ಕರ್ನಾಟಕ ಸರ್ಕಾರಿ ಯೋಜನೆಗಳ ಮಾಹಿತಿ ಅಂಗೈನಲ್ಲಿ ತಿಳಿಯಿರಿ: 'ವಾಟ್ಸಪ್' ಚಾನಲ್, 'ಇನ್ಸ್ಟಾ' ಪೇಜ್ ಲಿಂಕ್ ಇಲ್ಲಿವೆ
ಬೆಂಗಳೂರು, ಡಿಸೆಂಬರ್ 24: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನದೇ ಆದ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರ ಚುಕ್ಕಾಣೆ ಹಿಡಿದಿದೆ. ಅಧಿಕಾರಕ್ಕೆ ಬಂದ ಬಳಿಕ ಒಂದೊಂದೆ ಯೋಜನೆಗಳನ್ನು ಜಾರಿಗೊಳಿಸಿದೆ. ಇವು ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ತಿಳಿಯಲು ಸಾರ್ವಜನಿಕರಿಗೆ ಡಿಜಿಟಲ್ ವೇದಿಕೆಯಲ್ಲಿ ಅವಕಾಶ ಮಾಡಿಕೊಟ್ಟಿದೆ.
ಗ್ಯಾರೆಂಟಿ ಯೋಜನೆಗಳ ಮೇಲೆ ವಿಶ್ವಾಸ, ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಭರವಸೆಗಳ ವಿರುದ್ಧ ಬಿಜೆಪಿ, ಜೆಡಿಎಸ್ ಟೀಕಿಸುತ್ತಲೇ ಇವೆ. ಆದರೆ ಕಾಂಗ್ರೆಸ್ ನಾಯಕರು ತಮ್ಮ ಕೆಲಸಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯ ಎಲ್ಲ ಯೋಜನೆಗಳ ಮಾಹಿತಿಯನ್ನು ಜನರಿಗೆ ಅಂಗೈನಲ್ಲಿಯೇ ಒದಗಿಸಲು ನಿರ್ಧರಿಸಿದೆ. ಹಾಗಾದರೆ ಸರ್ಕಾರ ಏನು ಮಾಡಿದೆ, ಏನಿದು ಮಾಹಿತಿ ಎಂಬುದನ್ನು ಇಲ್ಲಿ ತಿಳಿಯಿರಿ.

ನಮ್ಮ ಸರ್ಕಾರದ ಎಲ್ಲಾ ಇಲಾಖೆಗಳ ಜನಪರ ಯೋಜನೆಗಳು, ಸಾಧನೆಗಳು, ಫಲಾನುಭವಿಗಳು ಅನುಸರಿಸಬೇಕಿರುವ ಪ್ರಕ್ರಿಯೆಗಳು, ಸಾರ್ವಜನಿಕ ಜಾಗೃತಿಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿಯನ್ನು 'ಕರ್ನಾಟಕ ವಾರ್ತೆ'ಯ ಅಧಿಕೃತ ಮೂಲಗಳಿಂದ ನೀವು ತಿಳಿಯಬಹದು ಎಂದು ಸಿಎಂ ಆಪ್ ಕರ್ನಾಟಕ ಟಿಟ್ಟರ್ X ಖಾತೆಯಲ್ಲಿ ಮಾಹಿತಿ ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳಲಾಗಿದೆ.
ನಮ್ಮ ಸರ್ಕಾರದ ಎಲ್ಲಾ ಇಲಾಖೆಗಳ ಜನಪರ ಯೋಜನೆಗಳು, ಸಾಧನೆಗಳು, ಫಲಾನುಭವಿಗಳು ಅನುಸರಿಸಬೇಕಿರುವ ಪ್ರಕ್ರಿಯೆಗಳು, ಸಾರ್ವಜನಿಕ ಜಾಗೃತಿಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿಯನ್ನು 'ಕರ್ನಾಟಕ ವಾರ್ತೆ'ಯ ಅಧಿಕೃತ ವಾಟ್ಸಾಪ್ ಚಾನೆಲ್ ಹಾಗೂ ಇನ್ಸ್ಟಾಗ್ರಾಮ್ ಪೇಜ್ಗಳಲ್ಲಿ ನಿಯಮಿತವಾಗಿ ತಲುಪಿಸುತ್ತೇವೆ. ನಮ್ಮ ಸರ್ಕಾರದೊಂದಿಗೆ ನೇರ ಸಂಪರ್ಕ… pic.twitter.com/pJtcK7XelH
— CM of Karnataka (@CMofKarnataka) December 23, 2023
ಸರ್ಕಾರದಿಂದ ವಾಟ್ಸಪ್ ಚಾನಲ್, ಇನ್ಸ್ಟಾ ಪೇಜ್
ಕಾಂಗ್ರೆಸ್ ಸರ್ಕಾರದ ಎಲ್ಲ ಇಲಾಖೆಗಳ ಯೋಜನೆ, ಪ್ರಕ್ರಿಯೆ ಮುಂತಾದ ಅಂಶಗಳನ್ನು ತಿಳಿಯಲು ಇಲಾಖೆಗಳ ವ್ಯಾಪ್ತಿಯಲ್ಲಿ ವಾಟ್ಸಾಪ್ ಚಾನೆಲ್ ಹಾಗೂ ಇನ್ಸ್‌ಟಾಗ್ರಾಮ್ ಪೇಜ್‌ಗಳ ಮೂಲಕ ನಿಯಮಿತವಾಗಿ ತಲುಪಿಸುತ್ತೇವೆ. ನಮ್ಮ ಸರ್ಕಾರದೊಂದಿಗೆ ನೇರ ಸಂಪರ್ಕ ಸಾಧಿಸಲು ಈಗಲೇ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಾಲೋ ಮಾಡಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ.

''ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವನಿಧಿ, ಶಕ್ತಿಯೋಜನೆ, ಅನ್ನಭಾಗ್ಯ ಯೋಜನೆಗಳ'' ಮಾತ್ರವಲ್ಲೇ ನೀವು ಈ ಕೆಳಗಿನ ಲಿಂಕ್ ಮೂಲಕ ಸರ್ಕಾರ ಮಟ್ಟದಲ್ಲಿನ ''ಉದ್ಯೋಗ ನೇಮಕಾತಿ, ಆರೋಗ್ಯ ಅಭಿಯಾನ, ಯೊಜನೆ ಲಾಭ ಪಡೆಯಲು ಅರ್ಜಿ ಸಲ್ಲಿಕೆಗಳು, ಪ್ರಕ್ರಿಯೆ, ಸರ್ಕಾರ ಸಾಧನೆ, ಜಾಗೃತಿ ಅಭಿಯಾನ, ಇನ್ನಿತರ ಯೋಜನೆಗಳ ಕುರಿತು ಮೊಬೈಲ್‌ನಲ್ಲಿಯೇ ತಿಳಿದುಕೊಳ್ಳಬಹುದು.
ಯೋಜನೆಗಳ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸಂಬಂಧ 'ಕರ್ನಾಟಕ ನವ ನಿರ್ಮಾಣಕ್ಕೆ ಗ್ಯಾರೆಂಟಿ ಸರ್ಕಾರ' ಘೋಷವಾಕ್ಯದಡಿ ಮೇಲಿನ ಎಲ್ಲ ಇಲಾಖೆಗಳ ಮಾಹಿತಿ ತಿಳಿಯಲು ನೀವು ಕರ್ನಾಟಕ ವಾರ್ತಾ ಚಾನಲ್ ವಾಟ್ಸಪ್ https://whatsapp.com/channel/0029VaCGAbD0gcfO1BkYQo26 ಗೆ ಹಾಗೂ ಕರ್ನಾಟಕ ವಾರ್ತೆ ಇನ್‌ಸ್ಟಾಗ್ರಾಮ್ ಪೇಜ್ https://www.instagram.com/karnatakavarthe/ ಫಾಲೋ ಮಾಡುವ ಮೂಲಕ ನೀವು ಸರ್ಕಾರ ಯೋಜನೆಗಳನ್ನು ತಿಳಿಯಬಹುದಾಗಿದೆ. ಲಿಂಕ್ ಸಿಗದಿದ್ದರೆ x ಫೋಟೊದಲ್ಲಿರುವ ಕ್ಯೂಆರ್ ಕೋಡ್ ಸಹ ಸ್ಕ್ಯಾನ್ ಮಾಡಬಹುದಾಗಿದೆ.
ಕುಳಿತಲ್ಲಿಯೇ ಮಾಹಿತಿ ಸಿಗುತ್ತದೆ
ಸರ್ಕಾರವು ವಾರ್ತಾ ಇಲಾಖೆ ಮೂಲಕ ತಾನು ಮಾಡಿರುವ, ಅನುಷ್ಠಾನಕ್ಕೆ ತಂದಿರುವ, ಭವಿಷ್ಯ ನಿರ್ಧಾರಗಳನ್ನು ವಾಟ್ಸಪ್ ಚಾಣಲ್ ಮತ್ತು ಇನ್‌ಸ್ಟಾಗ್ರಾಮ್ ಪೇಜಿನಲ್ಲಿ ಹಾಕುತ್ತಲೇ ಇರುತ್ತದೆ. ಸಾರ್ವಜನಿಕರು ಕುಳಿತಲ್ಲಿಯೇ ಅಗತ್ಯ ಮಾಹಿತಿ ಪಡೆಯಬಹುದು. ಜೊತೆಗೆ ಯೋಜನೆಗಳ ಫಲಾನುಭವಿಯಾಗಲು ಅಗತ್ಯ ಅರ್ಜಿಗಳನ್ನು ಸಲ್ಲಿಸಲು ಮಾಹಿತಿ ಪಡೆಯಬಹುದಾಗಿದೆ.












Click it and Unblock the Notifications