ಮುಜರಾಯಿ ದೇವಾಲಯಗಳ ಆಡಳಿತ ಮಂಡಳಿ ರದ್ದು

ಬೆಂಗಳೂರು, ಸೆಪ್ಟೆಂಬರ್ 26:ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಸ್ಥಾನಗಳ ವ್ಯವಸ್ಥಾಪನಾ ಮಂಡಳಿ ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ವ್ಯವಸ್ಥಾಪನಾ ಮಂಡಳಿ ರದ್ದುಪಡಿಸಿ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಆದೇಶಿಸಿದೆ.

Government Has Cancelled Board Management Of All Muzarai Temples

ಕೂಡಲೇ ಸಂಬಂಧಪಟ್ಟ ಜಿಲ್ಲೆಗಳ ಡಿಸಿಗಳು ದೇವಸ್ಥಾನಗಳ ಆಡಳಿ ವಹಿಸಿಕೊಳ್ಳುವಂತೆ ತಿಳಿಸಲಾಗಿದೆ.ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 36000ಕ್ಕೂ ಅಧಿಕ ದೇವಾಲಯಗಳಿವೆ.

ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ 10ಲಕ್ಷ ಕ್ಕಿಂತ ಅಧಿಕ ವಾರ್ಷಿಕ ಆದಾಯ ಬರುವ ದೇವಾಲಯಗಳು ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ತಮ್ಮ ಆದಾಯದಲ್ಲಿ ಶೇ. 10 ನೀಡುತ್ತದೆ.

ಈ ಆದಾಯದಲ್ಲಿ 5ರಿಂದ 10ಲಕ್ಷ ದ ಒಳಗೆ ಇರುವ ದೇವಾಲಯಗಳು ತಮ್ಮ ಆದಾಯದ ಶೇ. 5 ಆದಾಯವನ್ನು ಮುಜರಾಯಿ ಇಲಾಖೆಗೆ ನೀಡುತ್ತದೆ.ಹೀಗೆ ಮುಜರಾಯಿ ಇಲಾಖೆಗೆ ಬಂದ ಆದಾಯವು ಒಂದು ನಿಧಿಯಾಗಿ ಕ್ರೋಡೀಕೃತವಾಗುತ್ತದೆ.

ಎ ವರ್ಗದ ಮತ್ತು ಬಿ ವರ್ಗದ ದೇವಾಲಯಗಳು ಎರಡೆರಡು ದೇವಾಲಯಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಮುಜರಾಯಿ ಕಾಯಿದೆ ಉಲ್ಲೇಖಿಸಿದೆ. ಬಿಎಸ್ ಯಡಿಯೂರಪ್ಪ ಸರ್ಕಾರವು ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ಅವಧಿಯಲ್ಲಿ ಮಾಡಿದ್ದ ಒಂದೊಂದೇ ನಿಯಮಗಳನ್ನು ಕೈಬಿಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+