ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯವ್ಯಾಪ್ತಿ; ಹೊಸ ಆದೇಶ

ಬೆಂಗಳೂರು, ಆಗಸ್ಟ್ 03; ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯವ್ಯಾಪ್ತಿಗಳನ್ನು ಗ್ರಾಮ ಪಂಚಾಯತಿವಾರು ನಿರ್ಧಿಷ್ಟಪಡಿಸುವ ಬಗ್ಗೆ ಆದೇಶವೊಂದನ್ನು ಹೊರಡಿಸಿದೆ. ಪ್ರಾದೇಶಿಕ ಆಯುಕ್ತರಿಗೆ ಈ ಕುರಿತು ಸೂಚನೆಗಳನ್ನು ನೀಡಲಾಗಿದೆ.

ಈ ಕುರಿತು ಪ್ರದೀಪ್ ಕುಮಾರ್ ಬಿ. ಎಸ್. ಸರ್ಕಾರದ ಅಧೀನ ರ್ಯದರ್ಶಿ, ಕಂದಾಯ ಇಲಾಖೆ (ಸೇವೆಗಳು-2) ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು. ಪ್ರಾದೇಶಿಕ ಆಯುಕ್ತರು, ಬೆಂಗಳೂರು/ ಮೈಸೂರು/ ಬೆಳಗಾವಿ/ ಕಲಬುರಗಿ ಇವರಿಗೆ ಪತ್ರವನ್ನು ಬರೆದಿದ್ದಾರೆ.

karnataka-government (11)

ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯವ್ಯಾಪ್ತಿಗಳನ್ನು ಗ್ರಾಮ ಪಂಚಾಯತಿವಾರು ನಿರ್ಧಿಷ್ಟಪಡಿಸುವ ಬಗ್ಗೆ ಎಂಬ ವಿಷಯವನ್ನು ಇದು ಒಳಗೊಂಡಿದೆ. ಶಾಸಕರು, ಹಾನಗಲ್ ಮತ ಕ್ಷೇತ್ರ ಇವರ ದಿನಾಂಕ 6/6/2023ರ ಪತ್ರವನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ.

ಆದೇಶದಲ್ಲಿ ಏನಿದೆ?; ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ನಿರ್ಧಿಷ್ಟ ಕಛೇರಿಗಳಿಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಲಭ್ಯವಾಗದೇ ಸಾರ್ವಜನಿಕರು ಪರದಾಡುವಂತಾಗಿದೆ. ಈ ಕಾರಣಗಳಿಂದ ಆಡಳಿತ ಕಾರ್ಯಗಳನ್ನು ಚುರುಕುಗೊಳಿಸಿ, ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಛೇರಿ ಸ್ಥಳವನ್ನು ವ್ಯವಸ್ಥೆ ಮಾಡಿಕೊಡುವ ದೃಷ್ಟಿಯಿಂದ ಗ್ರಾಮ ಪಂಚಾಯಿತಿವಾರು ಗ್ರಾಮ ಅಡಳಿತ ಅಧಿಕಾರಿಗಳ ಕಾರ್ಯವ್ಯಾಪ್ತಿಯನ್ನು ನಿರ್ದಿಷ್ಟಗೊಳಿಸಿ ಎಂದು ತಿಳಿಸಲಾಗಿದೆ.

ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರ್ಕಾರಿ ಕಛೇರಿ ವ್ಯವಸ್ಥೆ ಮಾಡಿಕೊಡುವ ಪ್ರಸ್ತಾವನೆ ಕುರಿತು ಕೂಲಂಕಷವಾಗಿ ಪರಿಶೀಲಿಸಿ, ಜರೂರಾಗಿ ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸುವಂತೆ ಕೋರಲು ನಿರ್ದೇಶಿತನಾಗಿದ್ದೇನೆ ಎಂದು ಹೇಳಿದ್ದಾರೆ.

