ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ration card; ಕರ್ನಾಟಕ ಸರ್ಕಾರದಿಂದ ಮಹತ್ವದ ಸೂಚನೆ

|
Google Oneindia Kannada News

ಬೆಂಗಳೂರು, ನವೆಂಬರ್ 30; ಕರ್ನಾಟಕ ಸರ್ಕಾರ ಪಡಿತರ ಚೀಟಿಯ ವಿತರಣೆ ಬಗ್ಗೆ ಹೊಸ ಆದೇಶವೊಂದನ್ನು ಹೊರಡಿಸಿದೆ. ಇದರಿಂದಾಗಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಜನರಿಗೆ ತುಸು ನೆಮ್ಮದಿ ಸಿಕ್ಕಿದೆ.

ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರು ಬುಧವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಬಗ್ಗೆ ಆದೇಶದಲ್ಲಿ ಸೂಚನೆಗಳನ್ನು ನೀಡಲಾಗಿದೆ.

10 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ಚಿಂತನೆ? ಇಲ್ಲಿದೆ ಮಾಹಿತಿ 10 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ಚಿಂತನೆ? ಇಲ್ಲಿದೆ ಮಾಹಿತಿ

ಆದೇಶದಲ್ಲಿ ರಾಜ್ಯದಲ್ಲಿ ಹೊಸದಾಗಿ ಆದ್ಯತಾ ಪಡಿತರ ಚೀಟಿ ಕೋರಿ 25/08/2022ರವರೆಗೆ 2,73,662 ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 1,55,927 ಅರ್ಹ ಕುಟುಂಬಗಳಿಗೆ ಹೊಸ ಆದ್ಯತಾ ಪಡಿತರ ಚೀಟಿ ನೀಡುವ ಬಗ್ಗೆ ಜಿಲ್ಲೆಗಳಿಂದ ವರದಿ ಪಡೆದುಕೊಂಡು ಉಲ್ಲೇಖ (1)ರ ಪತ್ರಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.

ಈ ತಿಂಗಳು ರೇಷನ್ ಸಿಗಲಿಲ್ವಾ, ಸರ್ಕಾರವೇ ಕಾಸು ಕೊಡುತ್ತೆ ತಗೋಳಿ!ಈ ತಿಂಗಳು ರೇಷನ್ ಸಿಗಲಿಲ್ವಾ, ಸರ್ಕಾರವೇ ಕಾಸು ಕೊಡುತ್ತೆ ತಗೋಳಿ!

ಈ ಹಿನ್ನಲೆಯಲ್ಲಿ ಸರ್ಕಾರವು ಉಲ್ಲೇಖ (3)ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರನ್ವಯ 25/08/2022ರವರೆಗೆ ಹೊಸದಾಗಿ ಆದ್ಯತಾ ಪಡಿತರ ಚೀಟಿಯನ್ನು ಕೋರಿ 2,73,662 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಆದ್ಯತಾ ಪಡಿತರ ಚೀಟಿಯನ್ನು ಹೊಂದಲು ಅರ್ಹರಿರುವ ಒಟ್ಟು 1,55,927 ಅರ್ಜಿದಾರಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು ವಿತರಿಸಲು ಆದೇಶ ನೀಡಿದೆ.

ಎತ್ತಿನಗಾಡಿ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ರೇಷನ್ ವಿತರಿಸಿದ ಶಿಕ್ಷಕ ಎತ್ತಿನಗಾಡಿ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ರೇಷನ್ ವಿತರಿಸಿದ ಶಿಕ್ಷಕ

ಹೊಸ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಅರ್ಹ ಅರ್ಜಿಗಳನ್ನು ವಿಲೇವಾರಿ ಮಾಡುವಾಗ ಕೆಳಕಂಡ ಷರತ್ತು ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ನಿರ್ದೇಶನಗಳನ್ನು ನೀಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿತರಿಸಬಹುದಾದ ಹೊಸ ಆದ್ಯತಾ ಪಡಿತರ ಚೀಟಿಗಳ ಸಂಖ್ಯೆಗಳ ವಿವರವನ್ನು ಸಂಖ್ಯೆಗನುಣವಾಗಿ ವಿತರಿಸಬೇಕು ಎಂದು ತಿಳಿಸಲಾಗಿದೆ.

