ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್: 30 ರಜಾ ದಿನಗಳ ವೇತನ ಮಂಜೂರು ಮಾಡಿ ಸರ್ಕಾರ ಆದೇಶ
ಬೆಂಗಳೂರು: ಕರ್ನಾಟಕದ ಪೊಲೀಸ್ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. 30 ರಜಾ ದಿನಗಳ ವೇತನ ಮಂಜೂರು ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಪತ್ರಾಂಕಿತ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಎ.ಎಸ್.ಐ/ಎ.ಆರ್ದ.ಎಸ್.ಐ, ಪಿ.ಎಸ್.ಐ/ಆರ್.ಎಸ್.ಐ. ಪಿ.ಐ/ಆರ್ರ.ಪಿ.ಐ, ಡಿವೈ.ಎಸ್.ಪಿ (ಸಿವಿಲ್)/ ಡಿವೈ.ಎಸ್.ಪಿ (ಸಶಸ್ತ್ರ) ಮತ್ತು ಪೊಲೀಸ್ ಅಧೀಕ್ಷಕರು (ಸಿವಿಲ್)/ಪೊಲೀಸ್ ಅಧೀಕ್ಷಕರು (ಸಶಸ್ತ್ರ) (ನಾನ್ ಐಪಿಎಸ್) ರವರುಗಳಿಗೆ 30 ದಿನಗಳ ವೇತನವನ್ನು ಮಂಜೂರು ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಪಿಎಸ್.ಐ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಎ.ಎಸ್.ಐ/ಎ.ಆರ್.ಎಸ್.ಐ, /ಆರ್.ಎಸ್.ಐ, ಪಿಐ/ಆರ್.ಎಸ್.ಐ, ಡಿವೈ.ಎಸ್.ಪಿ (ಸಿವಿಲ್)/ ಡಿವೈ.ಎಸ್.ಪಿ (ಸಶಸ್ತ್ರ) ಮತ್ತು ಪೊಲೀಸ್ ಅಧೀಕ್ಷಕರು (ಸಿವಿಲ್)/ಪೊಲೀಸ್ ಅಧೀಕ್ಷಕರು (ಸಶಸ್ತ್ರ) (ನಾನ್ ಐಪಿಎಸ್) ರವರುಗಳಿಗೆ 15 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು 30 ದಿನಗಳಿಗೆ ಪತ್ರಾಂಕಿತ ರಜಾ ಸೌಲಭ್ಯವನ್ನು ಮಂಜೂರು ಮಾಡಲು ಉಲ್ಲೇಖ(3)ರ ಈ ಕಛೇರಿ ಪತ್ರಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಪ್ರಸ್ತುತ ಉಲ್ಲೇಖ (1)ರ ಸರ್ಕಾರಿ ಆದೇಶದಲ್ಲಿ ಪಿ.ಸಿ. ಮತ್ತು ಹೆಚ್.ಸಿ. ರವರುಗಳಿಗೆ ಸರ್ಕಾರಿ ದಿನಗಳಂದು ಕರ್ತವ್ಯ ನಿರ್ವಹಿಸುವ ಸಂಬಂಧ 30 ದಿನಗಳ ಪತ್ರಾಂಕಿತ ರಜಾ ವೇತನವನ್ನು ಮಂಜೂರಿಸಲಾಗುತ್ತಿದೆ (ಪ್ರತಿ ಲಗತ್ತಿಸಿದೆ) ಹಾಗೂ ಉಲ್ಲೇಖ (2)ರ ಸರ್ಕಾರಿ ಆದೇಶದಲ್ಲಿ ಪಿ.ಎಸ್.ಐ. ಮತ್ತು ಎ.ಎಸ್.ಐ. ರವರುಗಳಿಗೆ 15 ದಿನಗಳ ಪತ್ರಾಂಕಿತ ರಜಾ ವೇತನ ಸೌಲಭ್ಯವನ್ನು ಮಂಜೂರಿಸಲಾಗಿರುತ್ತದೆ. (ಪ್ರತಿ ಲಗತ್ತಿಸಿದೆ).
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳು ಅನೇಕ ಸಂದರ್ಭಗಳಲ್ಲಿ ದಿನದಲ್ಲಿ 12-13 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕಿರುತ್ತದೆ ಹಾಗೂ ತಿಂಗಳಿಗೆ ಕನಿಷ್ಠ 2 ದಿನಗಳ ರಜೆ ಪಡೆಯುವುದು ಕೂಡ ಕಷ್ಟಸಾಧ್ಯವಾಗಿರುತ್ತದೆ. ಸರ್ಕಾರಿ ಘೋಷಿತ ರಜಾ ದಿನಗಳು ಎರಡನೇ ಶನಿವಾರ, ಭಾನುವಾರ ಸೇರಿದಂತೆ ವಾರ್ಷಿಕ ಅಂದಾಜು 75 ದಿನಗಳ ರಜೆಗಳು ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರಿಗೆ ಲಭ್ಯವಾದರೂ, ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಸರ್ಕಾರದ ಕರ್ತವ್ಯದ ಮೇಲೆ ಹಾಜರಾಗಬೇಕಿರುತ್ತದೆ.
