ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಜೂ.5ರಂದು

ಬೆಂಗಳೂರು, ಜೂ. 04: ಲೋಕಲ್ ಫೈಟ್ ಫಲಿತಾಂಶ ಜೂನ್ 5 ರಂದು ಹೊರಬೀಳಲಿದೆ. ರಾಜ್ಯದಲ್ಲಿ ಮೇ 28 ಮತ್ತು ಜೂನ್ 2 ರಂದು ಎರಡು ಹಂತಗಳಲ್ಲಿ ನಡೆದಿರುವ ಗ್ರಾಮ ಪಂಚಾಯಿತಿ ಚುನಾವಣೆ ಮತಎಣಿಕೆ ಶುಕ್ರವಾರ ಬೆಳಗ್ಗೆಯಿಂದ ಆರಂಭವಾಗಲಿದೆ.

ಒಟ್ಟು 5735 ಗ್ರಾಮ ಪಂಚಾಯಿತಿಗಳ 84,854 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಲೆಕ್ಕಾಚಾರದಂತೆ ಗ್ರಾಮ ಪಂಚಾಯಿತಿ ಚುನಾವಣೆ ರಾಜಕೀಯದಿಂದ ಹೊರತು ಎಂದಯ ಹೇಳಿದರೂ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಜಯದ ನಿರೀಕ್ಷೆಯಲ್ಲಿವೆ.[ಓಟ್ ಒತ್ತುವಾಗ ಬಾಡಿ ಶೇಕ್ ಆಗಿದ್ದು ಯಾಕೆ?]

election

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 5 ಗಂಟೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 30 ಜಿಲ್ಲೆಗಳಲ್ಲಿ ತಲಾ 15 ಜಿಲ್ಲೆಗಳಂತೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೊದಲ ಹಂತದ ಚುನಾವಣೆಯಲ್ಲಿ ಶೇ. 82.54ರಷ್ಟು ಮತದಾವಾಗಿತ್ತು. 2ನೇ ಹಂತದಲ್ಲಿ ಶೇ.80.38ರಷ್ಟು ಮತದಾನ ನಡೆದಿತ್ತು.[ಕಡ್ಡಾಯ ಮತದಾನ ನಿಯಮ ಮುರಿದ ದೇವೇಗೌಡ್ರು!]

ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೊಲೀಸ್ ಭದ್ರತೆಯೊಂದಿಗೆ ಹೆಚ್ಚುವರಿ ಸೇನಾ ತುಕಡಿಗಳನ್ನು ಸೂಕ್ಷ್ಮ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ. ಗ್ರಾಪಂ ಚುನಾವಣೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ಬಳಕೆ ಮಾಡಲಾಗಿಲ್ಲ. ಹಾಗಾಗಿ ಮತ ಎಣಿಕೆ ಸಂಪೂರ್ಣವಾಗಿ ಮುಗಿಯಲು ಇಡೀ ದಿನ ಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+