SSLC: ಉತ್ತಮ ಫಲಿತಾಂಶ ಪಡೆಯದ ಶಾಲೆಗಳ ಅನುದಾನಕ್ಕೆ ಕತ್ತರಿ

ಬೆಂಗಳೂರು, ಜೂನ್‌ 28: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡದ ಶಾಲೆಗಳಿಗೆ ಅನುದಾನ ನೀಡುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹೇಳಿದ್ದಾರೆ.

ಖಾಸಗಿ ಅಥವಾ ಅನುದಾನಿತ ಶಾಲೆಗಳು ಉತ್ತಮ ಫಲಿತಾಂಶವನ್ನು ನೀಡಿದರೆ ಮಾತ್ರ ಅನುದಾನ ನೀಡಲಾಗುತ್ತದೆ, ಶೂನ್ಯ ಫಲಿತಾಂಶ ಅಥವಾ 5 ವರ್ಷದ ಸರಾಸರಿ ಫಲಿತಾಂಶದಲ್ಲಿ ಶೇಕಡಾ ಒಂದರಷ್ಟು ಕಡಿಮೆ ಬಂದರೂ ಅನುದಾನವನ್ನು ನೀಡಲಾಗುವುದಿಲ್ಲ ಎಂದು ಹೇಳಿದ್ದು ಇದೀಗ ಖಾಸಗಿ ಶಾಲೆಗಳಿಗೆ ತಲೆನೋವಾಗಿದೆ.

ಸರ್ಕಾರಿ ಶಾಲೆಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಕೇವಲ ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗುವಂತೆ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಸರ್ಕಾರಿ ಶಾಲೆಗಳೂ ಕೂಡ ಕಡಿಮೆ ಫಲಿತಾಂಶವನ್ನು ಗಳಿಸಿವೆ ಆದರೆ ಈ ನಿಯಮ ಸರ್ಕಾರಿ ಶಾಲೆಗಳಿಗೆ ಯಾಕೆ ಅನ್ವಯವಾಗುವುದಿಲ್ಲ ಎಂದು ಶಾಲಾ ಆಡಳಿತ ಮಂಡಳಿಗಳು ಪ್ರಶ್ನೆ ಮಾಡುತ್ತಿವೆ.

Govt says no results, no salary

ಇದು ಸರಿಯಾದ ನಿಯಮವಲ್ಲ ನಾವು ಶಾಲೆಯಲ್ಲಿ ಉತ್ತಮ ಶಿಕ್ಷಣವನ್ನೇ ಮಕ್ಕಳಿಗೆ ನೀಡುತ್ತೇವೆ ಆದರೆ ಅವರ ಬುದ್ಧಿಮಟ್ಟವನ್ನು ಗಮನದಲ್ಲಿರಿಸಬೇಕಾಗುತ್ತದೆ ಆದರೆ ಈ ಕಾರಣಕ್ಕೆ ಶಾಲೆಯ ಅನುದಾನವನ್ನು ತಡೆಯುವುದು ಸರಿಯಲ್ಲ ಎಂದು ಕೆಲವು ಶಿಕ್ಷಕರು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+