Great News for Train Passengers: ರೈಲು ಪ್ರಯಾಣಿಕರಿಗೆ ಭರ್ಜರಿ ಸುದ್ದಿ, ಕನ್ನಡ ಮಾತನಾಡಲಿದ್ದಾರೆ ರೈಲು ಸಿಬ್ಬಂದಿ!
ಬೆಂಗಳೂರು ಮೇ 10: ಇತರ ರಾಜ್ಯಗಳಿಂದ ಬಂದ ಅನೇಕ ರೈಲು ಸಿಬ್ಬಂದಿಗಳಿಗೆ ಕನ್ನಡ ಭಾಷೆಯಲ್ಲಿ ಮಾತನಾಡುವುದು ಕಷ್ಟ. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಗತ್ಯ ಮಾಹಿತಿಯನ್ನು ಪಡೆಯಲು ಪ್ರಯಾಣಿಕರು ಕನ್ನಡ ಬಾರದ ರೈಲು ಸಿಬ್ಬಂದಿಯೊಂದಿಗೆ ಕಷ್ಟಪಡಬೇಕಾಗಿತ್ತು. ಆದರೀಗ ಇದಕ್ಕೆ ಬ್ರೇಕ್ ಹಾಕಲು ದಕ್ಷಿಣ ರೈಲ್ವೆ ಮುಂದಾಗಿದೆ.
ಹೌದು.. ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ತನ್ನ ಸಿಬ್ಬಂದಿಗಳಿಗೆ ಕನ್ನಡ ಭಾಷೆ ಕಲಿಸಲು ದಕ್ಷಿಣ ರೈಲ್ವೆ ನಿರ್ಧರಿಸಿದೆ. ಇದು ಸಿಬ್ಬಂದಿ ಮತ್ತು ಸ್ಥಳೀಯ ಪ್ರಯಾಣಿಕರ ನಡುವಿನ ಸಂವಹನ ಅಂತರವನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ. ಹೌದು.. ಇತರ ರಾಜ್ಯಗಳಿಗೆ ಸೇರಿದ ತನ್ನ ಉದ್ಯೋಗಿಗಳಿಗೆ ಪ್ರತಿ ರಾಜ್ಯದ ಪ್ರಾದೇಶಿಕ ಭಾಷೆಯನ್ನು ಕಲಿಸಲು ದಕ್ಷಿಣ ರೈಲ್ವೆಯು ನಿರ್ಧರಿಸಿದೆ.

ರೈಲು ಸಿಬ್ಬಂದಿಗಳಿಗೆ ಕನ್ನಡ ಕಲಿಸಲಿದೆ ದಕ್ಷಿಣ ರೈಲ್ವೆ
ಕೆಲವು ಸಿಬ್ಬಂದಿ ಸ್ಥಳೀಯ ಭಾಷೆಯಲ್ಲಿ ಮಾತನಾಡದಿರುವುದು ಸ್ಥಳೀಯ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದವು. ವಿಶೇಷವಾಗಿ ಟಿಕೆಟ್ ಬುಕಿಂಗ್ ಕೌಂಟರ್‌ಗಳಲ್ಲಿ ಸಿಬ್ಬಂದಿಗಳಿಗೆ ಸ್ಥಳೀಯ ಕನ್ನಡ ಭಾಷೆ ಬಾರದೇ ಇರುವುದು ಸಂವಹನಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ ಎಂಬ ಆರೋಪಗಳಿದ್ದವು. ಹೀಗಾಗಿ ದಕ್ಷಿಣ ರೈಲ್ವೆ ತನ್ನ ಸಿಬ್ಬಂದಿಗಳಿಗೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವುದನ್ನು ಕಲಿಸಲು ನಿರ್ಧರಿಸಿದೆ.
ಸಾಮಾನ್ಯವಾಗಿ ರೈಲ್ವೆ ಸಿಬ್ಬಂದಿಗಳು ಇತರ ರಾಜ್ಯಗಳಿಂದ ಬಂದಿರುತ್ತಾರೆ. ತಮಿಳುನಾಡು, ಕೇರಳದಿಂದ ಬಂದವರಾಗಿದ್ದರೆ ಅವರಿಗೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವುದು ಕಷ್ಟವಾಗುತ್ತದೆ. ಅಂಥವರು ಸ್ಥಳೀಯ ಭಾಷೆ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಅರಿತುಕೊಂಡ ದಕ್ಷಿಣ ರೈಲ್ವೆ ಸ್ಥಳೀಯ ಭಾಷೆಯನ್ನು ಕಲಿಸಲು ನಿರ್ಧರಿಸಿದೆ.

