2ನೇ ಹಂತದ ಗ್ರಾ.ಪಂ ಚುನಾವಣೆ: ಕಣದಲ್ಲಿರುವವರೆಷ್ಟು? ಅವಿರೋಧ ಆಯ್ಕೆಯಾದವರೆಷ್ಟು?

ಬೆಂಗಳೂರು, ಡಿಸೆಂಬರ್ 23: ಮಂಗಳವಾರ (ಡಿ.22) ದಂದು ರಾಜ್ಯದಾದ್ಯಂತ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಇನ್ನು 2ನೇ ಹಂತದ ಮತದಾನ ಇದೇ ಡಿ.27 ರಂದು ನಡೆಯಲಿದೆ.

ರಾಜ್ಯದಲ್ಲಿ ನಡೆಯುವ 2ನೇ ಹಂತದ ಗ್ರಾ.ಪಂ ಚುನಾವಣೆಗೆ ಈಗಾಗಲೇ 3,697 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾ ಕಣದಲ್ಲಿ 1,05,431 ಅಭ್ಯರ್ಥಿಗಳಿದ್ದಾರೆ.

ಕರ್ನಾಟಕದ 109 ತಾಲ್ಲೂಕುಗಳ 2,709 ಗ್ರಾಮ ಪಂಚಾಯತಿಗಳಿಗೆ ಡಿ.27 ರಂದು 2ನೇ ಹಂತದ ಮತದಾನ ನಡೆಯಬೇಕಿದೆ. 3,697 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ 43,291 ಸ್ಥಾನಗಳ ಪೈಕಿ ಇನ್ನೂ 39,374 ಸ್ಥಾನಗಳಿಗೆ ಮತದಾನ ನಡೆಯಬೇಕಿದೆ.

Gram Panchayat Elections In Karnataka: Second Phase Of Voting On Dec 27

ಈ ಸಂದರ್ಭದಲ್ಲಿ ಡಿ. 27 ರಂದು ನಡೆಯಲಿರುವ ಎರಡನೆ ಹಂತದ ಮತದಾನಕ್ಕೆ 1,47,649 ನಾಮಪತ್ರಗಳು ಸ್ವೀಕೃತಗೊಂಡಿದ್ದವು. ನಾಮಪತ್ರ ಪರಿಶೀಲನೆ ನಂತರ 1,39,546 ನಾಮಪತ್ರಗಳು ಕ್ರಮಬದ್ಧವಾಗಿದ್ದವು.

ಇವರಲ್ಲಿ 34,115 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದ ಕಾರಣ 1,05,431 ಅಭ್ಯರ್ಥಿಗಳು ಪ್ರಸ್ತುತ ಗ್ರಾ.ಪಂ ಚುನಾವಣಾ ಕಣದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+