Get Updates
Get notified of breaking news, exclusive insights, and must-see stories!

ಮೇ 29ರಿಂದ ಶಾಲೆಗಳು ಆರಂಭ: ಬಿಸಿಯೂಟ ತಯಾರಿಗೆ ಮಾರ್ಗಸೂಚಿಗಳು

ಬೆಂಗಳೂರು , ಮೇ 28: ಕರ್ನಾಟಕದಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷ ಮೇ 29ರಿಂದ ಆರಂಭವಾಗುತ್ತಿದೆ. ಈ ಹಿನ್ನಲೆಯಲ್ಲಿ ಪಿ.ಎಂ.ಪೋಷಣ್ (ಮಧ್ಯಾಹ್ನ ಉಪಾಹಾರ ಯೋಜನೆ) ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು ಸುತ್ತೋಲೆ ಹೊರಡಿಸಲಾಗಿದೆ.

ಈ ಕುರಿತು ಬಿ. ಬಿ. ಕಾವೇರಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದಾರೆ. 2024-25ನೇ ಸಾಲಿನಲ್ಲಿ ಪಿ.ಎಂ.ಪೋಷಣ್(ಮಧ್ಯಾಹ್ನ ಉಪಾಹಾರ ಯೋಜನೆ) ಮತ್ತು ಕ್ಷೀರಭಾಗ್ಯ ಯೋಜನೆಯನ್ನು ರಾಜ್ಯದ ಎಲ್ಲಾ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಪ್ರೌಢಶಾಲೆಗಳ 1-10ನೇ ತರಗತಿಯ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳುವ ಬಗ್ಗೆ ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.

Government School To Open On May 29 Circular On Preparation Of Mid Day Meal

ಪಿ.ಎಂ.ಪೋಷಣ್ (ಮಧ್ಯಾಹ್ನ ಉಪಾಹಾರ ಯೋಜನೆ), ಕ್ಷೀರಭಾಗ್ಯ ಯೋಜನೆ ಪೂರಕ ಪೌಷ್ಠಿಕ ಆಹಾರ ವಿತರಣೆಯನ್ನು ವಾರ್ಷಿಕವಾಗಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 1-10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡು ಬಿಸಿಯೂಟದೊಂದಿಗೆ ದಿನಾಂಕ 29/05/2024ರಿಂದ ಪ್ರಾರಂಭಿಸುವುದು. ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಿಕೆಯೊಂದಿಗೆ ಸಂಭ್ರಮದಿಂದ ಬಿಸಿಯೂಟ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರಿಗೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರಿಗೆ ಈ ಮೂಲಕ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದು ಸುತ್ತೋಲೆ ಹೇಳಿದೆ.

ಮುಖ್ಯಶಿಕ್ಷಕರ ಜವಾಬ್ದಾರಿ: ಮುಖ್ಯ ಶಿಕ್ಷಕರು ಏಪ್ರಿಲ್, ಮೇ 2024ರ ಬೇಸಿಗೆ ರಜಾ ಅವಧಿಯಲ್ಲಿ ಶಾಲೆಗಳಲ್ಲಿ ಉಳಿಕೆ ಇರುವ ಆಹಾರ ಧಾನ್ಯಗಳಾದ ಅಕ್ಕಿ, ಗೋಧಿ, ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ, ಹಾಲಿನ ಪುಡಿ, ಹಾಗೂ ಇತರ ಆಹಾರ ಪದಾರ್ಥಗಳು ಉಳಿಕೆಯಾಗಿದ್ದಲ್ಲಿ ಪರಿಶೀಲಿಸಿ 10.04.2024 ಅಂತ್ಯಕ್ಕೆ ದಾಸ್ತಾನಿಗೆ ತೆಗೆದುಕೊಂಡು ದಾಸ್ತಾನು ವಹಿಯಲ್ಲಿ ಉಳಿಕೆ ಪ್ರಮಾಣವನ್ನು ನಮೂದಿಸಿ ದಾಖಲಿಸಿ ದೃಢೀಕರಿಸುವುದು.

ಶಾಲಾ ದಾಸ್ತಾನಿನಲ್ಲಿರುವ ಆಹಾರ ಪದಾರ್ಥಗಳು ಕೆಡದಂತೆ, ಹುಳಹಿಡಿಯದಂತೆ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಪಾಲಿಸಿ ಸುರಕ್ಷಿತವಾಗಿ ಇಡಲು ಕ್ರಮವಹಿಸುವುದು. ಆಹಾರ ಧಾನ್ಯಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ವಾರಕ್ಕೊಮ್ಮೆ ದಾಸ್ತಾನು ಕೊಠಡಿಗೆ ಭೇಟಿ ನೀಡಿ Deep-Cleaning ಮಾಡಿಸಿ, ಸ್ವಚ್ಚತೆ ಕಾಪಾಡುವುದು. ಅಕ್ಕಿ, ಗೋಧಿ, ತೊಗರಿಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಹಾಕಿ ಕಳಪೆಯಾಗದಂತೆ ನೋಡಿಕೊಳ್ಳುವುದು.

