Milk Price: ಹಾಲಿನ ದರ ಉಕ್ಕಿಸುವ ಸರ್ಕಾರಕ್ಕೆ ಪ್ರೋತ್ಸಾಹ ಧನ ಬಿಡುಗಡೆಗೆ ಮನಸ್ಸಿಲ್ಲ
ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷಕ್ಕೆ ಕರ್ನಾಟಕದಲ್ಲಿ ಹಾಲಿನ ದರ ಏರಿಕೆಯ ಪ್ರಸ್ತಾವನೆ ಸರ್ಕಾರದ ಮುಂದಿದೆ. ಇತ್ತ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಡ ಸರ್ಕಾರ, ನೂರಾರು ಕೋಟಿ ರೂಪಾಯಿ ಹಣ ನೀಡದೇ ಬಾಕಿ ಉಳಿಸಿಕೊಂಡಿದೆ. ಹಾಲಿ ದರ ಹೆಚ್ಚಳಕ್ಕೆ ಮುಂದಾದ ಸರ್ಕಾರವು ಬಾಕಿ ಬಿಡುಗಡೆ ವಿಚಾರದಲ್ಲಿ ರೈತರ ಬಗೆಗೆ ಅಸಡ್ಡೆ ತೋರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು.
ರಾಜ್ಯದ ರೈತರ ಹಾಲಿ ದರ ಪ್ರೋತ್ಸಾಹ ಧನ ಬಗ್ಗೆ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಇದೇ ವರ್ಷ ಕಳೆದ ಜೂನ್ ತಿಂಗಳಿಂದಲೂ ನಾಡಿನ ರೈತರ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡದೇ ಬಾಕಿ ಉಳಿಸಿಕೊಂಡಿದೆ. ಬರೋಬ್ಬರಿ ₹622.54 ಕೋಟಿ ಬಾಕಿ ಹಣ ರೈತರಿಗೆ ನೀಡ ರೈತ ವಿರೋಧಿ ಸರ್ಕಾರ, ಹೈನುಗಾರರ ಈ ಸರ್ಕಾರ ಅಸಡ್ಡೆತ ತೋರಿದ್ದನ್ನು ಇದೆಲ್ಲವು ಸಾಕ್ಷೀಕರಿಸುತ್ತಿದೆ ಎಂದರು.

ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗಿ ಜನ ಸಾಮಾನ್ಯರ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಸದಾ ಸಜ್ಜಾಗಿರುವ ಸರ್ಕಾರ ಅನ್ನದಾತರ ಬಾಕಿ ಪಾವತಿಗೆ ಮನಸ್ಸು ಮಾಡುತ್ತಿಲ್ಲ. ಇತ್ತ ಬಡವರಿಗೂ ಉಪಕಾರಿಯಾಗಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕನ್ನೂ ಹಸನಾಗಿಸುತ್ತಿಲ್ಲ ಎಂದು ಅವರು ವಿವರಿಸಿದರು.
ಅಭಿವೃದ್ಧಿ ಶೂನ್ಯ ಆಡಳಿತದ ಮೂಲಕ ರೈತರ ಶ್ರೇಯೋಭಿವೃದ್ಧಿಯೆಡೆಗೆ ಒಂದೇ ಒಂದು ಹೆಜ್ಜೆ ಇಡದ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದೆ. ಹಾಲು ಉತ್ಪಾದನೆಯನ್ನೇ ಉಪಕಸುಬು ಮಾಡಿಕೊಂಡು ಜೀನವ ಸಾಗಿಸುತ್ತಿರುವ ರಾಜ್ಯದ ಲಕ್ಷಾಂತರ ರೈತರ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹೊಸ ವರ್ಷಕ್ಕೆ 5ರೂ.ಬೆಲೆ ಏರಿಕೆ ಸಾಧ್ಯತೆ
ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಂಡಳಿಯು (ಕೆಎಂಎಫ್) ಪ್ರತಿ ಲೀಟರ್ ಹಾಲಿ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಇದಕ್ಕೆ ಅನುಮೋದನೆ ನೀಡಿದರೆ ಹೊಸವರ್ಷಕ್ಕೆ ಗ್ರಾಹಕರಿಗೆ ಬೆಲೆ ಏರಿಕೆ ಬರೆ ಬೀಳಲಿದೆ.

ಹಾಲಿ ಪರಿಷ್ಕರಣೆಯಿಂದ ಜನರಿಗೆ ಮತ್ತೆ ಆರ್ಥಿಕ ಹೊರೆಯಾಗಲಿದೆ. ಈ ಸಂಬಂಧ ಸರ್ಕಾರ ಇನ್ನೂ ಯಾವ ನಿರ್ಧಾರ ಪ್ರಕಟಿಸಿಲ್ಲ. ಈ ಹಿಂದೆಯು ಹಾಲಿನ ಬೆಲೆ ಪರಿಷ್ಕರಣೆ ಮಾಡಲಾಗಿತ್ತು. ಆಗ 50 ಎಂಎಲ್ ಹೆಚ್ಚುವರಿ ಹಾಲು ಒದಗಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಸಬೂಬು ನೀಡಿತ್ತು. ಆಗಲೂ ಸಹ ಸಾರ್ವಜನಿಕರು ದರ ಏರಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಈ ಮಧ್ಯೆ ಹೈನುಗಾರರಿಗೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನವು ಸಿಗದೇ ಅವರ ಜೀನವ ಸಂಕಷ್ಟದಲ್ಲಿ ಕಳೆಯುವಂತಾಗಿದೆ. ಸರ್ಕಾರ ನಡೆ ಟೀಕಿಸಿರುವ ವಿಜಯೇಂದ್ರ ಅವರು, ಸರ್ಕಾರಕ್ಕೆ ಹಾಲಿನ ದರ ಪರಿಷ್ಕರಣೆ ಮಾಡಲು ಮನಸ್ಸಿದೆ. ಆದರೆ ಬಾಕಿ ಇರುವ ಪ್ರೋತ್ಸಾಹ ಧನ ನೀಡಲು ಮನಸ್ಸಿಲ್ಲ ಎಂದು ಕಿಡಿ ಕಾರಿದ್ದಾರೆ.












Click it and Unblock the Notifications