ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂನಿಕೋಡ್ ಶಿಷ್ಟತೆ ಫಲ, ಕನ್ನಡ ಎಸ್ಸೆಂಎಸ್ ಭಾಗ್ಯ

By Mahesh
|
Google Oneindia Kannada News

ಬೆಂಗಳೂರು, ಜ.22: ಯೂನಿಕೋಡ್ ಶಿಷ್ಟತೆ ಬೆಂಬಲಿಸುವ ತಂತ್ರಾಂಶಗಳು ಕನ್ನಡದಲ್ಲೂ ಲಭ್ಯವಾಗಿರುವುದರಿಂದ ಇನ್ಮುಂದೆ ಮೊಬೈಲ್ ಫೋನ್ ಬಳಕೆದಾರರು ಯಾವುದೇ ತೊಂದರೆ ಇಲ್ಲದೆ ಕನ್ನಡದಲ್ಲೇ ಎಸ್ ಎಂಎಸ್ ಸಂದೇಶ ಕಳಿಸಬಹುದಾಗಿದೆ. ದಶಕಗಳ ಕಾಲದ ಬೇಡಿಕೆಯನ್ನು ಸರ್ಕಾರ ಕೊನೆಗೂ ಈಡೇರಿಸಿದ್ದು, ಯೂನಿಕೋಡ್ ಶಿಷ್ಟತೆ ಅಳವಡಿಸಿಕೊಂಡಿರುವ ಕನ್ನಡ ತಂತ್ರಾಂಶಗಳು ಬಿಡುಗಡೆ ಭಾಗ್ಯ ಕಾಣುತ್ತಿದೆ.

ಕನ್ನಡ ಭಾಷೆ, ಉಳಿಕೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು ಎಂದು ದನಿ ಎತ್ತಿದ್ದ ದಿವಂಗತ ಪೂರ್ಣ ಚಂದ್ರ ತೇಜಸ್ವಿ ಅವರ ಆಶಯದಂತೆ ಇಂದು ಅನೇಕ ಕನ್ನಡ ತಂತ್ರಾಂಶಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ.[ಕುವೆಂಪು ತಂತ್ರಾಂಶ ಆವೃತ್ತಿ 2.0]

* 12 ಹೊಸ ಫಾಂಟ್ ಗಳು
* ಹೊಸ ಕೀಲಿ ಮಣೆ ಶೈಲಿ
* ಹಲವಾರು ಪರಿವರ್ತನಾ ಸಾಫ್ಟ್ ವೇರ್
* ಮೊಬೈಲ್ ನಿಂದ ಮೊಬೈಲ್ ಗೆ ಕನ್ನಡದಲ್ಲೇ ಸಂದೇಶ ಕಳಿಸಲು ತಂತ್ರಾಂಶ
* ಪರಿವರ್ತನಾ ತಂತ್ರಾಂಶ ಮೂಲಕ ಈ ಹಿಂದಿನ ಕಡತಗಳನ್ನು(ಶ್ರೀಲಿಪಿ, ನುಡಿ, ಬರಹ..ಇತ್ಯಾದಿ ಲಿಪಿ ಬಳಸಿರುವ ಕಡತ)ಯೂನಿಕೋಡ್ ಗೆ ಸುಲಭವಾಗಿ ಪರಿವರ್ತಿಸಬಹುದಾಗಿದೆ.
* ಅಂಧ ವಿದ್ಯಾರ್ಥಿಗಳ ನೆರವಿಗಾಗಿ ಬ್ರೈಲ್ ಲಿಪಿ
* ಕನ್ನಡದ್ದೇ ಕೀ ಬೋರ್ಡ್ [ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ]

Unicode standard based Kannada Software


ಪೂರ್ಣ ಚಂದ್ರ ತೇಜಸ್ವಿ ಅವರ ಆಶಯದಂತೆ ಈ ಹಿಂದೆ ಹಂಪಿ ವಿಶ್ವವಿದ್ಯಾಲಯಕ್ಕೆ ಕುವೆಂಪು ತಂತ್ರಾಂಶ ಹಾಗೂ ಲಿಪಿಗಳನ್ನು ರೂಪಿಸಿಕೊಟ್ಟಿದ್ದ ಹಾಸನದ ಮಾರುತಿ ಸಾಫ್ಟ್ ವೇರ್ ಇನ್ಫಾರ್ಮೇಷನ್ ಸಿಸ್ಟಮ್ ಸಂಸ್ಥೆಯೇ ಈ ಮೇಲ್ಕಂಡ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿದೆ. 12 ಫಾಂಟ್ ಗಳಿಗೆ 8 ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ಹಾಗೂ ಡಿವಿ ಗುಂಡಪ್ಪ, ಕೆಎಸ್ ನರಸಿಂಹ ಸ್ವಾಮಿ ಅವರ ಹೆಸರನ್ನಿಡಲಾಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಬಳಕೆ ಮತ್ತು ಅಭಿವೃದ್ಧಿ ಕುರಿತಂತೆ ವರದಿ ನೀಡಲು 2008ರಲ್ಲಿ ಮಾಜಿ ಕುಲಪತಿ ಡಾ. ಚಿದಾನಂದ ಗೌಡ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ 2011ರಲ್ಲಿ ತನ್ನ ವರದಿಯನ್ನು ನೀಡಿತ್ತು. 2011ರಲ್ಲಿ ಟೆಂಡರ್ ಕರೆದು 2012/13ರಲ್ಲಿ ತಂತ್ರಾಂಶ ತಯಾರಾದ ತಂತ್ರಾಂಶಗಳು 2014ರಲ್ಲಿ ಬಿಡುಗಡೆಗೊಳ್ಳುತ್ತಿದೆ ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ತಂತ್ರಜ್ಞ, ಖ್ಯಾತ ಅಂಕಣಗಾರ ಯು.ಬಿ ಪವನಜ ಅವರು ಹೇಳಿದ್ದಾರೆ.

English summary
Mobile phone users can start sending SMSes in Kannada irrespective of OS platform. 12 new Unicode fonts, converters Kannada Braille software and other Unicode standalone supported Kannada softwares developed by a Hassan-based software company, Maruthi Software and Information System made available to public
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X