B Khata: ಬಿ - ಖಾತಾ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್‌: ಈ ದಿನದಿಂದ ನೋಂದಣಿ ಶುರು!

ಕರ್ನಾಟಕ ಸರ್ಕಾರವು ಬಿ ಖಾತಾ ಆಸ್ತಿದಾರರಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ರಾಜ್ಯದಲ್ಲಿ ಅನಧಿಕೃತ ಹಾಗೂ ರೆವಿನ್ಯೂ - ಯಾವುದೇ ಖಾತಾ ಇಲ್ಲದೇ ಇರುವ ಆಸ್ತಿಗಳಿಗೆ ಬಿ ಖಾತಾ ನೀಡುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಈಗಾಗಲೇ ಬಿ ಖಾತಾ ನೀಡುವ ಅವಧಿಯನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಿದೆ. ಇದೀಗ ರಾಜ್ಯ ಸರ್ಕಾರವು ಬಿ ಖಾತಾ ಆಸ್ತಿದಾರರಿಗೆ ಮತ್ತೊಂದು ಗುಡ್‌ನ್ಯೂಸ್‌ ನೀಡಿದೆ.

ಬಿ ಖಾತಾ ಆಸ್ತಿ ಅಥವಾ ನಿವೇಶನದಾರರಿಗೆ ಕೂಡಲೇ ಗುಡ್‌ನ್ಯೂಸ್‌ ನೀಡುವ ಬಗ್ಗೆ ಅಪ್ಡೇಟ್ಸ್‌ ಬಂದಿದೆ. ಬಿ ಖಾತಾ ನೋಂದಣಿ ಪ್ರಕ್ರಿಯೆ ಶೀಘ್ರ ಪ್ರಾರಂಭವಾಗಲಿದೆ. ನೋಂದಣಿ ಪ್ರಕ್ರಿಯೆ ಮತ್ತೆ ಶುರುವಾಗಲಿದೆ ಎಂದು ಟಿವಿ9 ವರದಿ ಮಾಡಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರವು ಬಿ ಖಾತಾಗೆ ಸಂಬಂಧಿಸಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಬಿ ಖಾತಾ ನೋಂದಣಿ ಪ್ರಕ್ರಿಯೆ ನಿಲ್ಲಿಸಿದ್ದರಿಂದ ಸಾವಿರಾರು ಜನ ಬಿ ಖಾತಾ ಆಸ್ತಿದಾರರಿಗೆ ಸಮಸ್ಯೆ ಆಗಿತ್ತು. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

Great good news for B-Khata property owners Registration begins from June

ರಾಜ್ಯದಲ್ಲಿ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಯಾವುದೇ ಲೋಪವಾಗಬಾರದು ಮತ್ತು ಹಣ ಅವ್ಯವಹಾರ ನಡೆಯಬಾರದು ಎನ್ನುವ ಕಾರಣಕ್ಕೆ ಇ ಖಾತಾ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಎ ಖಾತಾ ಇದ್ದವರಿಗೆ ಮಾತ್ರ ಇ ಖಾತಾ ಸಿಗುತ್ತಿತ್ತು. ಆದರೆ ರಾಜ್ಯ ಸರ್ಕಾರವು ಬಿ ಖಾತಾ ಇರುವವರನ್ನೂ ಒಂದು ಬಾರಿ ಪರಿಹಾರ ಯೋಜನೆಯ ಮೂಲಕ ಇ ಖಾತಾ ನೀಡುವುದಕ್ಕೆ ನಿರ್ಧರಿಸಿದೆ. ಬಿ ಖಾತಾ ನೀಡಲು ಮೊದಲು ಮೂರು ತಿಂಗಳು ಗಡುವು ನೀಡಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆ ಹಾಗೂ ಎಲ್ಲಾ ಅನಧಿಕೃತ ನಿವೇಶನ ಇರುವವರಿಗೂ ಬಿ ಖಾತಾ ಸಿಗದೆ ಇರುವುದರಿಂದ ಬಿ ಖಾತಾ ಅವಧಿಯ ಮತ್ತೆ ಇದೀಗ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.

ಇದೀಗ ಬಿ ಖಾತಾ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿರುವುದರಿಂದ ಸೈಟ್ ರಿಜಿಸ್ಟ್ರೇಷನ್ ಆಗದೇ ಇರುವ ಆಸ್ತಿದಾರರಿಗೆ ಸರ್ಕಾರವು ಇದೀಗ ಹೊಸ ಅವಕಾಶವನ್ನು ನೀಡಿದೆ. ಜೂನ್‌ ಮೊದಲ ವಾರದಿಂದಲೇಮತ್ತೆ ಬಿ ಖಾತಾ ನಿವೇಶನಗಳನ್ನು ನೋಂದಣಿ ಶುರು ಮಾಡುವುದಕ್ಕೆ ಸರ್ಕಾರ ತೀರ್ಮಾನಿಸಿರುವುದಾಗಿ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತ ಕೆ.ಎ ದಯಾನಂದ ಅವರ ಹೇಳಿದ್ದಾರೆ.

Great good news for B-Khata property owners Registration begins from June

ಈ ಆಸ್ತಿದಾರರಿಗೆ ಆಸ್ತಿ ನೋಂದಣಿ: ಕಳೆದ ಐದಾರು ತಿಂಗಳಿನಿಂದಲೂ ಇ ಸ್ವತ್ತು ಆಗದೆ ಇರುವ ಸೈಟ್‌ಗಳಿಗೆ ರಿಜಿಸ್ಟ್ರೇಷನ್ ವ್ಯವಸ್ಥೆ ಇರಲಿಲ್ಲ. ಈ ವಿಚಾರವಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ (ಆರ್ಡಿಪಿಆರ್)ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು. 2024 ಅಕ್ಟೋಬರ್ 31 ರ ಒಳಗೆ ಬಿ ಖಾತಾ ರಿಜಿಸ್ಟ್ರೇಷನ್ ಆಗಿರುವ ಸೈಟ್ಗಳಿಗೆ ಇ ಸ್ವತ್ತು ನೀಡಲಾಗುವುದು ಎಂದು ಹೇಳಲಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಆಸ್ತಿದಾರರಿಗೆ ಲಾಭವಾಗಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+