ಅಬಕಾರಿ ಆದಾಯ ಏರಿಕೆ: ಇನ್ನೂ ಹೆಚ್ಚಿಸಲು ಸರ್ಕಾರದ ಟಾರ್ಗೆಟ್
ಬೆಂಗಳೂರು, ಏಪ್ರಿಲ್ 05: ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ. 2021-22ರಲ್ಲಿ ಅಬಕಾರಿ ಇಲಾಖೆಗೆ ಸರ್ಕಾರವು 24,580 ಕೋಟಿ ರೂಪಾಯಿ ರಾಜಸ್ವ ಗುರಿಯನ್ನು ನೀಡಿತ್ತು. ಆದರೆ ಸರ್ಕಾರ 26,276 ಕೋಟಿ ರೂಪಾಯಿ ಆದಾಯವನ್ನು ಸಂಗ್ರಹ ಮಾಡಿದೆ. ಆದರೆ ಮುಂದಿನ ವರ್ಷದಲ್ಲಿ ಆದಾಯ ಗುರಿಯನ್ನು ಸರ್ಕಾರವು ಇನ್ನಷ್ಟು ಹೆಚ್ಚು ಮಾಡಿದೆ.
ರಾಜ್ಯ ಸರ್ಕಾರವು ಅಬಕಾರಿ ಇಲಾಖೆಗೆ 2022-23ನೇ ಸಾಲಿನಲ್ಲಿ 29 ಸಾವಿರ ಕೋಟಿ ರೂಪಾಯಿ ಆದಾಯವನ್ನು ಸಂಗ್ರಹ ಮಾಡುವ ಗುರಿಯನ್ನು ನೀಡಿದೆ. ನಾವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ಬಾರಿ ಆದಾಯ ಸಂಗ್ರಹ ಗುರಿಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಆದರೆ ಸರ್ಕಾರ ಇದಕ್ಕೂ ಮೀರಿದ ಗುರಿಯನ್ನು ಮುಂದಿನ ವರ್ಷಕ್ಕೆ ನೀಡಿದೆ.
ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ 4,420 ಕೋಟಿ ರೂಪಾಯಿ ರೂಪಾಯಿ ಗುರಿಯನ್ನು ಹೆಚ್ಚಳ ಮಾಡಲಾಗಿದೆ. ಪ್ರಸಕ್ತ ವರ್ಷ ಬಜೆಟ್ ನಲ್ಲಿಯೂ ಮದ್ಯ ದರವನ್ನು ಹೆಚ್ಚಳ ಮಾಡಿಸಿಲ್ಲ. ಹಾಗಿದ್ದರೂ ದರ ಏರಿಕೆ ಮಾಡುವ ಬದಲು ಜನರಿಗೆ ಹೆಚ್ಚು ಮದ್ಯ ಕುಡಿಸಿ ಹೆಚ್ಚು ಆದಾಯ ಗಳಿಸಿ ಎಂಬ ತತ್ವವನ್ನು ಸರ್ಕಾರ ಪಾಲನೆ ಮಾಡುತ್ತಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

2022-21 ಕ್ಕೆ ಹೋಲಿಕೆ ಮಾಡಿದಾಗ ಈ ಬಾರಿ ಮದ್ಯದ ಆದಾಯದಲ್ಲಿ ಶೇಕಡ 12.62 ಹೆಚ್ಚಳವಾಗಿದೆ. 2022-23ನೇ ಸಾಲಿನಲ್ಲಿ ಇಲಾಖೆಗೆ ಸರ್ಕಾರ 29 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಗುರಿಯನ್ನು ನೀಡಿದೆ.

ಮದ್ಯ ಮಾರಾಟದಿಂದ ಎಷ್ಟು ಆದಾಯ ಸಂಗ್ರಹ?
2021ರ ಏಪ್ರಿಲ್‌ನಲ್ಲಿ 22ರ ಮಾರ್ಚ್ ವರೆಗೆ 660 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 268 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. 2021ರ ಏಪ್ರಿಲ್‌ನಲ್ಲಿ 2202 ಕೋಟಿ ರೂ, ಮೇನಲ್ಲಿ 1474 ಕೋಟಿ ರೂ, ಜೂನ್‌ನಲ್ಲಿ 2231 ಕೋಟಿ ರೂ, ಜುಲೈನಲ್ಲಿ 2223 ಕೋಟಿ ರೂ, ಆಗಸ್ಟ್‌ನಲ್ಲಿ 2094 ಕೋಟಿ ರೂ, ಸೆಪ್ಟೆಂಬರ್‌ನಲ್ಲಿ 2172 ಕೋಟಿ ರೂ, ಅಕ್ಟೋಬರ್‌ನಲ್ಲಿ 2219 ಕೋಟಿ ರೂ, ನವೆಂಬರ್‌ನಲ್ಲಿ 2221 ಕೋಟಿ ರೂ, ಡಿಸೆಂಬರ್‌ನಲ್ಲಿ 2598 ಕೋಟಿ ರೂ, ಜನವರಿಯಲ್ಲಿ 2116 ಕೋಟಿ ರೂ, ಫೆಬ್ರವರಿಯಲ್ಲಿ 2175 ಕೋಟಿ ರೂ ಹಾಗೂ ಮಾರ್ಚ್ ನಲ್ಲಿ 2552 ಕೋಟಿ ರೂ ಆದಾಯ ಮದ್ಯ ವಹಿವಾಟುಗಳಿಂದ ಬಂದಿದೆ.












Click it and Unblock the Notifications