ಅಕ್ಕಿ, ಗೋಧಿ, ತೊಗರಿಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ಮಳೆ ನೀರಿನಲ್ಲಿ ನೆನೆಯದಂತೆ ನೋಡಿಕೊಳ್ಳಲು ನೆಲದ ಮೇಲೆ ಪ್ಲಾಸ್ಟಿಕ್/ ಮರದ ಮಣೆಗಳನ್ನು ಬಳಸಿ ಅದರ ಮೇಲೆ ಆಹಾರ ಧಾನ್ಯಗಳ ಮೂಟೆಗಳನ್ನು ಜೋಡಿಸುವುದು. ಹೀಗೆ ಜೋಡಿಸುವಾಗ ಮೂಟೆಗಳು ಗೋಡೆಗೆ ತಗಲದಂತೆ ಸುತ್ತಲೂ ಅಂತರವನ್ನು ಕಾಯ್ದುಕೊಳ್ಳುವುದು.

ಅಡುಗೆ ಕೋಣೆಗಳಲ್ಲಿ ಇಲಿಗಳು ಬರದಂತೆ ಬೋನುಗಳನ್ನು ಇಟ್ಟು Pest-Control ಕ್ರಮಗಳನ್ನು ಅನುಸರಿಸುವುದು. ಗೋಡೆಗಳನ್ನು ಸ್ವಚ್ಛಗೊಳಿಸಿ ಜಾಡ ತೆಗೆದು, ಹಲ್ಲಿ, ಜಿರಲೆ, ನೊಣಗಳು ಬರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಕಿಟಕಿ, ಎಕ್ಸಿಟ್‌ ಫ್ಯಾನ್ ಇರುವ ಜಾಗದಲ್ಲಿ ಕಬ್ಬಿಣದ ಮೆಶ್ ಹಾಕಿಸಿ ಹೊರಗಿನಿಂದ ಯಾವುದೇ ಕ್ರಿಮಿ- ಕೀಟಗಳು ಬರದಂತೆ ಭದ್ರಪಡಿಸುವುದು.

ಶಾಲೆಯಲ್ಲಿ ದಾಸ್ತಾನು ಇರುವ ಆಹಾರ ಪದಾರ್ಥಗಳನ್ನು FIFO ಮತ್ತು FEFO ಪದ್ಧತಿಯಲ್ಲಿ ಬಳಸುವುದು.ಅವಧಿ ಮುಗಿದ ಪದಾರ್ಥಗಳನ್ನು ಬಿಸಿ ಊಟದಲ್ಲಿ ಬಳಸುವಂತಿಲ್ಲ. ಆಹಾರ ಪದಾರ್ಥಗಳ ಪ್ಯಾಕೇಟ್ ಮತ್ತು ಮೂಟೆಗಳ ಮೇಲೆ ಯಾವ ದಿನದಂದು ಆಹಾರ ಪದಾರ್ಥಗಳನ್ನು ದಾಸ್ತಾನಿನಲ್ಲಿಡಲಾಗಿದೆ ಎಂಬ ಮಾಹಿತಿಗೆ ಅನುಗುಣವಾಗಿ ದಿನಾಂಕವನ್ನು ನಮೂದಿಸುವುದು. ಇದರಂತೆ ಪರಿಶೀಲಿಸಿ ಅವಧಿಯಿರುವ ಪದಾರ್ಥಗಳನ್ನೇ ಬಳಸುವುದನ್ನು ಖಚಿತಪಡಿಸಿಕೊಳ್ಳುವುದು. ಈ ಬಗ್ಗೆ ಮುಖ್ಯ ಅಡುಗೆಯವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು.