ವಾರ್ಷಿಕ ಹಿರಿತನದ ಮೇಲೆ ಅರ್ಜಿ ವಿಲೇವಾರಿ

ವಾರ್ಷಿಕ ಹಿರಿತನದ ಮೇಲೆ ಅರ್ಜಿ ವಿಲೇವಾರಿ

* ರಾಜ್ಯದಲ್ಲಿ ಹೊಸ ಆದ್ಯತಾ ಪಡಿತರ ಚೀಟಿ ಕೋರಿ 2017-18, 2018-19, 2019-20, 2020-21 ಮತ್ತು 2021-22 ನೇ ಸಾಲುಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದು ಈ ಪೈಕಿ ವಾರ್ಷಿಕ ಹಿರಿತನದ ಆಧಾರದ ಮೇಲೆ ಅರ್ಜಿಗಳನ್ನು ವಿಲೇವಾರಿ ಮಾಡತಕ್ಕದ್ದು.

* 2017-18ನೇ ಸಾಲಿನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮೊದಲು ವಿಲೇವಾರಿ ಮಾಡಿದ ನಂತರವೇ ಅದೇ ಕ್ರಮದಲ್ಲಿ ಇತರೇ ವರ್ಷಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹಿರಿತನದ ಆಧಾರದಲ್ಲಿ ವಿಲೇವಾರಿ ಮಾಡತಕ್ಕದ್ದು.

* ಪ್ರತಿಯೊಂದು ಅರ್ಜಿಯನ್ನು ಸರ್ಕಾರವು 2017ರಲ್ಲಿ ಹೊರಡಿಸಿರುವ ಉಲ್ಲೇಖ (02) ರಲ್ಲಿರುವ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ಹೊರಗಿಡುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿ ಅರ್ಹರಿಗೆ ಮಾತ್ರ ಆದ್ಯತಾ ಪಡಿತರ ಚೀಟಿ ನೀಡಬೇಕು.

ಆದ್ಯತೆಯ ಮೇಲೆ ಅರ್ಹ ಕುಟುಂಬದ ಆಯ್ಕೆ

ಆದ್ಯತೆಯ ಮೇಲೆ ಅರ್ಹ ಕುಟುಂಬದ ಆಯ್ಕೆ

* ಜಿಲ್ಲೆಗಳಲ್ಲಿ ಆಹಾರ ನಿರೀಕ್ಷಕರು ವಿತರಿಸುವ ಪ್ರತಿಯೊಂದು ಹೊಸ ಆದ್ಯತಾ ಪಡಿತರ ಚೀಟಿಗಳ ಅರ್ಹತೆ ಮತ್ತು ಸಿಂಧುತ್ವದ ಬಗ್ಗೆ ಜಿಲ್ಲೆಯ ಜಂಟಿ/ ಉಪ ನಿರ್ದೇಶಕರು ಸ್ವತಃ ಪರಿಶೀಲನೆ ಮಾಡಬೇಕು.ಯಾವುದೇ ಅನರ್ಹರಿಗೆ ಆದ್ಯತಾ ಪಡಿತರ ಚೀಟಿಗಳು ವಿತರಣೆ ಆಗದಂತೆ ಕ್ರಮ ಕೈಗೊಳ್ಳಬೇಕು.

* ಪ್ರತಿ ಜಿಲ್ಲೆಯಲ್ಲಿ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸುವಾಗ ಅರ್ಹ ಕುಟುಂಬಗಳನ್ನು ಕೆಳಕಂಡ ಆದ್ಯತೆಗಳಂತೆ ಆಯ್ಕೆ ಮಾಡಿ ಹೊಸ ಆದ್ಯತಾ ಪಡಿತರ ಚೀಟಿ ನೀಡಬೇಕು.

* ಪ್ರಥಮ ಆದ್ಯತೆಯಾಗಿ ತೀವು ಆಹಾರ ಅಭದ್ರತೆಗೆ ಒಳಗಾಗಿರುವ ಕುಟುಂಬಗಳು ಮತ್ತು ಇದುವರೆಗೆ ಯಾವುದೇ ಪಡಿತರ ಚೀಟಿ ಹೊಂದಿರದ ಕುಟುಂಬಗಳನ್ನು ಪರಿಗಣಿಸಬೇಕು. ದ್ವಿತೀಯ ಆದ್ಯತೆಯಾಗಿ ಮೂಲ ಬುಡಕಟ್ಟುಗಳು/ ಅಲೆಮಾರಿ ಕುಟುಂಬಗಳು/ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು/ ಕಾಡಿನಲ್ಲಿ ವಾಸಿಸುವ ಕುಟುಂಬ ಪರಿಗಣಿಸಬೇಕು.