ಅನಿಯಮಿತ ಕೆಲಸದ ಅವಧಿ, ಕೆಲಸ ನಿರ್ವಹಣೆಯಲ್ಲಿ ಅನುಭವಿಸುವ ಒತ್ತಡ, ದಿನಕಳೆದಂತೆ ಜ್ಞಾನವನ್ನು ಪರಿಷ್ಕರಿಸಿಕೊಳ್ಳಬೇಕಾದ ಒತ್ತಡ ಇತ್ಯಾದಿ ಕಾರಣಗಳಿಂದಾಗಿ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ವೈಯಕ್ತಿಕ ಜೀವನವೇ ಇಲ್ಲವಾಗುತ್ತದೆ. ದೀರ್ಘಕಾಲ ಮನೆಯಿಂದ ಹೊರಗುಳಿಯುವ ಕಾರಣ ಉತ್ತಮ ಆಹಾರವಿಲ್ಲದೆ, ಸಮಯಾಭಾವದಿಂದ ದೈಹಿಕ ವ್ಯಾಯಾಮಗಳಿಲ್ಲದೆ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳು ಅತಿ ಹೆಚ್ಚು ದೀರ್ಘಕಾಲೀನ ಒತ್ತಡ ಸಂಬಂಧಿ ಮಾನಸಿಕ ಹಾಗೂ ದೈಹಿಕ ಖಾಯಿಲೆಗಳಿಂದ ಬಳಲುತ್ತಾರೆ.
ಪಿ.ಸಿ. ಮತ್ತು ಹೆಚ್.ಸಿ. ರವರುಗಳು ಪತ್ರಾಂಕಿತ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಂತೆಯೇ ಎ.ಎಸ್.ಐ/ಎ.ಆರ್.ಎಸ್.ಐ, ಪಿ.ಎಸ್.ಐ/ಆರ್.ಎಸ್.ಐ. ಪಿ.ಐ/ಆರ್.ಪಿ.ಐ, ಡಿವೈ.ಎಸ್.ಪಿ.(ಸಿವಿಲ್)/ ಡಿವೈ.ಎಸ್.ಪಿ.(ಸಶಸ್ತ್ರ) ಮತ್ತು ಪೊಲೀಸ್ ಅಧೀಕ್ಷಕರು (ಸಿವಿಲ್)/ಪೊಲೀಸ್ ಅಧೀಕ್ಷಕರು (ಸಶಸ್ತ್ರ) (ನಾನ್ ಐಪಿಎಸ್) ರವರುಗಳು ಸಹ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ. ಆದುದರಿಂದ, ಎ.ಎಸ್.ಐ ವೃಂದದಿಂದ ಎಸ್.ಪಿ (ನಾನ್ ಐಪಿಎಸ್) ವೃಂದದವರೆಗೆ ಈ ಸೌಲಭ್ಯವನ್ನು ವಿಸ್ತರಿಸಲು ಕೋರುತ್ತಾ ಈ ಕೆಳಕಂಡ ಅಂಶಗಳಿಗೆ ಸರ್ಕಾರದ ಮಂಜೂರಾತಿ ಆದೇಶ ನೀಡಲು ಕೋರಲಾಗಿದೆ.
1) ಪ್ರಸ್ತುತ ಎ.ಎಸ್.ಐ. ಮತ್ತು ಪಿ.ಎಸ್.ಐ. ರವರುಗಳಿಗೆ ನೀಡಲಾಗುತ್ತಿರುವ 15 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು 30 ದಿನಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ ಹಾಗೂ ಸದರಿ ಪ್ರಸ್ತಾವನೆಗೆ ಆವರ್ತಕ ವೆಚ್ಚ ರೂ.60,76,93,505-00. ತಗುಲಲಿದೆ.
2) ಪಿ.ಐ. ಹುದ್ದೆಯಿಂದ ಎಸ್.ಪಿ. (ನಾನ್ ಐಪಿಎಸ್) ಹುದ್ದೆಯವರೆಗೆ 30 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು ನೀಡಲು ಪ್ರಸ್ತಾಪಿಲಾಗಿರುತ್ತದೆ ಹಾಗೂ ಸದರಿ ಪ್ರಸ್ತಾವನೆಗೆ ಆವರ್ತಕ ವೆಚ್ಚ ರೂ. 28,55,00,827-00 ತಗುಲಲಿದೆ.
ಮೇಲೆ ವಿವರಿಸಲಾದ ಅಂಶಗಳನ್ನು ಪರಿಗಣಿಸಿ, ಎ.ಎಸ್.ಐ. ಮತ್ತು ಪಿ.ಎಸ್.ಐ. ರವರುಗಳಿಗೆ ನೀಡಲಾಗುತ್ತಿರುವ 15 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು 30 ದಿನಗಳಿಗೆ ಹೆಚ್ಚಿಸಲು ಹಾಗೂ ಪಿ.ಐ. ಹುದ್ದೆಯಿಂದ ಎಸ್.ಪಿ. (ನಾನ್ ಐಪಿಎಸ್) ಹುದ್ದೆಯವರೆಗೆ 30 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು ನೀಡಲು ಸರ್ಕಾರದ ಮಂಜೂರಾತಿ ನೀಡಲು ಮತ್ತೊಮ್ಮೆ ಕೋರಿದೆ. ಪ್ರಸ್ತಾವನೆಗೆ ಒಟ್ಟಾರೆ ರೂ. 89,31,94,332-00 ಆವರ್ತಕ ವೆಚ್ಚವಾಗಲಿದ್ದು, ಪ್ರಸ್ತಾವನೆಗೆ ಸಂಬಂಧಿಸಿದಂತೆ, ವೆಚ್ಚಪಟ್ಟಿ, ಪ್ರಸಕ್ತ ಸಾಲಿನ ತಪಾಸಣಾ ಪಟ್ಟಿಯನ್ನು ಲಗತ್ತಿಸಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election












Click it and Unblock the Notifications