ಶಾಸಕರ ಪತ್ರದಲ್ಲಿ ಏನಿತ್ತು?; ಶಾಸಕ ಶ್ರೀನಿವಾಸ ವಿ ಮಾನೆ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡರಿಗೆ ಪತ್ರವನ್ನು ಬರೆದಿದ್ದರು. ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯವ್ಯಾಪ್ತಿಯನ್ನು ಗ್ರಾಮ ಪಂಚಾಯತಿವಾರು ನಿರ್ಧಿಷ್ಟಪಡಿಸುವ ಬಗ್ಗೆ ಎಂದು ಸಚಿವರ ಗಮನ ಸೆಳೆದಿದ್ದರು.

ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ 60 ವೃತ್ತಗಳಿವೆ. ಪ್ರಸ್ತುತ ಮಂಜೂರಾದ 60 ಗ್ರಾಮ ಆಡಳಿತ ಅಧಿಕಾರಿ (ಗ್ರಾಮ ಲೆಕ್ಕಾಧಿಕಾರಿ)ಗಳ ಹುದ್ದೆಗಳ ಪೈಕಿ ಒಟ್ಟು 42 ಜನ ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ 18 ವೃತ್ತಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಖಾಲಿ ಇರುತ್ತದೆ ಎಂದು ಶಾಸಕರು ವಿವರಣೆ ನೀಡಿದ್ದಾರೆ.

ಖಾಲಿ ಇರುವ ವೃತ್ತಗಳಿಗೆ ಪ್ರಸ್ತುತ ಕಾರ್ಯನಿರತ ಸಿಬ್ಬಂದಿಗಳಲ್ಲಿಯೇ ಹೆಚ್ಚುವರಿ ಪ್ರಭಾರಿಗಳನ್ನು ಹಂಚಿಕೆ ಮಾಡಲಾಗಿರುತ್ತದೆ ಹಾಗೂ ತಾಲ್ಲೂನಾದ್ಯಂತ 60 ಕಂದಾಯ ವೃತ್ತಗಳಲ್ಲಿ 3 ವೃತ್ತಗಳಿಗೆ ಮಾತ್ರ ಸರಕಾರಿ ಕಛೇರಿಗಳಿದ್ದು, ಇನ್ನುಳಿದ ವೃತ್ತಗಳಲ್ಲಿ ಪಂಚಾಯತಿ ಕಟ್ಟಡ/ ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇರುತ್ತದೆ.

ಇದರಿಂದ ನಿರ್ದಿಷ್ಟ ಕಛೇರಿಗಳು ಇಲ್ಲದೇ ಬಹುತೇಕ ಗ್ರಾಮ ಆಡಳಿತ ಅಧಿಕಾರಿಗಳು ಸಾರ್ವಜನಿಕರಿಗೆ ಸಮಯಕ್ಕೆ ಲಭ್ಯವಾಗದೇ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ಕಾರಣಗಳಿಂದ ಆಡಳಿತ ಕಾರ್ಯಗಳನ್ನು ಚುರುಕಗೊಳಿಸಿ, ಇನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ, ಆಡಳಿತಾತ್ಮಕ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಛೇರಿ ಸ್ಥಳವನ್ನು ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.

ಪ್ರತಿ ಗ್ರಾಮ ಪಂಚಾಯತಿಗೂ ಒಬ್ಬ ಗ್ರಾಮ ಆಡಳಿತ ಅಧಿಕಾರಿಗಳನ್ನು ನೇಮಿಸಿ, ಗ್ರಾಮ ಪಂಚಾಯತಿವಾರು ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯವ್ಯಾಪ್ತಿಯನ್ನು ನಿರ್ಧಿಷ್ಟಗೊಳಿಸಿ, ಆಯಾ ಗ್ರಾಮ ಪಂಚಾಯತಿಗಳಲ್ಲಿ ಇವರಿಗೆ ಸರಕಾರಿ ಕಛೇರಿ ವ್ಯವಸ್ಥೆ ಮಾಡಿಕೊಡಲು ಸೂಕ್ತ ಕ್ರಮಕೈಗೊಳ್ಳಲು ಈ ಮೂಲಕ ಕೋರುತ್ತೇನೆ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+