ಸಿಬ್ಬಂದಿಗಳು ತಮಿಳು, ಮಲಯಾಳಂ, ತೆಲುಗು ಅಥವಾ ಕನ್ನಡದಲ್ಲಿ ಕೆಲಸ ಮಾಡುವ ಜ್ಞಾನವನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ಸುತ್ತೋಲೆಯಲ್ಲಿ ದಕ್ಷಿಣ ರೈಲ್ವೆ ತಿಳಿಸಿದೆ. ಹೀಗಾಗಿ ರೈಲು ಸಿಬ್ಬಂದಿಗಳು ಇನ್ನುಮುಂದೆ ಕನ್ನಡದಲ್ಲೇ ಪ್ರಯಾಣಿಕರೊಂದಿಗೆ ಮಾತನಾಡಲಿದ್ದಾರೆ.
ಸಿಬ್ಬಂದಿಗಳ ನಡುವೆ ಸಂವಹನದಲ್ಲೂ ತೊಂದರೆ:
ಅನೇಕ ಟಿಕೆಟ್ ಕಾಯ್ದಿರಿಸುವ ಸಿಬ್ಬಂದಿ, ಪ್ರಯಾಣ ಟಿಕೆಟ್ ಪರೀಕ್ಷಕರು, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್‌ನ ಅಡುಗೆ ಸಿಬ್ಬಂದಿ, ಲೋಕೋ ಪೈಲಟ್‌ಗಳು ಮತ್ತು ಇತರರು ಮುಖ್ಯವಾಗಿ ಹಿಂದಿ ಮಾತನಾಡುವ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಪ್ರಾದೇಶಿಕ ಭಾಷೆಯ ಜ್ಞಾನದ ಕೊರತೆಯಿದೆ ಕೆಲಸದಲ್ಲಿ ತೊಂದರೆಗಳಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಕೆಲವು ಉದ್ಯೋಗಿಗಳು ಮತ್ತು ಪ್ರಯಾಣಿಸುವ ಸಾರ್ವಜನಿಕರ ನಡುವೆ ಭಾಷಾ ಸಮಸ್ಯೆಗಳಲ್ಲದೆ, ಕೆಲಸದಲ್ಲಿ ಸಂವಹನ ಸಮಸ್ಯೆಗಳೂ ಇವೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೇಲಂ ವಿಭಾಗದಲ್ಲಿ ಇತ್ತೀಚೆಗೆ ವರದಿಯಾದ ಪ್ರಕರಣವೊಂದರಲ್ಲಿ ರಿಲೀಫ್ ಇಂಜಿನ್‌ನ ಲೋಕೋ ಪೈಲಟ್‌ಗೆ ಹಗಲಿನಲ್ಲಿ 15 ಕಿಮೀ ಮತ್ತು ರಾತ್ರಿ 10 ಕಿಮೀ ನಿಗದಿತ ಸುರಕ್ಷತಾ ವೇಗದ ಮಿತಿಗೆ ಬದಲಾಗಿ 50 ಕಿಮೀ ವೇಗದಲ್ಲಿ ಓಡುವಂತೆ ಮುಖ್ಯ ಲೋಕೋ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಲಾಯಿತು. ಇದು ಇವರಿಬ್ಬರಿಗೂ ಭಾಷೆಯ ಕೊರತೆಯಿಂದ ನಡೆದಿದೆ.

ತರಬೇತಿ ಹೇಗೆ?
ಚೆನ್ನೈ, ತಿರುಚ್ಚಿ, ಮಧುರೈ, ಸೇಲಂ, ತಿರುವನಂತಪುರಂ ಮತ್ತು ಪಾಲ್ಘಾಟ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮಾತನಾಡುವ ಪ್ರಾದೇಶಿಕ ಭಾಷೆಗಳಿಂದಲೂ ಸ್ಥಳೀಯ ಭಾಷೆಯನ್ನು ಕಲಿಸಲು ತರಬೇತಿ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲು ಸೂಚನೆಗಳನ್ನು ನೀಡಲಾಗಿದೆ.
ಎಲ್ಲಾ ವಿಭಾಗಗಳ ಮುಖ್ಯಸ್ಥರು, ಕಾರ್ಯಾಗಾರ, ನೇಮಕಾತಿ ಮತ್ತು ತರಬೇತಿ ಕೇಂದ್ರಗಳಲ್ಲಿ ಸ್ಥಳೀಯ ಭಾಷೆ ಕಲಿಕೆಗೆ ಸೂಚನೆ ನೀಡಲಾಗಿದೆ. 'ಕರ್ಮಯೋಗಿ' ಇ-ಲರ್ನಿಂಗ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ವಿಷಯವನ್ನು ರಚಿಸಲು ತರಬೇತಿ ಸಂಸ್ಥೆಗಳಿಗೆ ತಿಳಿಸಲಾಗಿದೆ.
ಜೊತೆಗೆ 'ಭಾಷಾ ಸಂಗಮ' ಮೊಬೈಲ್ ಅಪ್ಲಿಕೇಶನ್‌ನ ಬಳಕೆ ಮಾಡುವ ಮೂಲಕ (ಶಿಕ್ಷಣ ಸಚಿವಾಲಯ, ಭಾರತ ಸರ್ಕಾರವು 'MyGov' ಭಾರತದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ) ಇತರ ರಾಜ್ಯಗಳಿಂದ ಬಂದ ಉದ್ಯೋಗಿಗಳು ಸುಲಭವಾಗಿ ಸ್ಥಳೀಯ ಭಾಷೆ ಕಲಿಯಬಹುದು.











Click it and Unblock the Notifications