ಕಳಪೆಯಾದ, ಹುಳ ತಿಂದ, ಗುಣಮಟ್ಟ ಹಾಳಾಗಿರುವ, ಕೊಳತಿರುವ ಆಹಾರ ಧಾನ್ಯಗಳು, ಆಹಾರ ಪದಾರ್ಥಗಳನ್ನು ದಾಸ್ತಾನಿನಿಂದ ಬೇರ್ಪಡಿಸಿ ಹೊರ ಹಾಕುವುದು ಹಾಗೂ ಬಳಸದಂತೆ ನೋಡಿಕೊಳ್ಳುವುದು. ಶಾಲೆಯಲ್ಲಿ ದಾಸ್ತಾನು ಇಟ್ಟಿರುವ ಆಹಾರ ಧಾನ್ಯಗಳು, ಪದಾರ್ಥಗಳು, ಪಾತ್ರೆ ಪರಿಕರಗಳು, ಸ್ವವ್ ಗ್ಯಾಸ್ ಸಿಲಿಂಡರ್‌ಗಳು ಇರುವ ಅಡುಗೆ ಕೋಣೆ, ಉಗ್ರಾಣವನ್ನು ಬೇಸಿಗೆ ರಜೆಯಲ್ಲಿ ಸರಿಯಾಗಿ ಬೀಗ ಹಾಕಿ ಭದ್ರಪಡಿಸುವುದು. ಶಾಲೆಗೆ ಆಗಾಗ್ಗೆ ಭೇಟಿ ಕೊಟ್ಟು ಉಗ್ರಾಣ ಹಾಗೂ ಅಡುಗೆ ಕೋಣೆ ಪರಿಶೀಲನೆ ನಡೆಸುವುದು. ದಾಸ್ತಾನು ಕೊಠಡಿಯನ್ನು ಸುರಕ್ಷಿತವಾಗಿ ಸೂಕ್ತ ಕ್ರಮಗಳಿಂದ ಭದ್ರಪಡಿಸಿ ಆಹಾರ ಪದಾರ್ಥಗಳು ಅಪವ್ಯಯವಾಗದಂತೆ ನೋಡಿಕೊಳ್ಳುವುದು ಮುಖ್ಯಶಿಕ್ಷಕರ ಜವಾಬ್ದಾರಿಯಾಗಿರುತ್ತದೆ.

ಶಾಲೆಯಲ್ಲಿರುವ ನೀರಿನ ಸಂಪು, ನೀರಿನ ತೊಟ್ಟಿ, ಓವರ್ ಹೆಡ್ ಟ್ಯಾಂಕ್ ಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಹೊಸ ನೀರನ್ನು ತುಂಬುವುದು ಹಾಗೂ ನಲ್ಲಿ, ಪೈಪ್ ಗಳು ಕೆಟ್ಟುಹೋಗಿದ್ದಲ್ಲಿ ಅಗತ್ಯ ರಿಪೇರಿಯನ್ನು (ಹೊಸ ಪರಿಕರಗಳನ್ನು ಖರೀದಿಸಿ) ಮಾಡಿಸಿ ನೀರಿನ ಸರಬರಾಜಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು, ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸ್ಥಳೀಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ದಾನಿಗಳು, ಕಂಪನಿಗಳು, ಜನಪ್ರತಿನಿಧಿಗಳ ಅನುದಾನದಿಂದ Water RO-Drinking Filterಗಳನ್ನು ಅಳವಡಿಸಿಕೊಳ್ಳುವುದು. ಈಗಾಗಲೇ ಶಾಲೆಯಲ್ಲಿ ಬಳಸುತ್ತಿರುವ ವಾಟರ್ ಫಿಲ್ಟರ್ ಗಳ ಗುಣಮಟ್ಟ ಕಳಪೆಯಾಗಿದ್ದಲ್ಲಿ ಇಲ್ಲವೇ ಕೆಟ್ಟುಹೋಗಿದ್ದಲ್ಲಿ ಕೂಡಲೇ ರಿಪೇರಿ ಮಾಡಿಸುವುದು.

ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿಯೇ ಅಡುಗೆ ಕೋಣೆ ಸ್ವಚ್ಚತಾ ಪರಿಕರಗಳನ್ನು, ಕೈತೊಳೆಯುವ ಸಾಬೂನು, ಪಾತ್ರೆಪರಿಕರಗಳನ್ನು ಸ್ವಚ್ಛಗೊಳಿಸುವ ಸೋಪ್ ಆಯಿಲ್, ನಲ ಸ್ವಚ್ಚಗೊಳಿಸಲು ಪೆನಾಯಿಲ್, ಮುಂತಾದ ಸ್ಕ್ಯಾನಸರ್ ಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಿಸಿ ದಾಸ್ತಾನುಗೊಳಿಸಿ ಬಳಸುವುದು.

ಅಡುಗೆ ಸಿಬ್ಬಂದಿ ತಮ್ಮ ಸೇವಾವಧಿಯನ್ನು 60 ವರ್ಷಗಳಿಗೆ ಪೂರ್ಣ ಗೊಳಿಸಿ ನಿವೃತ್ತಿಹೊಂದಿದ್ದಲ್ಲಿ, ಸದರಿ ಖಾಲಿ ಸ್ಥಾನಕ್ಕೆ ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಗತ್ಯವಿದ್ದಲ್ಲಿ ಹೊಸ ಅಡುಗೆಯವರನ್ನು ನಿಯಮಾನುಸಾರ ನೇಮಕ ಮಾಡಿಕೊಳ್ಳುವ ಕ್ರಮವಹಿಸಿ ಬಿಸಿಯೂಟ ಕೆಲಸಕ್ಕೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+