ಕಾವೇರಿ, ಮಹದಾಯಿ, ಕೃಷ್ಣಾ ಜಲವಿವಾದ: ವಕೀಲರಿಗೆ 122.75 ಕೋಟಿ ರುಪಾಯಿ ವೆಚ್ಚ ಮಾಡಿರುವ ರಾಜ್ಯ ಸರ್ಕಾರಗಳು
ಕರ್ನಾಟಕ ರಾಜ್ಯಕ್ಕೆ ಜಲವಿವಾದಗಳು ದೊಡ್ಡ ಸಮಸ್ಯೆಯಾಗಿದೆ. ರಾಜ್ಯದ ಜನರಿಗೆ ಅನ್ಯಾಯವಾಗುತ್ತಲೇ ಇದ್ದು, ಸರ್ಕಾರ ಮಾತ್ರ ನ್ಯಾಯಕ್ಕಾಗಿ ನೂರಾರು ಕೋಟಿಗಳನ್ನು ಖರ್ಚು ಮಾಡಿದೆ. ಕೃಷ್ಣಾ, ಕಾವೇರಿ, ಮಹದಾಯಿ ವಿಚಾರಗಳಲ್ಲಿ ರಾಜ್ಯದ ಪರ ವಕಾಲತ್ತು ವಹಿಸಿದ್ದ 41 ಹಿರಿಯ ನ್ಯಾಯವಾದಿಗಳಿಗೆ ರಾಜ್ಯ ಸರ್ಕಾರ ಈವರೆಗೆ 122 ಕೋಟಿ 75 ಲಕ್ಷ ರೂ. ಶುಲ್ಕವನ್ನು ಪಾವತಿ ಮಾಡಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಈ ಮಾಹಿತಿಯನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಅವರು ವಕೀಲರ ಶುಲ್ಕದ ಬಗ್ಗೆ ಮಾಹಿತಿ ಕೇಳಿದ್ದರು. ರಾಜ್ಯ ಜಲ ಸಂಪನ್ಮೂಲ ಇಲಾಖೆ ಈ ಮಾಹಿತಿಯನ್ನು ನೀಡಿದೆ.

ಕಾವೇರಿ ನ್ಯಾಯಕ್ಕಾಗಿ 54.13 ಕೋಟಿ ರೂ. ವೆಚ್ಚ
ಮಾಧ್ಯಮಗಳ ಜೊತೆ ಮಾತನಾದಿದ ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡಾದ, ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೆರಿ ಸೇರಿ ನಾಲ್ಕು ರಾಜ್ಯಗಳ ನಡುವೆ ಇರುವ ಕಾವೇರಿ ನೀರು ಹಂಚಿಕೆ ವಿಚಾರ ಸಂಬಂಧ, 1990ರಲ್ಲಿ ಕಾವೇರಿ ವಿವಾದ ಇತ್ಯರ್ಥಕ್ಕೆ ಕಾವೇರಿ ನ್ಯಾಯಾಧಿಕರಣ ರಚನೆ ಮಾಡಲಾಗಿದೆ. 2017ರವೆರೆಗೆ ಕಾವೇರಿ ನ್ಯಾಯಾಧಿಕರಣದ ಎದುರು 580 ಸಭೆಗಳನ್ನು ನಡೆಸಲಾಗಿದೆ. ರಾಜ್ಯದ ಪರ ವಕಾಲತ್ತು ವಹಿಸಿದ್ದ ವಕೀಲರಿಗೆ ರಾಜ್ಯ ಸರ್ಕಾರ 54.13 ಕೋಟಿ ರೂಪಾಯಿ ಶುಲ್ಕವನ್ನಾಗಿ ಪಾವತಿ ಮಾಡಿದೆ ಎಂದು ಹೇಳಿದ್ದಾರೆ.
ಕೃಷ್ಣ ನದಿ ವಿವಾದಕ್ಕೆ 43.24 ಕೋಟಿ ರೂ. ವೆಚ್ಚ
ಕೃಷ್ಣಾ ನದಿ ನೀರು ಹಂಚಿಕೆ ವಿವಾದಕ್ಕೆ ಕೂಡ ರಾಜ್ಯ ಸರ್ಕಾರ ಭಾರಿ ಮೊತ್ತವನ್ನು ಖರ್ಚು ಮಾಡಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮೂರು ರಾಜ್ಯಗಳ ನಡುವೆ ಈ ವಿವಾದ ನಡೆಯುತ್ತಿದ್ದು, ವಿವಾದ ಬಗೆಹರಿಸಲು 2004ರಲ್ಲಿ ಕೃಷ್ಣಾ ನ್ಯಾಯಾಧೀಕರಣ ರಚನೆ ಮಾಡಲಾಗಿದೆ.
2013ರವರೆಹೆ ಕೃಷ್ಣಾ ನ್ಯಾಯಾಧೀಕರಣದ ಎದುರು 295 ಸಭೆಗಳು ನಡೆದಿದ್ದು, ಇದುವರೆಗೆ ರಾಜ್ಯದ ಪರವಾಗಿ ವಾದ ಮಾಡಿರುವ ವಕೀಲರಿಗೆ ರಾಜ್ಯ ಸರ್ಕಾರಗಳು 43.24 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆರ್ ಟಿಐ ಮಾಹಿತಿಯಲ್ಲಿ ತಿಳಿದುಬಂದಿದೆ.
ಉತ್ತರ ಕರ್ನಾಟಕದ ಪ್ರಮುಖ ನೀರಿನ ಯೋಜನೆಯಾದ ಮಹಾದಾಯಿ ವಿಚಾರದಲ್ಲಿ ಕೂಡ ರಾಜ್ಯ ಸರ್ಕಾರ ಹಲವು ಕೋಟಿ ರೂಪಾಯಿ ವೆಚ್ಚ ಮಾಡಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ವಿವಾದ ಇನ್ನೂ ಬಗೆಹರಿದಿಲ್ಲ. ವಿವಾದ ಇತ್ಯರ್ಥ ಪಡಿಸಲು 2010ರಲ್ಲಿ ಮಹದಾಯಿ ನ್ಯಾಯಾಧೀಕರಣ ರಚನೆ ಮಾಡಲಾಗಿದೆ, 2017ರವರೆಗೆ ಮಹದಾಯಿ ನ್ಯಾಯಾಧಿಕರಣದ ಎದುರು 97 ಸಭೆಗಳು ಆಗಿದ್ದು, ರಾಜ್ಯದ ಪರ ವಾದ ಮಂಡಿಸಿರುವ ವಕೀಲರಿಗೆ 25.38 ಕೋಟಿ ರೂಪಾಯಿ ಶುಲ್ಕವನ್ನಾಗಿ ಪಾವತಿ ಮಾಡಿದೆ.












Click it and Unblock the Notifications