ಸಕ್ಷಮ ಪ್ರಾಧಿಕಾರದ ದೃಢೀಕರಣ ಪತ್ರ

ಸಕ್ಷಮ ಪ್ರಾಧಿಕಾರದ ದೃಢೀಕರಣ ಪತ್ರ

* ಈಗಾಗಲೇ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿಗಳು ಹೊಂದಿದ್ದು ಪ್ರತ್ಯೇಕವಾಗಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಕುಟುಂಬಗಳ ಮನವಿಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸಬೇಕು. ಅಂಥ ಕುಟುಂಬಗಳು ನಿಜವಾಗಿ ಪ್ರತ್ಯೇಕ ಕುಟುಂಬವಾಗಿ ಸ್ಥಾಪಿತವಾಗಿರುವ ಬಗ್ಗೆ ರುಜುವಾತು ಅಥವಾ ಸಕ್ಷಮ ಪ್ರಾಧಿಕಾರದ ದೃಢೀಕರಣ ಪತ್ರ ಪಡೆದು ಪರಿಗಣಿಸಬೇಕು.

* ಈಗಾಗಲೇ ಆದ್ಯತೇತರ ಪಡಿತರ ಚೀಟಿ ಹೊಂದಿದ್ದು ಆದ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಕುಟುಂಬಗಳನ್ನು ಆದ್ಯತಾ ಕುಟುಂಬಗಳಿಗೆ ಪರಿಗಣಿಸಬಾರದು. ಪರಂತು, ಅಂಥ ಕುಟುಂಬಗಳು ಆಹಾರ ಅಭದ್ರತೆಗೆ ಒಳಗಾಗಿ ಸರ್ಕಾರದ ಮಾನದಂಡಗಳ ಪುಕಾರ ಆದ್ಯತಾ ಪಡಿತರ ಚೀಟಿಗೆ ಅರ್ಹವಾಗಿದ್ದರೆ ಮಾತ್ರ ಪರಿಗಣಿಸಬಹುದು.

* ಹೊಸ ಆದ್ಯತಾ ಪಡಿತರ ಚೀಟಿಗಳಿಗೆ ಅನರ್ಹರೆಂದು ಕಂಡುಬಂದಿರುವ ಅರ್ಜಿಗಳನ್ನು ಈಗಾಗಲೇ ಜಿಲ್ಲೆಗಳು ವರದಿ ಮಾಡಿರುವಂತೆ ಆದ್ಯತೇತರ ಪಡಿತರ ಚೀಟಿಗೆ ವರ್ಗಾಯಿಸಬಹುದು ಅಥವಾ ಅರ್ಜಿಯನ್ನು ರದ್ದುಪಡಿಸಬಹುದು.

ತಂತ್ರಾಂಶದಲ್ಲಿ ಪ್ರಕಟವಾಗಲಿದೆ

ತಂತ್ರಾಂಶದಲ್ಲಿ ಪ್ರಕಟವಾಗಲಿದೆ

* ಪತಿ ಅಧಿಕಾರಿ ವಿತರಿಸುವ ಹೊಸ ಆದ್ಯತಾ ಮತ್ತು ಆದ್ಯತೇತರ ಪಡಿತರ ಚೀಟಿಗಳ ಬಗ್ಗೆ ಇಲಾಖೆಯ ತಂತ್ರಾಂಶದಲ್ಲಿ/ ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಟಿಸಲಾಗುವುದು.

* ಪತಿ ಜಿಲ್ಲೆಗಳಲ್ಲಿ ಹೊಸ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಮತ್ತು ಪರಿಶೀಲನಾ ವರದಿ ವಿವರಗಳನ್ನು ಪ್ರತಿ ಜಿಲ್ಲೆಯಲ್ಲಿ ವಿತರಿಸಬಹುದಾದ ಹೊಸ ಆದ್ಯತಾ ಪಡಿತರ ಚೀಟಿಗಳ ಸಂಖ್ಯೆಯನ್ನು ಈ ಪತ್ರದ ಅನುಬಂಧ-01 ರಲ್ಲಿ ನೀಡಿದೆ. ಯಾವುದೇ ಜಿಲ್ಲೆಗಳು ತಮಗೆ ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿಗೆ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸಬಾರದೆಂದು ಎಚ್ಚರಿಕೆ ನೀಡಿದೆ.

English summary
Karnataka government order on issuing new ration card. Around 1,55,927 applications pending.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X