗೆ ಶಾಸಕ ಶಿವರಾಮ ಹೆಬ್ಬಾರ ಗುರುವಾರ ಗುಡ್ನಾಪುರದ ಬಂಗಾರೇಶ್ವರ ದೇವಾಲಯದಲ್ಲಿ ಚಾಲನೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Above 12 to 15 members group attacked the dais which was being prepared for forthcoming Kadambothsava in Banavasi on Friday. Due to the attack the dais got destroyed. A complaint has been registered against the accused.
Please Wait while comments are loading...