BPL ಪಡಿತರ ಯೋಜನೆ ದುರ್ಬಳಕೆ ತಡೆಗೆ 'ಹೊಸ ಕಾರ್ಡ್'ಗೆ ನಿರ್ಬಂಧ
ಬೆಂಗಳೂರು, ಅಕ್ಟೋಬರ್ 05: ಒಂದೇ ಕುಟುಂಬದವರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿಭಜಿಸಿ ಹೊಸ ಕಾರ್ಡ್ ನೀಡಿದರೆ ದುರ್ಬಳಕೆ ಆಗುವ ಜೊತೆಗೆ ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟವಾಗಲಿದೆ. ಈ ಸಂಬಂಧ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಕಾರ್ಡ್ ವಿಭಜಿಸದಂತೆ ಸೂಚನೆ ನೀಡಿದೆ.
ಸರ್ಕಾರ ಸದ್ಯ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನಗಳಗೆ ಮುಂದಿನ ದಿನಗಳಲ್ಲಿ ಫಲಾನುಭವಿಗಳು ಹೆಚ್ಚು ಸೇರ್ಪಡೆಯಾಗುವ ಸಾಧ್ಯತೆಗಳು ಇವೆ. ಹೀಗಾಗಿ ಬಿಪಿಎಲ್ ಕಾರ್ಡ್‌ಗಳನ್ನು ವಿಭಜಿಸಲು ಅವಕಾಶ ನೀಡದಂತೆ ಹಣಕಾಸು ಇಲಾಖೆ ಒತ್ತಾಯಿಸಿದೆ ಎಂದು TNIE ವರದಿ ಮಾಡಿದೆ.

ಹಣಕಾಸು ಇಲಾಖೆ ಹೇಳುವ ಪ್ರಕಾರ, ಬಡತನ ರೇಖೆಗಿಂತ ಕೆಳಗಿನವರಿಂದ ಬಿಪಿಎಲ್ ಪಡಿತರ ಯೋಜನೆ ದುರ್ಬಳಕೆ ಆಗುವುದು ತಪ್ಪಲಿದೆ. ಅಂದರೆ ಒಂದೇ ಕುಟುಂಬದವರು ಬೇರ್ಪಟ್ಟು ಹೊಸ ಕಾರ್ಡ್ ಪಡೆಯುವುದನ್ನು ತಪ್ಪಿಸಲು ಸರ್ಕಾರ ಹೀಗೆ ನಿರ್ಧರಿಸಿದೆ ಎನ್ನಲಾಗಿದೆ. ಸದ್ಯ ರಾಜ್ಯದಲ್ಲಿ 1.2 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದ, ಒಟ್ಟು 4.4 ಕೋಟಿ ಫಲಾನುಭವಿಗಳು ಇದರ ವ್ಯಾಪ್ತಿಗೆ ಬರುತ್ತಾರೆ.
1.15 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಯ ಲಾಭ
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು 1.15 ಕೋಟಿ ಕುಟುಂಬಗಳು ಪಡೆಯುತ್ತಿವೆ. 'ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ. ಗೃಹ ಲಕ್ಷ್ಮಿ' ಅಡಿಯಲ್ಲಿ, ಕುಟುಂಬದ ಮುಖ್ಯಸ್ಥರಿಗೆ 2,000 ರೂ. ನೀಡಲಾಗುತ್ತದೆ. ಅಲ್ಲದೇ ಅನ್ನ ಭಾಗ್ಯದಡಿ ಹೆಚ್ಚುವರಿ 5 ಕೆಜಿ ಅಕ್ಕಿ/ ಬದಲಾಗಿ ಹಣ ಅರ್ಹರಿಗೆ ವಿತರಿಸಲಾಗುತ್ತಿದೆ.

ಈ ಐದು ಗ್ಯಾರೆಂಟಿ ಯೋಜನೆಗಳಿಂದ ಸರ್ಕಾರದಿಂದ ವಾರ್ಷಿಕವಾಗಿ 55,000 ಕೋಟಿ ರೂ. ಖರ್ಚಾಗಲಿದೆ. ಈ ವರ್ಷ ಜೂನ್ ಮತ್ತು ಆಗಸ್ಟ್ ನಡುವೆ ಯೋಜನೆ ಪರಿಚಯಿಸಿದಾಗಿನಿಂದ 2023-24 ರ ಆರ್ಥಿಕ ವರ್ಷದ ಉಳಿದ ತಿಂಗಳುಗಳಿಗೆ 36,000 ಕೋಟಿ ರೂ ವಿನಿಯೋಗಿಸಲಾಗುವುದು ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.
ಒಂದೇ ಕುಟುಂಬಕ್ಕೆ ಹೊಸ ಕಾರ್ಡ್ ನೀಡದಂತೆ ಸೂಚನೆ
ರಾಜ್ಯದಲ್ಲಿ 1.15 ಕೋಟಿ ಕುಟುಂಬಗಳು ಅಂದರೆ ಜನಸಂಖ್ಯೆ ಶೇಕಡಾ 70ಕ್ಕಿಂತಲೂ ಹೆಚ್ಚು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿವೆ. ಆದರೆ ಈ ಸೌಲಭ್ಯಗಳ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಇವೆ. ಕೆಲವರು ಒಂದೇ ಕುಟುಂಬದಲ್ಲಿದ್ದು ಹೊಸ ಪಡಿತರ ಚೀಟಿ ಪಡೆಯಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊರೆ ಉಂಟು ಮಾಡಲಿದೆ ಎಂದು ಹಣಕಾಸು ಇಲಾಖೆ ಹೇಳಿದೆ.
ಪ್ರಸ್ತುತದಲ್ಲಿ ಪಡಿತರ ಕಾರ್ಡ್‌ನಲ್ಲಿ ಈಗಾಗಲೇ ಹೆಸರಿರುವ ಕುಟುಂಬದ ಸದಸ್ಯರಿಗೆ ಹೊಸ ಕಾರ್ಡ್‌ಗಳನ್ನು ನೀಡದಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ 2,000 ರೂ.ಆರ್ಥಿಕ ಸಹಾಯ ಪಡೆಯುವವರು ಆ ಹಣವನ್ನು ಜಿಎಸ್‌ಟಿ ವ್ಯಾಪ್ತಿಗೆ ಬರುವ ವಸ್ತುಗಳ ಖರೀದಿಗೆ ಬಳಸುವುದರಿಂದ ಆರ್ಥಿಕಗೆ ಸಹಕಾರ ದೊರೆತಂತಾಗುತ್ತದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಜನರ ಕೊಳ್ಳುವ ಸಾಮರ್ಥ್ಯ ಸಹ ಸುಧಾರಿಸುತ್ತದೆ.
ಬಾಕಿ ಉಳಿದ ಅರ್ಜಿ ಇತ್ಯರ್ಥಕ್ಕೆ ಸೂಚನೆ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೆ.29ರಂದು ಸರ್ಕಾರಿ ಆದೇಶ ಹೊರಡಿಸಿದೆ. ಅದರ ಮೂಲಕ ಹೊಸ ಪಡಿತರ ಚೀಟಿಗಾಗಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಮಾರ್ಚ್ 2023 ರಿಂದ ಬಾಕಿ ಉಳಿದ ಬಾಕಿ ಉಳಿದ 2.96 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.












Click it and Unblock the Notifications